ಪರಮೇಶ ಪಾನವಾಲ - ಆಕರ್ಷಿಸಲು ವಿಫಲ ! (ಆಡಿಯೋ ವಿಮರ್ಶೆ)

akumar's picture
Tagged:  

ತಾರಾಗಣ: ಶಿವರಾಜ್ ಕುಮಾರ್, ಸುರ್ವೀನ್ ಚಾವ್ಲಾ, ಸೋನು

ಸಂಗೀತ: ವಿ.ಹರಿಕೃಷ್ಣ

ಸಾಹಿತ್ಯ: ಕವಿರಾಜ್, ವಿ. ನಾಗೇಂದ್ರ ಪ್ರಸಾದ್

ನಿರ್ದೇಶನ: ಮಹೇಶ್ ಬಾಬು

ನಿರ್ಮಾಪಕ: ಆದಿತ್ಯ ಬಾಬು

ಆಡಿಯೋ ಸಂಸ್ಥೆ: ಅಶ್ವಿನಿ ಆಡಿಯೋ

 

 

ದಿಲ್ ಧಡಕ್ ಧಡಕ್ 

ಸೋನು ನಿಗಂ, ಅನುರಾಧಾ ಭಟ್

 

ಅಚ್ಚ ಕನ್ನಡತಿ ಮಂಗಳೂರಿನ ಅನುರಾಧಾ ಭಟ್ ಮೊದಲ ಬಾರಿಗೆ ಸೋನು ನಿಗಂ ಜೊತೆ ಹಾಡಿರುವ ಈ ಯುಗಳ ಗೀತೆ ಕೇಳಲು ಇಂಪಾಗಿದೆ. ಸೋನುವಿಗೆ ಸರಿಯಾಟಿಯಾಗಿ ಹಾಡಿದ್ದಾಳೆ ನಮ್ಮ ಕನ್ನಡತಿ ಅನುರಾಧಾ! ಈಕೆ ಈ ಟಿವಿ ಕನ್ನಡದ "ಎದೆ ತುಂಬಿ ಹಾಡುವೆನು" ಪ್ರತಿಭೆ! 8.5/10
ಮದ್ರಾಸು ಐಸಾ ಪರಮೇಶಾ ಶಂಕರ್ ಮಹದೇವನ್ Title track. ಪಾನವಾಲ ಪರಮೇಶಿಯನ್ನು ಹಾಡಿ ಹೊಗಳುವ ಗೀತೆ. ಮಾಸ್‍ಗೆ ಇಷ್ಟವಾಗಬಹುದು. 7/10
ಸಾವಿರ ಸಾವಿರ ಜನ್ಮ ಸಾಲದು ಸಾಲದು ಬ್ರಹ್ಮ ಕುನಾಲ್ ಗಂಜಾವಾಲ,ಶ್ರಾವ್ಯ ಅಣ್ಣ-ತಂಗಿಯರ ನಡುವಣ ಹಾಡು. ಹಾಗಂತ ಮಾಮೂಲಿ ಜೋ ಜೋ ಲಾಲಿ ಮಾದರಿಯ ಹಾಡಲ್ಲ! ಸ್ವಲ್ಪ ಲಯಪ್ರಧಾನ ಫಾಸ್ಟ್ ನಂಬರ್. ಇನ್ನೂ ಚೆನ್ನಾಗಿ ಮಾಡ ಬಹುದಿತ್ತು! 6/10
ಸುಮ್ ಸುಮ್ನೆ ಎಸ್.ಪಿ.ಬಾಲಸುಬ್ರಹ್ಮಣ್ಯಂ,ಶಮಿತಾ ಮಲ್ನಾಡ್

ಎಸ್.ಪಿ.ಬಿ. ಹಾಡಿದ್ದಾರೆಂಬುದೊಂದು ವಿಚಾರ ಬಿಟ್ಟರೆ ಮತ್ತೇನೂ  ಇಲ್ಲ ಈ ಹಾಡಲ್ಲಿ. ಉಮ್ಮಾ, ಚುಮ್ಮಾ , ಗಿಲ್ಲು, ತೀಟೆ ಮುಂತಾದ ಪದಗಳೇ ರಾರಾಜಿಸುವ ಗೀತ ಸಾಹಿತ್ಯ! ನಾಗೇಂದ್ರ ಪ್ರಸಾದ್ ಸ್ವ ಪ್ರೇರಣೇಯೋ ಅಥವಾ ನಿರ್ದೇಶಕರೇ ಹೇಳಿ ಬರೆಸಿಕೊಂಡ ಹಾಡೋ ಗೊತ್ತಿಲ್ಲ. ಯಾವ ಕೋನದಿಂದ ನೋಡಿದರೂ ಗಮನ ಸೆಳೆಯದ ಹಾಡು!

ಈ ಹಾಡಿಗೆ ಎಸ್.ಪಿ.ಬಿ. ಅಂತಹ ಹಿರಿಯ ಗಾಯಕರ ಅಗತ್ಯವಿತ್ತಾ? 

4/10
ತುಂಟ ರಾಮ,ವೆಲ್ ಕಂ ಪುಟ್ಟ ರಾಮ ವೆಲ್ ಕಂ ಉದಿತ್ ನಾರಾಯಣ, ಚಿತ್ರಾ ಸೀಮಂತದ ಹಾಡು. ಬರಲಿರುವ ಪುಟ್ಟ ಮಗುವನ್ನು ಸ್ವಾಗತಿಸುವ ಸಾಹಿತ್ಯ ಪರವಾಗಿಲ್ಲ.ಆದರೆ ಸಂಗೀತದಲ್ಲಿ ಅಂತಹ ವಿಶೇಷವೇನೂ ಇಲ್ಲ.ಈಗಾಗಲೇ ಬಂದಿರುವ ಹಲವಾರುಈ ರೀತಿಯ ಹಾಡುಗಳ ಸಾಲಿಗೆ ಹತ್ತರ ಜೊತೆ ಹನ್ನೊಂದರ ಸೇರ್ಪಡೆ ಅಷ್ಟೇ!  6/10

ಸಧ್ಯದ ಮಟ್ಟಿಗೆ ಕನ್ನಡದ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕ ಹರಿಕೃಷ್ಣ ಮೊದಲ ಬಾರಿಗೆ ಶಿವರಾಜ್ ಕುಮಾರ್ ಚಿತ್ರವೊಂದಕ್ಕೆ ಸಂಗೀತ ಸಂಯೋಜಿಸಿದ್ದಾರೆಂಬುದೊಂದೇ ಹೆಗ್ಗಳಿಕೆ. ಚಿತ್ರದ ಹಾಡುಗಳು ಮಾತ್ರ ಆ ಮಟ್ಟದಲ್ಲಿಲ್ಲ! ಜೊತೆ ಜೊತೆಯಲಿ, ಗಜ, ಗಾಳಿಪಟ, ಪಯಣ ಚಿತ್ರಗಳಿಗೆ ಸಂಗೀತ ನೀಡಿರುವುದು ಇದೇ ಹರಿಕೃಷ್ಣ ಅವರಾ ಎಂಬ ಅನುಮಾನ ಬಂದರೆ ಆಶ್ಚರ್ಯವಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಇದೊಂದು ಮಾಮೂಲಿನಲ್ಲಿ ಮಾಮೂಲಿ ಅಲ್ಬಂ. 

 

akumar.reach@gmail.com