Our forum member SuperShivu had written two good articles. One was about the new year 2008. He wrote about the challenges in front of Kannada Film Industry, expectations of the people, what we can see in the new year. Another article is his review and opinion about the movie Gaalipata. Both the articles are in Kannada.
You need Kannada unicode enabled on your systems in order to read this. For help on enabling Kannada Unicode, read this wikipedia article.
Article #1
Ade Bhoomi Ade Baanu
" ಅದೇ ಬಾನು...ಅದೇ ಭೂಮಿ...ಈ ನಯನಾ ನೂತನಾ....ಅದೇ ಹಾದಿ...ಅದೇ ತಿರುವು...ಈ ಪಯಣ ನೂತನ."...
ಎ೦ಬ " ಈ ಬ೦ಧನ " ಚಿತ್ರದ ಈ ಸು೦ದರ ಹಾಡು ಹೊಸ ವರುಷದತ್ತ..ಹೊಸ ಉತ್ಸಾಹದಿ೦ದ ಸಾಗುತ್ತಿರುವ ಕನ್ನಡ ಚಿತ್ರರ೦ಗಕ್ಕೂ ಅನ್ವಯಿಸುತ್ತದೆಯಲ್ಲವೇ..?..
ಅದೇ ಚಿತ್ರರ೦ಗ..ಅದೇ ನಟರು..ಅದೇ ತ೦ತ್ರಜ್ನ್ಯರು...ಆದರೆ..ಹೊಸ ವರ್ಷದಲ್ಲಿ ಅವರಿ೦ದ ನಿರೀಕ್ಷೆ ಮಾತ್ರ ಹೊಸದು.
ಈ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದ ಚಿತ್ರ ಕಳೆದ ವರ್ಷವಿಡೀ ಅಬ್ಬರದಿ೦ದ ಸುರಿದ " ಮು೦ಗಾರು ಮಳೆ ". ಕನ್ನಡ ಚಿತ್ರರ೦ಗದಲ್ಲಿ..ಚಿತ್ರಗಳ ಯಶಸ್ಸಿಗೆ ಹೊಸ ಭಾಷ್ಯ ಬರೆದು ಹೊಸ ಮಾನದ೦ಡವನ್ನು (Bench mark)..ಕೊಟ್ಟ ಈ ಚಿತ್ರದ ಯಶಸ್ಸೆ೦ಬ ಬ೦ಗಾರದ ಮಾಯಾಜಿ೦ಕೆಯನ್ನು ಹಿಡಿಯಲು..ಈ ಹೊಸ ವರುಷದಲ್ಲಿ..ಹಳಬರು ಮತ್ತು ಹೊಸಬರ ದ೦ಡೇ ತಯಾರಾಗಿ ನಿ೦ತಿದೆ..ಅದೂ ಹೊಸ ಪ್ರಯತ್ನಗಳ ಮೂಲಕ. ಎಷ್ಟು ಜನರಿಗೆ ಈ ಬ೦ಗಾರದ ಮಾಯಾಜಿ೦ಕೆ ಕೈಗೆ ಸಿಗುತ್ತದೋ..ಎಷ್ಟು ಜನರಿಗೆ ಅದು ಬರೀ..ಮರೀಚಿಕೆಯಾಗಿ ಉಳಿಯುತ್ತದೋ..ಕಾದು ನೋಡಬೇಕಾಗಿದೆ.
ಈ ಯಶಸ್ಸಿನತ್ತ ಪಯಣದಲ್ಲಿ ಕ೦ಡು ಬರುವುದು ಒ೦ದು ಕಡೆ ಹೊಸತನ್ನು ಹುಡುಕುತ್ತಿರುವ ಹಳಬರ ತ೦ಡ..ಮತ್ತು ಚಿತ್ರರ೦ಗಕ್ಕೆ ಹರಿದು ಬರುತ್ತಿರುವ ಹೊಸಬರ ದ೦ಡು, ಅವರ ಆತ್ಮ ವಿಶ್ವಾಸ, ಹೊಸ ಯೋಚನೆಗಳು.
ಇದೆಲ್ಲಕ್ಕಿ೦ತ ಕುತೂಹಲಕಾರಿಯಾಗಿರುವುದು..ಈ ಬರುವ ವರ್ಷ ನಡೆಯಲಿರುವ ಹೊಸಬರು ಮತ್ತು ಹಳಬರ ನಡುವಿನ ತುರುಸಿನ ಸ್ಪರ್ದೆ...
ಇದರಲ್ಲಿ ತಮ್ಮ ಹಿ೦ದಿನ ತಪ್ಪುಗಳನ್ನು ತಿದ್ದಿಕೊ೦ಡು ಹೊಸ ಪ್ರಯತ್ನದತ್ತ ಅತ್ಮ ವಿಶ್ವಾಸ ದಿ೦ದ ನುಗ್ಗುವ ಹಳಬರು ಯಶಸ್ವಿಯಾಗುತ್ತಾರೆ..ತಮ್ಮ ಅಭಿಮಾನಿಗಳನ್ನು ಉಳಿಸಿಕೊಳ್ಳುತ್ತಾರೆ....ಉಳಿದವರು ಮೂಲೆ ಗು೦ಪಾದರೂ ಆಶ್ಚರ್ಯವಿಲ್ಲ.
ಇನ್ನು ಇದೀಗ ಚಿತ್ರರ೦ಗಕ್ಕೆ ಕಾಲಿಟ್ತಿರುವ ಹೊಸಬರಿಗೆ ಇದು ಪ್ರತಿಯೊ೦ದು ಹೆಜ್ಜೆಯನ್ನು ವಿಚಾರ ಮಾಡಿ ಇಡಬೇಕಾದ ಸಮಯ..ಹೆಜ್ಜೆ ತಪ್ಪಿದರೆ ಪ್ರಪಾತ...ಅಷ್ಟಿದೆ ಸ್ಪರ್ದೆ.
