ಇಂದು ಮೊಗ್ಗಿನ ಮನಸು ಚಿತ್ರವನ್ನು ಮತ್ತೊಮ್ಮೆ ತೆರೆಯ ಮೇಲೆ ವೀಕ್ಷಿಸುವ ಅವಕಾಶ ಒದಗಿ ಬಂತು! ಅದಕ್ಕಾಗಿ ನನ್ನ ಸಹೋದ್ಯೋಗಿ ಸಾಯಿಪ್ರಸಾದ್‍ಗೆ ಧನ್ಯವಾದಗಳು! ಸಾಯಿ ಬಗ್ಗೆ ಸ್ವಲ್ಪ ಹೇಳಲೇ ಬೇಕು. ಈತ ತಮಿಳುನಾಡಿನವನು. ನನಗೆ ಸುಮಾರು ಎರಡು ವರ್ಷಗಳಿಂದ ಪರಿಚಿತ! ಮಾತೃಭಾಷೆ ತಮಿಳು.ಆದರೆ ಈತನಿಗೆ ಕನ್ನಡದ ಬಗ್ಗೆ ತುಂಬಾ ಪ್ರೀತಿ. ಸ್ವ-ಆಸಕ್ತಿಯಿಂದ ಕನ್ನಡವನ್ನು ಕಲಿಯುತ್ತಿದ್ದಾನೆ. ಇದೀಗ ಬಹುಪಾಲು ಮಾತನಾಡುತ್ತಾನೆ! ಕನ್ನಡ ಚಿತ್ರದ ಹಾಡುಗಳು ಕೂಡ ಇವನಿಗೆ ತುಂಬ ಇಷ್ಟ! ಕಳೆದ ವರ್ಷ ನಮ್ಮ ಕಛೇರಿಯಲ್ಲಿ ನಾವು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಒಂದಷ್ಟು ಕನ್ನಡ ಬರಹಗಳಿರುವ ಟಿ-ಶರ್ಟ್ ಗಳನ್ನು ವಿನ್ಯಾಸಗೊಳಿಸಿ ಆರ್ಡರ್ ಮಾಡಿದ್ದೆವು. ಸಾಯಿ ಕೂಡ ನಮ್ಮೊಂದಿಗೆ ಕನ್ನಡ ಟಿ-ಶರ್ಟ್ ಧರಿಸಿ ರಾಜ್ಯೋತ್ಸವ ಆಚರಿಸಿದ್ದ! ವಿಷಯ ಇಲ್ಲಿಗೇ ನಿಲ್ಲುವುದಿಲ್ಲ... ನನ್ನೊಂದಿಗೆ ಹಲವು ಬಾರಿ ಕನ್ನಡ ಸಿನಿಮಾಗಳನ್ನು ಥಿಯೇಟರಿಗೆ ಬಂದು ವೀಕ್ಷಿಸಿದ್ದಾನೆ ಕೂಡ! ಮುಂಗಾರು ಮಳೆ, ಮಿಲನ, ಆ ದಿನಗಳು, ಪ್ರೀತಿ ಏಕೆ ಭೂಮಿ ಮೇಲಿದೆ ನಾವು ಒಟ್ಟಿಗೆ ನೋಡಿದ ಚಿತ್ರಗಳು! ಗಾಳಿಪಟ ಚಿತ್ರಕ್ಕೆ ಸಾಯಿ ಜೊತೆ ನನಗೆ ಕಾರಣಾಂತರಗಳಿಂದ ಹೋಗಲು ಆಗಲಿಲ್ಲ.ಆದರೆ ಸಾಯಿ ಒಬ್ಬನೇ PVR ಗೆ ಹೋಗಿ ಗಾಳಿಪಟ ನೋಡಿಕೊಂಡು ಬಂದಿದ್ದಾನೆಂದರೆ ಊಹಿಸಿ ಕನ್ನಡ ಚಿತ್ರಗಳ ಬಗ್ಗೆ ಆತನಿಗಿರುವ ಆಸಕ್ತಿಯನ್ನು!
ಒಮ್ಮೆ ನಮ್ಮ ಕಂಪನಿಯ ಬೆಂಗಳೂರಿನವನೇಆದ ಹುಡುಗ ಒಬ್ಬ ಸಾಯಿಯನ್ನು ಕೇಳಿದ - "What Sai.. you watched Kannada film Milana is it?? What man...!"ಆತನ ಮಾತಿನಲ್ಲಿ ವ್ಯಂಗ್ಯವಿತ್ತು. ಹೇಳಿ ಕೇಳಿ ಆತ so called ಕನ್ನಡಿಗ ಬೇರೆ! ಸಾಯಿ ಹೇಳುತ್ತಾನೆ - "Yes! Not only Milana, I watched Mungaru Male, Aa DinagaLu, Gaalipata also in theater. Being a Tamilina I watch and enjoy Kannada movies. You dont watch your own movies is it? " ಆಮೇಲೆ ಆ ಬೆಂಗಳೂರು ಕನ್ನಡಿಗ ಬಾಯಿ ಬಿಟ್ಟರೆ ಕೇಳಿ!
