"ನವಗ್ರಹ" - ಒಂದು ಉತ್ತಮ ಆಲ್ಬಂ! ಖಂಡಿತ ಖರೀದಿಸಿ.

akumar's picture
Tagged:  

ಚಿತ್ರ: ನವಗ್ರಹ

ತಾರಾಗಣ: ದರ್ಶನ್,ತರುಣ್,ಸೃಜನ್,ವಿನೋದ್ ಪ್ರಭಾಕರ್,ನಾಗೇಂದ್ರ,ವರ್ಷಾ,ಶರ್ಮಿಳಾ

ಸಂಗೀತ: ವಿ.ಹರಿಕೃಷ್ಣ

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್

ನಿರ್ದೇಶನ: ದಿನಕರ್ ತೂಗುದೀಪ್

ಆಡಿಯೋ ಸಂಸ್ಥೆ: ಆನಂದ್ ಆಡಿಯೋ

ಕಣ್ ಕಣ್ ಸಲಿಗೆ ಸಲೆಗೆ ಅಲ್ಲ ಸುಲಿಗೆ ಸೋನು ನಿಗಂ ಅತ್ಯಂತ ಇಂಪಾದ ಹಾಡು. One of the best songs in the recent times! ಹಿನ್ನೆಲೆ ಸಂಗೀತ ಸೂಪರ್! ಸೋನು ಗಾಯನ ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ. ಸಾಹಿತ್ಯ ಕೂಡ ಉತ್ತಮವಾಗಿದೆ.ಸೂಪರ್ ಹಿಟ್ ಆಗುವ ಎಲ್ಲ ಲಕ್ಷಣಗಳಿವೆ! 9/10
ಯಾಮಿ ಯಾಮಿ ಕುನಾಲ್ ಗಾಂಜಾವಾಲ Fast Number. ಸಂಗೀತ ಉತ್ತಮ. ಕುನಾಲ್ ತುಂಬಾ ಚೆನ್ನಾಗಿ ಹಾಡಿದ್ದಾರೆ. ಡ್ಯಾನ್ಸ್ ಮಾಡಲು ಒಳ್ಳೆಯ ಹಾಡು. 8/10
ಅಂಬಾರಿ ಊರಿನಲ್ಲಿ ಸೌಮ್ಯಾ ಮಹದೇವನ್ ಮತ್ತೊಂದು fast number. ಐಟಂ ಸಾಂಗ್ ಇರಬಹುದು.  7/10
ನರಮನಸ ನರಮನಸ ಹರಿಹರನ್ ಜೀವನದ ಏಳು ಬೀಳುಗಳನ್ನು ಬಣ್ಣಿಸುವ ಒಳ್ಳೆಯ ಸಾಹಿತ್ಯ. ಹರಿಹರನ್ ಗಾಯನ ಕೂಡ ಅಷ್ಟೇ ಚೆನ್ನಾಗಿದೆ. ಒಳ್ಳೆಯ ಹಾಡು!  8/10
ಸ್ಟೈಲೋ ರೇ ಸ್ಟೈಲೋ ಜಸ್ಸಿ ಗಿಫ್ಟ್, ಚೈತ್ರಾ,ಟಿಪ್ಪು, ಕಾರ್ತೀಕ್ ಹರಿಕೃಷ್ಣ ಆಲ್ಬಂ ಅಂದಮೇಲೆ ನಮ್ಮ ಚೈತ್ರಾ ಹಾಡು ಇಲ್ದೇ ಇದ್ರೆ ಹೇಗೆ ಹೇಳಿ. ಕಂಗ್ಲೀಷ್ ಹಾಡು.  ಚಿತ್ರದಲ್ಲಿ ಎಲ್ಲಾ ನವಗ್ರಹರೂ ಒಟ್ಟಿಗೆ ಹೇಳುವ ಹಾಡು!  7/10

ಒಟ್ಟಿನಲ್ಲಿ ಇದೊಂದು ಉತ್ತಮ ಆಲ್ಬಂ. ಕಣ್ ಕಣ್ ಸಲಿಗೆ ಹಾಡು ಮೋಡಿ ಮಾಡುತ್ತದೆ. ಯಾಮಿ ಯಾಮಿ ಕುಣಿಯುವಂತೆ ಮಾಡುತ್ತದೆ. ಉಳಿದ ಹಾಡುಗಳೂ ಚೆನ್ನಾಗಿಯೇ ಇವೆ. ಕಳಪೆ ಎನ್ನುವಂತೆ ಯಾವ ಹಾಡೂ ಇಲ್ಲ! ಆ ಮಟ್ಟಿಗೆ ಹರಿಕೃಷ್ಣ ಗೆದ್ದಿದ್ದಾರೆ!

ತೂಗುದೀಪ ಸಂಸ್ಥೆಯ ಎರಡನೇ ಚಿತ್ರ ನವಗ್ರಹ ಅವರ ಮೊದಲ ಚಿತ್ರ ಜೊತೆ ಜೊತೆಯಲಿಯನ್ನೂ ಮೀರಿಸುವಂತೆ ಯಶಸ್ವಿಯಾಗಲಿ, ಮತ್ತೊಂದು ಮ್ಯೂಸಿಕಲ್ ಹಿಟ್ ಆಗಲಿ ಎಂದು ಹಾರೈಸೋಣ!

akumar.reach@gmail.com