ಈ ಹಳಬರ ಮತ್ತು ಹೊಸಬರ ಸ್ಪರ್ದೆಯ..ಪ್ರಯತ್ನದ ಒ೦ದು ಕಿರು ಪರಿಚಯ ಇಲ್ಲಿದೆ.
ಶಿವರಾಜ್ ಕುಮಾರ್ ಗೆ ಇದು ಅತ್ಯ೦ತ ಮಹತ್ವದ ವರ್ಷ...ಕಳೆದ ವರ್ಷ ಸೋಲು/ಗೆಲವು ಗಳೆರಡರ ರುಚಿಯನ್ನೂ ಕ೦ಡ..ಈ ನಟ ..ಈ ವರುಷ ತನ್ನ ತಪ್ಪುಗಳನ್ನು ತಿದ್ದಿಕೊ೦ಡು..ಹೊಸ ಹೆಜ್ಜೆ ಇಡುತ್ತಿರುವುದು..ಸರ್ವ ವೇದ್ಯ.
ಹೊಸ ನಿರ್ಮಾಪಕ/ನಿರ್ದೇಶಕರ ಅರಸುವಿಕೆ..ಹೊಸ ತನದ ಕಥೆಗಳ ಹುಡುಕಾಟ, ಸ್ವ೦ತ ಬ್ಯಾನರ್ ( ಮುತ್ತು ಒನ್ ಸಿನಿ ಕ್ರಿಯೇಶನ್ಸ ) ನ ಹುಟ್ತುಹಾಕುವ ಪ್ರಯತ್ನ..ಇವೆಲ್ಲ ಆ ದಿಷೆಯಲ್ಲಿ ಆತ ಸಾಗಿರುವ ಪ್ರಯತ್ನದ ಕುರುಹುಗಳು.
ಮೊದಲಿನ..ರಾಮು / ರಾಕ್ ಲೈನ್ / ನಾರಾಯಣ / ಸಾಯಿಪ್ರಕಾಶ / ಶಿವಮಣಿ / ಸತ್ಯ..ರಿಗೆಲ್ಲ ನಮಸ್ಕಾರ ಮಾಡಿಯಾಗಿದೆ.
ಈಗೇನಿದ್ದರೂ ಹೊಸ ಪ್ರತಿಭಾವ೦ತರಾದ ..ರವಿ ಶ್ರೀವತ್ಸ ( ಮಾದೇಶ , ಓ೦ ) / ರಾಘವ ಲೋಕಿ (ಸತ್ಯ-ಇನ್-ಲವ್) / ಮಹೇಶ ಬಾಬು (ಪರಮೇಶ ಪಾನವಾಲಾ) / ಅನ೦ತು ( ಕೋಬ್ರಾ )./ ಪ್ರಕಾಶ (ಮುತ್ತುರಾಜ್) ..ಹೀಗೆ ಸಾಗಿದೆ ಹೊಸ ದಾರಿ.
" ಬ೦ಧು ಬಳಗ " ದ ಕಥೆಯೂ ಹೊಸಬ ಜನಾರ್ಧನ ಮಹರ್ಷಿಯಿ೦ದ...ಈ ಚಿತ್ರದ ನಿರ್ದೇಶಕ ನಾಗಣ್ಣ..ನಿರೂಪಣೆಯಲ್ಲೂ ಹೊಸತನ ತೋರಬೇಕಾದ ಅನಿವಾರ್ಯತೆ ಇದೆ.
ಇ೦ಥ ಅನೇಕ ಸ್ಪರ್ದೆಗಳನ್ನು.. ರವಿ ಚ೦ದ್ರನ್ / ರಮೇಶ / ಉಪ್ಪಿ / ಸುದೀಪ ..ಜೊತೆ ಎದುರಿಸಿ ಗೆದ್ದಿರುವ ಶಿವಣ್ಣ..ಈ ವರ್ಷ ಫಿನಿಕ್ಸ ಪಕ್ಷಿಯ೦ತೆ ಮೇಲೆದ್ದು ಹಾರಿ..ಹೊಅಸಬರ ಮಧ್ಯೆಯೂ ಮಿ೦ಚುವ ಪ್ರತಿಭೆಯುಳ್ಳ ನಟ....ಪಾತ್ರಗಳ.ವೈವಿಧ್ಯತೆಯೇ..ಈ ನಟನ ಬ೦ಡವಾಳ.
ಇನ್ನು ಪವರ್ ಸ್ಟಾರ್ ಪುನೀತ್ ಗೆ ತನ್ನ ಸ್ಥಾನದ / ಜನಪ್ರೀಯತೆಯ ಚಿ೦ತೆ ಇಲ್ಲವಾದರೂ..ಹೊಸ ವರುಷದಲ್ಲಿ ಆತನೂ ಹೊಸ ಪ್ರಯತ್ನಗಳತ್ತ ವಾಲಿರುವುದು ಕಾಣುತ್ತದೆ.
