ಪುನೀತ್ ರಾಜ್ ಕುಮಾರ್ ಅಭಿನಯದ ಮಿಲನ ಚಿತ್ರದ ಹಾಡುಗಳ ಗುಂಗಿನಲ್ಲಿ ನೀವೇನಾದ್ರೂ ವಂಶಿ ಚಿತ್ರದ CD ಕೊಂಡುಕೊಂಡರೆ ನಿರಾಸೆ ಖಚಿತ!
ಚಿತ್ರ: ವಂಶಿ
ನಿರ್ಮಾಪಕರು:ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್
ನಿರ್ದೇಶನ: ಪ್ರಕಾಶ್
ಸಂಗೀತ: ಆರ್. ಪಿ. ಪಟ್ನಾಯಕ್
1. ಮಾಯಗಾತಿ ನಿಂಗವ್ವಾ ನಿಂಗವ್ವಾ, ನನ್ನ ಮ್ಯಾಲೆ ಬೀಳ ಬ್ಯಾಡವ್ವಾ ಬ್ಯಾಡವ್ವಾ... (ಉದಿತ್ ನಾರಾಯಣ್, ಮಾಲತಿ): ಆಂಧ್ರಪ್ರದೇಶದ ತೆಲ್ಲಂಗಾಣ ಜಾನಪದ ಗೀತೆ ಮಾಯಾದರಿ ಮೈಸಮ್ಮ ಮೈಸಮ್ಮ ಗೀತೆಯ ಟ್ಯೂನನ್ನೇ ಆರ್.ಪಿ.ಪಟ್ನಾಯಕ್ ವಂಶಿ ಚಿತ್ರದಲ್ಲಿ ಮರುಬಳಸಿದ್ದಾರೆ! ಈ ಗೀತೆ ತೀರಾ ಸಾಧಾರಣವಾಗಿದ್ದು ಹೀಗೆ ಕೇಳಿ ಹಾಗೆ ಮರೆಯಬಹುದಾದ ಗೀತೆ.
ಸಾಹಿತ್ಯ: ನಾಗೇಂದ್ರ ಪ್ರಸಾದ್.
6/10
2. ಜೊತೆ ಜೊತೆಯಲಿ (ಪುನೀತ್ ಶ್ರೇಯಾ ಗೋಶಲ್): ಪ್ರಾಯಶಃ ಇದು ಪುನೀತ್ ಹಾಡಿರುವ ಮೊದಲ ಮಾಧುರ್ಯ ಪ್ರಧಾನ ಯುಗಳ ಗೀತೆ. ಗ್ಯಾಂಗ್‍ಸ್ಟರ್ ಹಿಂದಿ ಚಿತ್ರದ ತೂಹಿ ಮೇರೆ ಹಾಡನ್ನು ಅಲ್ಲಲ್ಲಿ ನೆನಪಿಸುತ್ತದೆ! ಆದರೂ ಇದು ಕೇಳಲು ಇಂಪಾಗಿದ್ದು ವಂಶಿ ಚಿತ್ರದ ಅತ್ಯುತ್ತಮ ಗೀತೆ ಎನ್ನಬಹುದು. ಆದರೆ ಹಾಡಿನ ಸಾಹಿತ್ಯ ಇನ್ನಷ್ಟು ಉತ್ತಮವಾಗಿರಬಹುದಿತ್ತು.
ಸಾಹಿತ್ಯ: ರಾಮ್ ನಾರಾಯಣ್
8/10
3. ಅಮಲು ಅಮಲು (ರಾಜೇಶ್ ಕೃಷ್ಣನ್, ಹರಿಣಿ ಸುಧಾಕರ್): ಜಯಂತ್ ಕಾಯ್ಕಿಣಿಯವರ ಎಂದಿನ ಪಂಚ್ ಇಲ್ಲಿ ಮರೆಯಾಗಿದೆ! ಹಾಡು ಅಂತಹ ಹೊಸತನವೇನೂ ಇಲ್ಲದ ಸಾಧಾರಣವಾದ ಯುಗಳ ಗೀತೆ.ರಾಜೇಶ್ ಕೃಷ್ಣನ್ ಗಾಯನ ಚೆನ್ನಾಗಿದೆ.
6/10
4. ಭುವನಂ ಗಗನಂ ಸಕಲಂ ಶರಣಂ (ಸೋಹಂ ಚಕ್ರವರ್ತಿ): ಮಾಮೂಲಿ ಚಿತ್ರಗೀತೆಗಿಂತ ಶಿವ ಸ್ತುತಿಯ ಶೈಲಿಯಲ್ಲಿದೆ. ಹೊಸ ಗಾಯಕ ಸೋಹಂ ಕಂಠ ಸೊಗಸಾಗಿದೆ.
ಸಾಹಿತ್ಯ: ನಾಗೇಂದ್ರ ಪ್ರಸಾದ್
7/10
5. ಏನಾಯ್ತೋ ಇದೇನಾಯ್ತೋ ವಿಧಿಯಾಟ ಇದೇನಾಯ್ತೋ (ಸೋನು ನಿಗಂ) : ಪ್ಯಾಥೋ ಸಾಂಗ್! ಸೋನು ಎಂದಿನಂತೆ ಅಲ್ಲಲ್ಲಿ ಚಿಕ್ಕಪುಟ್ಟ ಉಚ್ಚಾರಣೆಯ ದೋಷಗಳಿದ್ದರೂ ತಮ್ಮ ಗಾನಸುಧೆಯಿಂದ ಅದನ್ನೆಲ್ಲ ಮುಚ್ಚಿದ್ದಾರೆ.
ಸಾಹಿತ್ಯ: ನಾಗೇಂದ್ರ ಪ್ರಸಾದ್
7/10
ಈ ಮೇಲಿನ ಗೀತೆಗಳಲ್ಲದೇ ಹಂಸಲೇಖ ರಚಿಸಿ ಸಂಗೀತ ನಿರ್ದಶಿಸಿದ ಲಕ್ಷ್ಮಿ ಅಮೋಘ ಅಭಿನಯ ನೀಡಿದ್ದ ತ್ರಿವೇಣಿ ಕಾದಂಬರಿ ಆಧಾರಿತ ಹೂವು ಹಣ್ಣು ಚಿತ್ರದ ತಾಯಿ ತಾಯಿ ಹಾಡನ್ನು ಮರುಬಳಸಲಾಗಿದೆ. ಡಾ. ರಾಜ್ ಕುಮಾರ್ ಅವರ ಹಾಡನ್ನು ಮತ್ತೊಮ್ಮೆ ಸವಿಯಬಹುದು!

