ಅರಮನೆಗೆ ಶತದಿನೋತ್ಸವದ ಸಂಭ್ರಮ! ನಂದಾದೀಪ ತೆರೆಗೆ.

akumar's picture
Tagged:  
ಆಗಸ್ಟ್ 1 ರಿಂದ 7 ರ ವರೆಗೆ

ಅರಮನೆಗೆ 100 ರ ಸಂಭ್ರಮ.  ನಂದಾದೀಪ, ನಮ್ಮ ಪ್ರೀತಿ ಶಾಶ್ವತ ಚಿತ್ರಗಳು ಬೆಳ್ಳಿತೆರೆಗೆ

aramane

ಈ ವಾರ ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಏಳನೇ ಚಿತ್ರ ಅರಮನೆ ಗಾಂಧೀನಗರದಲ್ಲಿ 100 ದಿನಗಳನ್ನು ಪೂರೈಸಲಿದೆ. ಮೊದಲ 50 ದಿನಗಳ ಕಾಲ ಸಂತೋಷ್ ಚಿತ್ರಮಂದಿರದಲ್ಲಿ ಪ್ರದರ್ಶಿಸಲಟ್ಟಿದ್ದು ಇನ್ನುಳಿದ 50 ದಿನಗಳನ್ನು ಕೈಲಾಷ್ ಚಿತ್ರಮಂದಿರದಲ್ಲಿ ಪೂರೈಸಿದೆ. ನಾಗಶೇಖರ್ ಈ ಚಿತ್ರದ ನಿರ್ದೇಶಕರಾಗಿದ್ದು ಚೊಚ್ಚಲ ಪ್ರಯತ್ನದಲ್ಲೇ ಯಶಸ್ಸನ್ನು ಕಂಡಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತವನ್ನು ನೀಡಿದ್ದಾರೆ. ಮಲಯಾಳಂ ನಟಿ ರೋಮಾ ಚಿತ್ರದ ನಾಯಕಿ.

ಗಂಧದಗುಡಿ ಅರಮನೆ ಚಿತ್ರತಂಡಕ್ಕೆಶುಭ ಹಾರೈಸುತ್ತದೆ.

ಈ ವಾರ ಕನ್ನಡದಲ್ಲಿ ದೊಡ್ಡ ಬ್ಯಾನರ್‍ನ ಯಾವ ಚಿತ್ರವೂ ತೆರೆಕಾಣುತ್ತಿಲ್ಲ. ಕಾರಣ ಪರಭಾಷೆಯ ಎರಡೆರಡು ದೊಡ್ಡ ಚಿತ್ರಗಳ ದಾಳಿ! ರಜನೀಕಾಂತ್ ನಟನೆಯ "ಕುಚೇಲನ್" ಹಲವಾರು ಪ್ರಿಂಟ್‍ಗಳೊಡನೆ ತೆರೆಕಾಣುತ್ತಿದ್ದರೆ, MUMMY-3 ಕೂಡ ಈ ವಾರವೇ ತೆರೆಕಾಣಲಿದೆ. ಹಾಗಾಗಿ ಇದು ಗಾಂಧೀನಗರದ ನಮ್ಮ ಚಿತ್ರಗಳಮೇಲೆ ನೇರ ಪರಿಣಾಮ ಬೀರಲಿದೆ.

ಈ ವಾರದ ಹೊಸ ಬಿಡುಗಡೆಗಳು

mm ಗುರುರಾಜ್ ಹೊಸಕೋಟೆಯವರ "ಕಣ್ಣೀರಿನ ಕಥೆ" ಹಾಡಿನ ಆಧಾರಿತ ಚಿತ್ರ "ನಂದಾ ದೀಪ" ಈ ವಾರ
ನರ್ತಕಿ ಚಿತ್ರಮಂದಿರದಲ್ಲಿ ತೆರೆಕಾಣುತ್ತಿದೆ.
ದೇವರಾಜ್, ಶೃತಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದು ಶಿವು ಡಿ. ಹಿರೇಮಠ್ ಚಿತ್ರದ ನಿರ್ದೇಶಕರು.