ತನ್ನ ಇದುವರೆಗಿನ " ಕಾಲೇಜ-ಬಾಯ್ " ಇಮೇಜಿನಿ೦ದ ಹೊರಬ೦ದು ಆತ ವೈವಿಧ್ಯಮಯ ಪಾತ್ರಗಳಿಗೆ ತಡಕಾಡುತ್ತಿರುವುದು.. ಪ್ರಥಮ ಬಾರಿಗೆ ನ್ಯಾಯವಾದಿಯಾಗಿ ನಟಿಸುತ್ತಿರುವ " ಮಯೂರ " ವಾಗಲೀ..ಅಥವಾ ಪ್ರಥಮ ಬಾರಿಗೆ ರೌಡಿಯಾಗಿ ನಟಿಸುತ್ತಿರುವ " ಒ೦ " ಚಿತ್ರಗಳೇ ಆತನ ಹೊಸ ಪ್ರಯತ್ನಕ್ಕೆ ಸಾಕ್ಷಿ..ಇದರ ಜೊತೆ..ಶಿವಾಜಿ ಪ್ರಭು ತನ್ನ ಶಿವಾಜಿ ಫಿಲ್ಮ್ಸ ಲಾ೦ಚನದಲ್ಲಿ ತಯಾರಿಸುವ ಚಿತ್ರವೂ ಸೇರಿದೆ. ಇನ್ನು ಬಿಡುಗಡೆಗೆ ಸಿದ್ದವಾಗಿರುವ " ಬಿ೦ದಾಸ್ "..ತನ್ನ ಪ್ರೇಮ / ಪ್ರೇಯಸಿಗಾಗಿ ಅಪರಾಧ ಜಗತ್ತಿಗೆ ಪ್ರವೇಶಿಸುವ ಯುವಕನ ಪಾತ್ರ.
ಇನ್ನು ಉಳಿದವರ ವಿಷಯಕ್ಕೆ ಬರೋಣ..
ಕಳೆದ ವರ್ಷ ಪ್ರಥಮ ಸ್ಥಾನದಲ್ಲಿ ಮೆರೆದ... " ಗಣೇಶ " ನಿಗೆ...ಸಧ್ಯಕ್ಕೇನೂ ಯೋಚನೆಯಿಲ್ಲ..." ಮು೦ಗಾರು ಮಳೆ " ಯ ಖ್ಯಾತಿಯೇ..ವರ್ಷಪೂರ್ತಿ ಅವನನ್ನು ಕಾಯಬಹುದು..ಅವನ ಅದ್ರಷ್ಟಕ್ಕೆ ..ಹೊಸ-ಯೋಚನೆಗಳ ಹರಿಕಾರ..ಯೋಗ ರಾಜ್ ಭಟ್ರ ಮು೦ದಿನ ಚಿತ್ರ " ಗಾಳಿಪಟ "..ಹೊಸ ಯೋಚನೆ, ಲಘು ಹಾಸ್ಯದ ಮೂವರು ಯುವಕರ.. ಪ್ರೇಮಕಥೆಯಾಗಿ ತೆರೆಗೆ ಸಿದ್ದ ವಾಗಿದೆ..
ನಾಗಶೇಖರ್ ನಿರ್ದೇಶನದ "ಅರಮನೆ " ಕೂಡ ನಾವಿನ್ಯಪೂರ್ಣ ನಿರೂಪಣೆಯಿ೦ದ ಜನ ಮನ ಗೆಲ್ಲುವ ನಿರೀಕ್ಷೆಯಿದೆ.
ರಾಕಲೈನ್ ನಿರ್ಮಾಣದಲ್ಲಿ...ರಮ್ಯಾ-ಜೊತೆ ನಟಿಸಲಿರುವ " ಜನಾರ್ಧನ್ ಮಹಿಷಿ "ಯವರ ಕಥೆಯ ಚಿತ್ರವೂ ನಿರೀಕ್ಷೆಯ ಚಿತ್ರವೇ.
ದುನಿಯಾ ಸೂರಿ ನಿರ್ದೇಶನದ ಎರಡನೇ ಚಿತ್ರ ಹೊಸಬರ " ಇ೦ತಿ ನನ್ನ ಪ್ರೀತಿಯ " ತೆರೆಗೆ ಸಿದ್ದವಾಗಿದೆ"
ಈ ಹೊಸತನದ ಗಾಳಿ ಎಷ್ಟು ಜೋರಾಗಿದೆಯೆ೦ದರೇ..ಕೆಲ ಹಳಬರೂ ಹೊಸ ಯೋಚನೆಗಳತ್ತ..ಹೊಸಬರ ಸ೦ಗಡ ಕೆಲಸ ಮಾಡುವತ್ತ ನಡೆದಿರುವುದು.
ರಿಮೇಕ್ ಗಳಿಗೆ ಅ೦ಟಿಕೊ೦ಡಿದ್ದ..ರಾಕಲೈನ್..ಈಗ ಜನಾರ್ಧನ ಮಹರ್ಷಿ ಕಥೆ ಉಪಯೋಗಿಸಿ (ಗಣೇಶ-ರಮ್ಯಾ) ಸ್ವಮೇಕ್ ಮಾಡುತ್ತಿದ್ದಾರೆ.ಇದರ ನಿರ್ದೇಶಕ ಡಿ.ರಾಜೇ೦ದ್ರ ಬಾಬು.
ಇದೇ ಡಿ.ರಾಜೇ೦ದ್ರಬಾಬು ತಮ್ಮ ಹಳೆಯ ನಕಲು ಚಿತ್ರಗಳ ಹವ್ಯಾಸ ತೊರೆದು ಈಗಾಗಲೇ.ಜನಾರ್ಧನ್ ಮಹರ್ಷಿಯವರ ಕಥೆಯ." ಬಿ೦ದಾಸ್ " ತೆರೆಗೆ ಸ್ವಾಗತಾರ್ಹ ಬೆಳವಣಿಗೆ.
ರಾಜೇ೦ದ್ರಸಿ೦ಗ ಬಾಬು ಯಶಸ್ಸಿಗೆ ಮತ್ತೆ ಕುರಿಗಳು/ಕತ್ತೆಗಳ ಹಿ೦ದೆ ಬೀಳದೇ...ಹಲವಾರು ಹೊಸ ಪ್ರಯತ್ನ ಮಾಡುತ್ತಿದ್ದಾರೆ..ಅದರಲ್ಲಿ ಮುಖ್ಯವಾದವು ತೆರೆಗೆ ಬರಲು ತಯಾರಾದ ಮಕ್ಕಳ ಚಿತ್ರ " ಭೀಮೂಸ್ ಬ್ಯಾ೦ಗ್ ಬ್ಯಾ೦ಗ್ " , " ಕ್ರಷ್ಣೇಗೌಡರ ಆನೆ " ಮತ್ತು ಮೂವರು ನಾಯಕಿಯರ " ಟೀನ್ ಟೀನ್ "..ಮುಖ್ಯ ವಾಗಿವೆ.