ಇನ್ನು ಇವತ್ತಿನ ವಿಷಯಕ್ಕೆ ಬರೋಣ. ಮೊಗ್ಗಿನ ಮನಸು ಚಿತ್ರದ 3-4 ಹಾಡುಗಳು ಸಾಯಿಗೆ ಇಷ್ಟವಾಗಿದ್ದವು.ಆ ಸಿನಿಮಾಗೆ ಹೋಗೋಣ ಅಂತ ಸುಮಾರು ದಿನಗಳಿಂದ ಹೇಳುತ್ತಿದ್ದ. ಆದರೆ ನನಗೆ ಸಾಧ್ಯ ಆಗಿರಲಿಲ್ಲ. ಹೇಗೂ ಈ ವಾರ ನಮ್ಮ ಮನೆಯ ಸಮೀಪದ ಮುಕುಂದ ಟಾಕೀಸಿಗೆ ಮೊಗ್ಗಿನ ಮನಸು ಬಂದಿರುವ ವಿಷಯ ನೆನಪಾಗಿ, ಸಂಜೆ ಹೋಗೋಣ ಎಂದೆ.. ಅವನೂ ಫ್ರೀ ಆಗಿದ್ದ. ಸರಿ ಸಂಜೆ 5.30ರ ಶೋಗೆ ಹೊರಟೆವು.
ಮುಕುಂದ ಹೇಳಿ ಕೇಳಿ ತಮಿಳು ಚಿತ್ರಗಳನ್ನೇ ಹೆಚ್ಚಾಗಿ ಪ್ರದರ್ಶಿಸುವ ಚಿತ್ರಮಂದಿರ. ಇರುವುದು ಕೂಡ ತಮಿಳಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಬಾಣಸವಾಡಿಯಲ್ಲಿ. ಆದರೂ ಇವತ್ತಿನ ಸಂಜೆ ಆಟ 50% ತುಂಬಿತ್ತು! ಅದೂ ಸೋಮವಾರ!
ಸಾಯಿಯಂತೂ ಚಿತ್ರವನ್ನು ಸಂಪೂರ್ಣ ಅನುಭವಿಸಿ ನೋಡುತ್ತಿದ್ದ. ನನಗೂ ಕೂಡ ಇದು ಮೂರನೇ ಸಲ ಎಂಬುದು ಮರೆತು ಹೋಗಿತ್ತು. ಮೊದಲ ಸಲ ನೋಡಿದಷ್ಟೇ ಉತ್ಸಾಹ ಲವಲವಿಕೆ ಚಿತ್ರದುದ್ದಕ್ಕೂ ಕಂಡುಬಂತು. ಈಗ ಚಿತ್ರದಲ್ಲಿ ಮತ್ತೆರಡು ಹಾಡುಗಳನ್ನು ಹಾಕಿದ್ದಾರೆ. ಆಕಾಂಕ್ಷಾ ಬಾದಾಮಿ ಹಾಡಿರುವ "ಯಾಕಿಂಗಾಡ್ತಾರೋ ಈ ಹುಡುಗರು" ಮತ್ತು ವಿಜಯ್ ಪ್ರಕಾಶ್ ಹಾಡಿರುವ "ಮೊಗ್ಗಿನ ಮನಸಲಿ" ಹಾಡುಗಳನ್ನು ತೆರೆಯ ಮೇಲೆ ಮೊದಲ ಸಲ ನೋಡುವ ಅವಕಾಶ ಸಿಕ್ಕಿತು! ರಾಧಿಕಾ ಪಂಡಿತ್ ಮತ್ತು ಶುಭಾ ಪೂಂಜಾ ಮತ್ತೊಮ್ಮೆ ಕಾಡಿದರು! ಶರಣ್ ಇನ್ನೊಮ್ಮೆ ತಮ್ಮ ಹಾಸ್ಯದ ಕಚಗುಳಿ ಇಟ್ಟರು. ಮನೋಮೂರ್ತಿಯವರ ಸುಮಧುರ ಹಾಡುಗಳಲ್ಲಿ ಮಗದೊಮ್ಮೆ ಮಿಂದೇಳುವ ಭಾಗ್ಯ ಒದಗಿಬಂತು. ಥಾಂಕ್ಸ್ ಟು ಸಾಯಿಪ್ರಸಾದ್!
ಈಗತಾನೇ ಸಾಯಿ ಗೂಗಲ್ ಟಾಕ್‍ನಲ್ಲಿ ಸಿಕ್ಕು ಹೇಳಿದ ಮಾತು....
