ಚಿತ್ರ: ನಂ ಯಜಮಾನ್ರು
ತಾರಾಗಣ: ವಿಷ್ಣುವರ್ಧನ್, ವಿಜಯ ರಾಘವೇಂದ್ರ, ನವ್ಯಾ ನಾಯರ್, ಲಕ್ಷ್ಮೀ ಗೋಪಾಲಸ್ವಾಮಿ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ
ನಿರ್ದೇಶನ: ಟಿ.ಎಸ್.ನಾಗಾಭರಣ
ಆಡಿಯೋ ಸಂಸ್ಥೆ: ಅಕ್ಷಯ ಆಡಿಯೋ
| ೧. ದುಂಡುಭೂಮಿಗೆ ಸುತ್ತೋ ಖುಷಿ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ | ಉತ್ತಮ.ಆದರೆ ಅತ್ಯುತ್ತಮ ಅಲ್ಲ! | 7/10 |
| ೨. ವಧು-ವರರೇ | ಎಸ್.ಪಿ.ಬಾಲಸುಬ್ರಹ್ಮಣ್ಯಂ ,ಬದ್ರಿ ಪ್ರಸಾದ್, ಹೇಮಂತ್, ಅನುರಾಧಾ ಭಟ್ | ಮದುವೆ ಬ್ರೋಕರ್ ಮತ್ತವನ ಗಿರಾಕಿಗಳ ನಡುವಣ ಸಂಭಾಷಣೇಯೇ ಹಾಡು. Typical ಹಂಸಲೇಖಾ ಸ್ಟೈಲ್ ಹಾಡು! | 5/10 |
| ೩.ಈ ಮೌನ ಮಾನಸಗಾನ | ಬದ್ರಿ ಪ್ರಸಾದ್, ಅನುರಾಧಾಭಟ್ | ಆಲ್ಬಂನ ಅತ್ಯುತ್ತಮ ಹಾಡು! ಕೇಳಲು ತುಂಬಾ ಇಂಪಾಗಿದೆ.ಬದ್ರಿ-ಅನುರಾಧಾ ಉತ್ತಮ ಗಾಯನ! | 8/10 |
| ೪.ನಿನ್ನೆ ರಾತ್ರಿ ನೀಲ ಗಗನದಿ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಖವ್ವಾಲಿ ಶೈಲಿಯ ಹಾಡು. | 7/10 |
| ೫. ಗೊಂಬೆ ಮರಿ ನನ್ನಗೊಂಬೆ ಮರಿ | ಹೇಮಂತ್ | ನಿದ್ದೆ ಮಾಡುವ ಮೊದಲು ಕೇಳಿದರೆ ಒಳ್ಳೆಯ ನಿದ್ದೆ ಬರುತ್ತದೆ. ಒಳ್ಳೆಯ ಜೋಗುಳದ ಹಾಡು! | 7/10 |
| ೬. ಏನಾಯಿತೇ ಕನಸಿಗೆ | ಹೇಮಂತ್ | ಸಾಧಾರಣ. Fast Number. ಪ್ರೇಮಿಯೊಬ್ಬನ ಪ್ಯಾಥೋ ಸಾಂಗ್! | 6/10 |
| ೭.ಈ ಹೃದಯಾ ಹೇಳಿದ ಹಾಗೆಯೆ | ನಂದಿತಾ, ವಿಅಯ ರಾಘವೇಂದ್ರ | ಸಾಧಾರಣವಾದ ಯುಗಳ ಗೀತೆ. | 6/10 |
ಒಟ್ಟಿನಲ್ಲಿ 2-3 ಹಾಡುಗಳು ಕೇಳಲು ಇಂಪಾಗಿವೆ. ಆದರೆ ಹೇಳುವುದಾದರೆ ಸಾಹಿತ್ಯದಲ್ಲಾಗಲೀ, ಸಂಗೀತದಲ್ಲಾಗಲೀ ಅತ್ಯುತ್ತಮ / extra ordinary ಅನ್ನೋ ಥರ ಇಲ್ಲ. ಅಪರೂಪಕ್ಕೆ ಹಂಸಲೇಖಾ ಸಂಗೀತ ನೀಡಿದ ಚಿತ್ರವೊಂದು ಬಂದಿದೆ ಅನ್ನೋದು ಸಂತೋಷದ ವಿಚಾರ. ಕನ್ನಡಿಗರೇ ಬಹುಪಾಲು ಹಾಡಗಳನ್ನು ಹಾಡಿರುವುದು ಇನ್ನೂ ಖುಷಿಯ ವಿಚಾರ. ಆದರೆ ಹಂಸಲೇಖಾ "ನೆನಪಿರಲಿ"ಯಲ್ಲಿ ಮಾಡಿದ್ದ ಮೋಡಿ ಇಲ್ಲಿ ಮಾಯವಾಗಿದೆ.