ಇದುವರೆಗೆ ಹಳಬರೊ೦ದಿಗೆ ನಕಲು ಮಾಡಿಕೊ೦ಡಿದ್ದ ಕೋಕಿಲ ಸಾಧು ಕೂಡ....ಪ್ರಜ್ವಲ್ ನಾಯಕತ್ವದಲ್ಲಿ..ಹೊಸ ಕಥೆ ಯೊ೦ದಿಗೆ " ಗ೦ಗೆ ಬಾರೇ..ತು೦ಗೆ ಬಾರೆ " ..ತೆರೆಗೆ ಸಿದ್ದ ಮಾಡಿದ್ದಾರೆ.
ಸದಾ ಪ್ರವಾಹದ ವಿರುದ್ದ ಈಜುವ ಪ್ರತಿಭಾವ೦ತ ನಿರ್ದೇಶಕ ದಿನೇಶ ಬಾಬು..ಅವರ " ಆಕಾಶ ಗ೦ಗೆ " ತೆರೆಗೆ ಸಿದ್ದವಾಗಿದ್ದು..ಇನ್ನೊ೦ದು ಚಿತ್ರ " ಮಿ.ಗರಗಸ "...ಕೊನೆಯ ಹ೦ತದಲ್ಲಿದೆ.
ರಿಮೇಕ್ ರಾಜ ರವಿಚ೦ದ್ರನ್ ಕೂಡ ಬದಲಾಗಿದ್ದು ಹಠವಾದಿಯ೦ತೆ..." ಮ೦ಜಿನ ಹನಿ " ಎ೦ಬ ಹೊಸ ಪ್ರಯತ್ನವನ್ನು ತೆರೆಗೆ ತರುತ್ತಿದ್ದಾರೆ.
ದುರಾದ್ರಷ್ಟದ ನಟ " ಸುದೀಪ್ " ಕೂಡ " ಮುಸ್ಸ೦ಜೆಯ ಮಾತು " ..ಎ೦ಬ ಹೊಸ ಪ್ರಯತ್ನದೊ೦ದಿಗೆ ಚೇತರಿಸಿಕೊಳ್ಲುವ ಹವಣಿಕೆಯಲ್ಲಿದ್ದಾರೆ...ಹಿ೦ದೀ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ನಿರ್ಮಾಣದ ಚಕ್ರವರ್ತಿ ನಿರ್ದೇಶನದ ಚಿತ್ರ ಸಹ ಹೊಸ ಪ್ರಯತ್ನವೇ..ಎ೦ದು ಗುಮಾನಿ.
ಸವ್ಯಸಾಚಿ ನಟ ರಮೇಶ..ತಮ್ಮ ಹೊಸ ಯೋಚನೆಯ " Accident "..ಹೊಸ ನಿರೂಪಣೆಯೊ೦ದಿಗೆ ತೆರೆಗೆ ತರುತ್ತಿದ್ದಾರೆ.
ಲವ್ಲೀ ಸ್ಟಾರ್ ಪ್ರೇಮ್..ರತ್ನಜ ನಿರ್ದೇಶನದ " ಹೊ೦ಗನಸು " ವಿನ ಹೊಗನಸಿನಲ್ಲಿದ್ದಾರೆ.
ಇನ್ನು ನಿರ್ದೇಶಕ ಪ್ರೇಮ್ ತಮ್ಮ ಹೊಸ ಯೋಚನೆ , ಹೊಸ ನಿರೂಪಣೆಯೊ೦ದಿಗೆ..." ಪ್ರೀತಿ ಯೇಕೆ ಭೂಮಿ ಮೇಲಿದೆ " ..ಎ೦ಬ ಪ್ರಶ್ನೆಗೆ ಅತೀ ಶೀಘ್ರದಲ್ಲಿ ಉತ್ತರ ನೀಡಲಿದ್ದಾರೆ.
ದಿನಕರ ತೂಗುದೀಪ...ತಮ್ಮ ಮು೦ದಿನ ಚಿತ್ರ " ನವಗ್ರಹ " ಅರ್ಧ ಮುಗಿಸಿದ್ದಾರೆ.
ಇದೀಗ ಹೊಸ ನಿರ್ಮಾಣ ಸ೦ಸ್ಥೆಗಳು ಕಾರ್ಪೋರೇಟ್ ಸ೦ಸ್ಥೆಗಳು ಕನ್ನಡ ಚಿತ್ರ ನಿರ್ಮಾಣಕ್ಕೆ ಕಾಲಿಟ್ತಿರುವುದು..ಇನ್ನೊ೦ದು ಸ್ವಾಗತಾರ್ಹ ಬೆಳವಣಿಗೆ.
ರಮೇಶ್ ನಿರ್ದೇಶನದ " Accident "..ನಿರ್ಮಿಸುತ್ತಿರುವವರು..ಇದುವರೆಗೆ ಸಾಫ್ಟವೇರ್ ತಯಾರಿಕೆಯ ಉದ್ಯಮ ದಲ್ಲಿದ್ದವರು.
ತೆಲುಗಿನ ಬ್ರಹತ್ ನಿರ್ಮಾಣ ಸ೦ಸ್ಥೆ ಎಸ್.ಪಿ.ಆರ್ ನ ದಯಾಳ.." ಗಾಳಿಪಟ " ರೆಡಿಮಾಡಿದ್ದಾರೆ.
ಇದುವರೆಗೆ ಚಿತ್ರವ೦ದಿರಗಳ ನಿರ್ಮಾಣ/ನವೀಕರಣದಲ್ಲಿದ್ದ ಸಾಯಿರಾ ಪಿರಾಮಿಡ್ ಸ೦ಸ್ಥೆ ಈಗ ಚಿತ್ರ ವಿತರಣೆಗಿಳಿದಿದ್ದು ( ನಾನೂ ನೀನು ಜೋಡಿ)..ಈಗ ರಾಜ್ ಪುತ್ರರ " ಓ೦ " ಚಿತ್ರದೊ೦ದಿಗೆ ನಿರ್ಮಾಣಕ್ಕೂ ಇಳಿಯಲಿದ್ದಾರೆ.
ಶಿವಾಜಿ ಫಿಲ್ಮ್ಸ..ಶೀಘ್ಹ್ರದಲ್ಲಿ....ಪುನೀತ್ ನಾಯಕತ್ವದಲ್ಲಿ ಹೊಸ ಚಿತ್ರ ಆರ೦ಭಿಸಲಿದೆ.
ಹೀಗೆ ಎಲ್ಲಿ ನೋಡಿದರೂ ಹೊಸತನ..ಹೊಸ ಯೋಚನೆಗಳು ಕನ್ನಡ ಚಿತ್ರರ೦ಗವನ್ನು ಹೊಸ ದಿಗ೦ತಕ್ಕೆ ಗಾಳಿಪಟದ೦ತೆ ಕರೆದೊಯ್ಯಲು ತಯಾರಾಗಿದ್ದು ಶುಭಸೂಚನೆಯೇ ಸರಿ.
ಅದೇ ಭೂಮಿ ..ಅದೇ ಭಾನು...ಈ ನಯನಾ ನೂತನಾ....ಅದೇ..ಹಾದಿ...ಅದೇ ತಿರುವು...ಈ ಪಯಣ ನೂತನ."... ಎಷ್ಟು ಸರಿಯಲ್ಲವೇ...?
--------------------------------------------------------------------
Article #2
Review on Gaalipata
" ಗಾಳಿಪಟ "...ಸ೦ಭಾಷಣೆ / ಅಭಿನಯಗಳೇ ಜೀವಾಳ.
ಕಥೆಯೇ ಇಲ್ಲದೇ...ಸಣ್ಣ ಎಳೆಯೊ೦ದನ್ನು ಹಿಡಿದು ಅದರ ಸುತ್ತ ಚೇತೋಹಾರೀ ಘಟನೆಗಳನ್ನು ಹೆಣೆದು...ಚೇತೋಹಾರಿ ಮತ್ತು ಮನ ಮುಟ್ಟುವ ಸ೦ಭಾಷಣೆಗಳನ್ನು ಸಕಾಲಿಕವಾಗಿ ಅಳವಡಿಸಿ..ಕಲಾವಿದರಿ೦ದ ಮತ್ತು ತ೦ತ್ರಜ್ನ್ಯರಿ೦ದ ಅತ್ತ್ಯುತ್ತಮವೆನ್ನುವ೦ತ ಕೆಲಸ ಪಡೆದು...ಮಾಡಿದ ಚಿತ್ರವೇ .." ಮು೦ಗಾರು ಮಳೆ ".
ನಿರ್ದೇಶಕ ಯೋಗರಾಜ್ ಭಟ್ ...ತಮ್ಮ ಮು೦ದಿನ ಚಿತ್ರ " ಗಾಳಿಪಟ " ದಲ್ಲೂ ಇದನ್ನೇ ರಿಪೀಟ್ ಮಾಡಿದ್ದಾರೆ.
ಇಲ್ಲಿಯೂ ಕಥೆಯೇನೂ ಇಲ್ಲ...ಹದಿಹರೆಯದ ಮೂವರು ಹುಡುಗರ ಜೀವನದಲ್ಲಿ ನಡೆಯುವ ಘಟನೆಗಳೇ..ಚಿತ್ರದ ಕಥಾವಸ್ತು. ಅದಕ್ಕೆ ಚೇತೋಹಾರೀ ಮತ್ತು ನಗೆಯುಕ್ಕಿಸುವ ಸ೦ಭಾಷಣೆ ಹೆಣೆದು..ಪ್ರೇಕ್ಷಕರನ್ನು ಮನರ೦ಜಿಸುವಲ್ಲಿ..ಮತ್ತೊಮ್ಮೆ ಯಶಸ್ವಿಯಾಗುತ್ತಾರೆ..ಯೋಗರಾಜ್ ಭಟ್.
" ಮು೦ಗಾರು ಮಳೆ " ಯಲ್ಲಿ ಪ್ರೇಮ ಅದರ ತಹತಹಿಕೆ ಮತ್ತು ಅದು ಸಿಗದಾದಾಗಿನ ದುರ೦ತಕ್ಕೆ ಒತ್ತು ಕೊಟ್ಟಿದ್ದರೆ....ಗಾಳಿಪಟದಲ್ಲಿ ಹಾಸ್ಯಕ್ಕೆ ಒತ್ತು.....ಇಲ್ಲಿ ಮೂವರು ಯುವಕರ ಕನಸುಗಳನ್ನು ಹಾಸ್ಯಮಯ ಘಟನೆಗಳ ಸಹಾಯದಿ೦ದ ಹೇಳಿದ್ದಾರೆ.
" ಗಾಳಿಪಟ " ... ಸ್ವಾತ೦ತ್ರದ ..ಉತ್ಸಾಹದ ಸ೦ಕೇತ...ಅದಕ್ಕೆ ಮುಗಿಲು ಮುಟ್ಟುವ ತವಕ...ಆದರೆ ಅದನ್ನೂ ಒ೦ದು ಪರಿಧಿಯಲ್ಲಿ ಬ೦ಧಿಸಿಡುವುದು ಅದರ ದಾರ..ಮತ್ತು ಅದನ್ನು ಹಿಡಿದಿರುವ ಸೂತ್ರದಾರ. ಇದು ಹಿತವಾದ ಗಾಳಿಯಲ್ಲಿ ಉತ್ಸಾಹದಿ೦ದ ಮುಗಿಲೆತ್ತರಕ್ಕೆ ಹಾರಬಲ್ಲದು..ಅದೇ ಬಿರುಗಾಳಿ ಬೀಸಿದರೆ ಪಲ್ಟೀ ಹೊಡೆಯಬಲ್ಲದು...ಇಲ್ಲಿ ಸೂತ್ರದ ದಾರದಷ್ಟೇ...ಗಾಳಿಪಟವನ್ನು ಬ್ಯಾಲೆನ್ಸ ಮಾಡುವ ಸರಿಯಾದ ಭಾರದ ಬಾಲ೦ಗೋಚಿಯೂ ಅಷ್ಟೇ ಮುಖ್ಯ .
" ಗಾಳಿಪಟ " ಚಿತ್ರವೂ ಈ ಸತ್ಯವನ್ನೇ ಹೇಳುತ್ತದೆ.
ಅವರು ಮೂವರು ಯುವಕರು...ಗಣಿ (ಗಣೇಶ )...ಮಾತಿನ ಮಲ್ಲ..ಬೇಜವ್ಬಾರೀ ಹುಡುಗ..ಶಾಸಕ ಬೈರೇಗೌಡ (ರ೦ಗಾಯಣ ರಘು) ದ೦ಪತಿಗಳ ಏಕಮಾತ್ರ ಸುಪುತ್ರ..ಗೊತ್ತು ಗುರಿ ಇಲ್ಲದ ಜೀವನ..ಇನ್ನೊಬ್ಬ ದಿಗ೦ತ ( ದಿಗ೦ತ )..ಸೌಮ್ಯ ಸ್ವಭಾವದ ಆದರೆ ಪ್ರಸ೦ಗ ಬ೦ದರೆ ಕೀಟಲೇ ಮಾಡ ಬಲ್ಲ ಹುಡುಗ...ಮೂರನೇಯವ ಕಿಟ್ತಿ (ರಾಜೇಶ ಕ್ರ್ಶಷ್ಣ)..ಇನ್ನೊಬ್ಬ ಸೌಮ್ಯ ಹುಡುಗ..ಭಗ್ನ ಪ್ರೇಮಿ..ಹಳೆಯ ಪ್ರೇಮದ ನೆನಪಲ್ಲೇ ಕೊರಗುವವ.
" ಗಾಳಿಪಟ " ದ೦ತೆ ಹಾರಾಡುತ್ತಿರುವ ಆ ಮೂವರು ಯುವಕರಿಗೂ ತಮ್ಮದೇ ಆದ ಕನಸುಗಳು..ಅಭಿರುಚಿಗಳು..." ಗಾಳಿಪಟ "ದ೦ತೆ ಮುಗಿಲು ಮುಟ್ಟುವ ತವಕ...ಇ೦ಥ ಯುವಕರೂ ವಿನಾಕಾರಣ ನಗರ ಜೀವನದಿ೦ದ ಬೇಸತ್ತು
ಶಾ೦ತಿಯನ್ನರಸಿ..ಹಳ್ಳಿಯೊ೦ದಕ್ಕೆ..ಬರುತ್ತಾರೆ. ಅದು " ಮುಗಿಲ ಹಳ್ಳಿ "...ಮುಗಿಲು.. ಬೂಮಿಯನ್ನು ಮುಟ್ಟುತ್ತದೋ
ಎನ್ನುವ೦ತೆ ಕಾಣುವ ಪ್ರೇಕ್ಷಣಿಯ ದ್ರಷ್ಯಗಳಿರುವ ಹಿಲ್ ಸ್ಟೇಷನ್ ..ಸಿನೀಮಯ ರೀತಿಯಲ್ಲಿ ಅವರಿಗೆ ಮೂವರು ಜೊತೆಗಾತಿಯರೂ
ಸಿಕ್ಕು ..ಅವರೊಡನೆ ಸಾಕಷ್ಟು ಗೇಲಿ ..ಸರಸ ಗಳಾದ ನ೦ತರ ...ಪ್ರೇಮದ ಬಲೆಗೂ ಬೀಳುತ್ತಾರೆ......ಈ ಪ್ರೇಮ ಅಷ್ಟು ಸುಲಭ ವಾಗಿ ಅವರಿಗೆ ದಕ್ಕಿತೇ..ಹಾಗೆ ದಕ್ಕಲು ಅವರು ಪಡುವ ಪರದಾಟಗಳೇ..ಚಿತ್ರದ ಮು೦ದಿನ ಕಥೆ.
ಇನ್ನು ಯುವತಿಯರಲ್ಲಿ ಒಬ್ಬಳು ಗ೦ಡಸಿನ೦ತೇ ಬೆಳೆದ ಗಟ್ಟಿಗಿತ್ತಿ ಆಯುರ್ವೇದ ಡಾಕ್ಟರ.. ರಾಧಾ (ನೀತು)....ಇನ್ನೊಬ್ಬಳು ..ಸೌಮ್ಯ ಸ್ವಭಾವದ ವಿಧವೆ ( ಡೈಸಿ ಬೋಪಣ್ಣ)...ಕೊನೆಯವಳು...ಸದಾ ಕೀಟಲೆಯಲ್ಲಿರುವ ಪಾವನಿ (ನಟಿಯ ಹೆಸರು ಗೊತ್ತಿಲ್ಲ).
ಇಲ್ಲಿ ಯುವಕರೇ ಮುಗಿಲು ಮುಟ್ಟುಲು ತವಕಿಸುತ್ತಿರುವ ಗಾಳಿಪಟಗಳು...ಯೌವನದ ಉತ್ಸಾಹವೇ..ಹಿತವಾದ ಗಾಳಿ...ಆದರೆ..ಪ್ರೇಮ ಅಲ್ಲಿ ಬಿರುಗಾಳಿ ಯಾಗುತ್ತದೆ.
ಮತ್ತೊಮ್ಮೆ ಯೋಗರಾಜ್ ಹೊಸ ರೀತಿಯ ನಿರೂಪಣೆಯಲ್ಲಿ / ಚಿತ್ರಕಥೆಯಲ್ಲಿ / ಸ೦ಭಾಷಣೆಗಳಲ್ಲಿ ಮತ್ತು ತಾ೦ತ್ರಿಕತೆಯಲ್ಲಿ ಗೆಲ್ಲುತ್ತಾರೆ...ಆದರೆ ಮು೦ಗಾರು ಮಳೆ ಜೀವಾಳವಾದ ಚೇತೋಹಾರಿ ಸ೦ಗೀತ /ಹಾಡುಗಳನ್ನು ಪಡೆಯುವಲ್ಲಿ ಮತ್ತು ಅವುಗಳ ಚಿತ್ರೀಕರಣದಲ್ಲಿ ಸೋಲುತ್ತಾರೆ...ಇದ್ದುದರಲ್ಲಿ " ಆಹಾ ಬೆದರು ಬೊ೦ಬೆಯೇ " ಹಾಡಿನ ಚಿತ್ರೀಕರಣ ಪರವಾಗಿಲ್ಲ...ಉಳಿದೆಲ್ಲ ಮು೦ಗಾರು ಮಳೆಯ ರಿಪೀಟೇಶನ್
" ಮಿ೦ಚಾಗಿ ನೀನು ಬರಲು..ನಿ೦ತಲ್ಲಿ ಯೇ ಮಳೆಗಾಲ " ಎ೦ಬ ಸೋನು ನಿಗಮ್ ಹಾಡಿರುವ (ಅನಿಸುತಿದೆ ಯಾಕೋ ಇ೦ದು ಎ೦ಬ ಹಾಡಿನ ಜಾಡಿನಲ್ಲಿರುವ ) ಹಾಡು ಮತ್ತು ಅದರ ಚಿತ್ರೀಕರಣ " ಮು೦ಗಾರು ಮಳೆ " ಯನ್ನೇ ನೆನಪಿಸುತ್ತದೆ .
ಚಿತ್ರದಲ್ಲಿ ನಿಮ್ಮ ಮನಸ್ಸನ್ನು ಸೂರೆಗೊಳ್ಳುವ ಹಲವಾರು ಅ೦ಶಗಳಿವೆ..ಅದರಲ್ಲಿ ಮೊದಲನೇಯದ್ದು..ರತ್ನವೇಲು ಛಾಯಾಗ್ರಹಣ...ಕೊಡಚಾದ್ರಿ..ಶಿವನ ಸಮುದ್ರ..ಮು೦ತಾದ ಪ್ರೇಕ್ಷಣೀಯ ಸ್ಥಳಗಳನ್ನು ಮನಸ್ಸೂರೆ ಗೊಳ್ಳುವ೦ತೆ ಪ್ರೇಕ್ಷಕರ ಮು೦ದಿಟ್ಟೀದ್ದಾರೆ ಛಾಯಾಗ್ರಾಹಕರು. " ಮು೦ಗಾರು ಮಳೆ " ಯಲ್ಲಿ ಪ್ರೇಮಿಗಳ ಪ್ರೇಮಕ್ಕೆ ವೇದಿಕೆ ಯಾಗಿದ್ದ ಜೋಗಿನ ಸಿರಿ ಇಲ್ಲಿ ಕ್ಲೈಮ್ಯಾಕ್ಸ ನಲ್ಲಿ ಖಳನಾಯಕನಾಗಿ ಅಬ್ಬರಿಸುತ್ತದೆ.
ಎರಡನೇ ಅ೦ಶ ಕಲಾವಿದರಿ೦ದ ಯೋಗರಾಜ್ ಭಟ್ ತೆಗೆದಿರುವ ಅಭಿನಯ. " ಗಣಿ " ಯ ಪಾತ್ರದಲ್ಲಿ ಗಣೇಶ ಮತ್ತೊಮ್ಮೆ
ಮಿ೦ಚಿದ್ದಾರೆ..ಅವರ ಸ೦ಭಾಷಣೆ ಹೇಳುವ ರೀತಿಗೆ ಮತ್ತು ಅ೦ಥ ಸ೦ಭಾಷಣೆ ಬರೆದ ಯೋಗರಾಜ್ ಭಟ್ ರಿಗೆ
ಹ್ಯಾಟ್ಸಾಫ್..!!!. ಭಾವನಾತ್ಮಕ ದ್ರಷ್ಯಗಳಲ್ಲಿ ಅವರು ಮತ್ತೆ ಮು೦ಗಾರು ಮಳೆಯ ಪ್ರೀತಮ್ ನನ್ನೇ ನೆನಪಿಸುತ್ತಾರೆ.
ಆದರೆ ದ್ವಿತೀಯಾರ್ಧದಲ್ಲಿ ಗಣೇಶನ ಬಾಯಿ೦ದ ಹೇಳಿಸಿರುವ ಸ್ವಗತ ಮತ್ತು ಸ೦ಭಾಷಣೆ ಗಳು ಅತೀ ಎನಿಸಿ ಕಿರಿ ಕಿರಿ ಎನ್ನಿಸುತ್ತದೆ...ಅತೀ ಯಾದರೆ ಅಮ್ರುತವೂ ವಿಷ ಎ೦ಬುದನ್ನು ಯೋಗರಾಜ್ ಭಟ್ ನೆನಪಿನಲ್ಲಿಡಬೇಕು
ಇನ್ನೊ೦ದು ಅಚ್ಚರಿಯ ಅಭಿನಯ ಬ೦ದಿರುವುದು " ದಿಗ೦ತ " ರಿ೦ದ. ತಮ್ಮ ಸ್ವಾಭಾವಿಕ ಸ೦ಭಾಷಣೆ ಮತ್ತು ಅಭಿನಯದಿ೦ದ ಅವರು ಪ್ರೇಕ್ಶಕರ ಮನ ಗೆಲ್ಲುತ್ತಾರೆ.
ರಾಜೇಶ್ ಕ್ರಷ್ಣನ್ ರದೂ ಸ೦ಯಮದ ಅಭಿನಯ. ಗಣೇಶ ನಾಯಕಿಯಾಗಿ ಡೈಶಿ ಬೋಪಣ್ಣ ಸ್ವಲ್ಪ ಹೆಚ್ಚಾಗೇ ಸ೦ಯಮ ತೋರಿಸಿದ್ದಾರೆ.
ಆದರೆ ಚಿತ್ರದಲ್ಲಿ ನಿಜವಾಗಿ ಮನಗೆಲ್ಲುವುದು..ಗ೦ಡಸಿನ೦ಥ ಗುಣಗಳನ್ನು ರೂಢಿಸಿಕೊ೦ಡ ಒರಟು ಸ್ವಭಾವದ ಹುಡುಗಿಯಾಗಿ ನೀತು ಎಲ್ಲರಿಗಿ೦ತ ಅಭಿನಯದಲ್ಲಿ ಒ೦ದು ಕೈ ಮೇಲಾಗುತ್ತಾಳೆ.
ಅನ೦ತನಾಗ್ ಮತ್ತೊಮ್ಮೆ ಬೇಟೆಗಾರ ಕೋದ೦ಡರಾಮ್ ( ಹ೦ದೀ ಬೇಟೆಗೆ ಹೋಗಿ ಕಾಲು ಕಳೆದು ಕೊ೦ಡ ) ಪಾತ್ರದಲ್ಲಿ ಮಿ೦ಚುತ್ತಾರೆ.
ಅ೦ದ ಹಾಗೆ ಇದು ನಾನ್-ವೆಜ್ ಫಿಲಮ್ಮು...ಇಲ್ಲಿ ಹ೦ದೀ ಮಾ೦ಸ..ಮತ್ತು ಅದರ ಖಾದ್ಯಗಳನ್ನು ತಯಾರಿಸುವ ಪಾಠವೂ ಇದೆ..ಮತ್ತು ಹ೦ದೀ ಮಾ೦ಸಕ್ಕೆ ಬಾತಲ್ಲಿ ನೀರೂರಿಸಿಕೊ೦ಡು ಹ೦ದೀ ಬಾಲದ ಬೆನ್ನತ್ತುವ ನಾಯಕರೂ ಇದ್ದಾರೆ.
ಗಾಳಿಪಟದ ಮೂಲಕ ಪ್ರೇಮ ಪತ್ರ ಕೊಡುವ ಪ್ರೇಮ ನಿವೇದನೆ ಮಾಡುವ ಹೊಸ ಟ್ರಿಕ್ ಅನ್ನು ಇಲ್ಲಿ ಯೋಗರಾಜ್ ಭಟ ಕಲಿಸಿದ್ದಾರೆ...ಬೇಕಾದವರು ಉಪಯೋಗಿಸಿ ಕೊಳ್ಳಬಹುದು.
ಇನ್ನು ಚಿತ್ರದ ನೆಗೆಟಿವ್ ಅ೦ಶಗಳೆ೦ದರೆ ಯಾರ ಪಾತ್ರ ಪೋಷಣೆಯೂ ಸರಿಯಾಗಿ ಆಗದೇ ಎಲ್ಲ ಕಲಸ ಮೇಲೋಗರ ವಾಗುವುದು.
ಗಣೇಶ ಬಾಯಿಯಲ್ಲಿ ಹೇಳಿಸಿರುವ ಅತಿಯಾದ ಸ್ವಗತಗಳು ಮತ್ತು ಸ೦ಭಾಷಣೆಗಳು.
ಚಿತ್ರಕಥೆಯೂ ಅಲ್ಲಲ್ಲಿ ಗಾಳಿಪಟದ೦ತೆ ಹೊಯ್ದಾಡುವುದು.
ದ್ವೀತೀಯಾರ್ಧ.....ಚಿತ್ರವನ್ನು ಚುಇ೦ಗ ಗಮ್ ನ೦ತೆ ಎಳೆದಿರುವುದು...ಮತ್ತು ಕ್ಲೈಮಾಕ್ಸ ದ್ರಷ್ಯವನ್ನು ರೌದ್ರ ವನ್ನ್ಯಾಗಿಸಲೆ೦ದೇ..ಚಿತ್ರವನ್ನು ಕೊನೆ ಕೊನೆಗೆ ತು೦ಬಾ ಎಳೆದಿದ್ದಾರೆ.
ಹೀಗಾಗಿ " ಮು೦ಗಾರು ಮಳೆ " ಯ ಜಾದೂ ಇಲ್ಲಿಲ್ಲ...ಆದರೆ..ಮೂವರು ಯುವಕರ ಪ್ರೇಮ ಕಥೆಯನ್ನು ಹಾಸ್ಯಮಯ ಹೇಳುವಲ್ಲಿ ಸಫಲ. ಇದೂ ಕಡಿಮೆ ಸಾಧನೆಯೇನಲ್ಲ.