ಭಾರೀ ನಿರೀಕ್ಷೆ ಹುಟ್ಟಿಸಿದ್ದ "ಮಿಂಚಿನ ಓಟ" ಚಿತ್ರ ಪ್ರದರ್ಶನದಲ್ಲೂ  ಮಿಂಚಿನ ಓಟವನ್ನು ಪ್ರದರ್ಶಿಸಿ ಮೂರೇ ವಾರಗಳಲ್ಲಿ ಮರೆಯಾಗಿದೆ. 

hrudaya

ನಮ್ಮ ಪ್ರೀತಿ ಶಾಶ್ವತ ಎಂಬ ಚಿತ್ರ ಅದ್ಯಾವಾಗ ತಯಾರಾಯ್ತೋ ದೇವರೇ ಬಲ್ಲ.  ಸ್ಟೇಟ್ಸ್ ಚಿತ್ರಮಂದಿರದಲ್ಲಿ ಕಳೆದ ವಾರ ತೆರೆಕಂಡಿದ್ದ "ಭಯ" ಚಿತ್ರ ಭಯ ಹುಟ್ಟೀಸುವುದರಲ್ಲಿ ವಿಫಲವಾದ ಕಾರಣ ಒಂದೇ ವಾರಕ್ಕೆ ಹೊರನಡೆಯುತ್ತಿದ್ದು ಆ ಜಾಗಕ್ಕೆ ನಮ್ಮ ಪ್ರೀತಿ ಶಾಶ್ವತ ಬರುತ್ತಿದೆ. "ಭಕ್ತ" ಚಿತ್ರದ ನಾಯಕ ಸತ್ಯ ಈ ಚಿತ್ರದ ನಾಯಕ. ನಿರ್ದೇಶಕರು ಕಿಟ್ಟಿ. ಅಧಿ ಚಿತ್ರಕ್ಕೆ ಸಂಗೀತವನ್ನೊದಗಿಸಿದ್ದಾರೆ. ಚಿತ್ರದ ಹೆಸರಲ್ಲೇನೋ ಶಾಶ್ವತ ಇದೆ.. ಆದರೆ ಚಿತ್ರ ಗಾಂಧೀನಗರದಲ್ಲಿ ಎಷ್ಟು ಶಾಶ್ವತ ಎಂದು ಇನ್ನೇನು ತಿಳಿಯಲಿದೆ.

ಪುನೀತ್ ರಾಜ್ ಕುಮಾರ್, ರಮ್ಯಾ, ಮೀರಾ ಜಾಸ್ಮಿನ್ ಅಭಿನಯದ ಅರಸು ಚಿತ್ರ  ಕಪಾಲಿಯಲ್ಲಿ ಮತ್ತೆ ಬಿಡುಗಡೆಯಾಗಿದೆ. ನೀ ಟಾಟಾ ನಾ ಬಿರ್ಲಾಗೆ ಗಾಂಧೀನಗರ ಟಾಟಾ ಹೇಳಿದೆ. 

 

Image

ಮುಂದುವರಿದ ಪ್ರದರ್ಶನ :

mm ಮೊಗ್ಗಿನ ಮನಸು ಚಿತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ! ಯಶಸ್ಸಿನ ನಾಗಾಲೋಟದೊಂದಿಗೆ ಮೂರನೇ ವಾರಕ್ಕೆ ಪ್ರವೇಶ!

mm

ಯಶಸ್ವೀ 2 ನೇ ವಾರಕ್ಕೆ.

 

  • ಅರಮನೆ (ಕೈಲಾಶ್) - 15 ನೇ ವಾರ (100ನೇ ದಿನ) (ಮೊದಲ 9 ವಾರ ಸಂತೋಷ್ ನಲ್ಲಿ)
  • ಮುಸ್ಸಂಜೆ ಮಾತು (ತ್ರಿವೇಣಿ) - 12 ನೇ ವಾರ
  • ಮೆರವಣಿಗೆ (ಅಪರ್ಣಾ) - 6 ನೇ ವಾರ
  • ಮೊಗ್ಗಿನ ಮನಸು (ಸಾಗರ್) 3 ನೇ ವಾರ
  • ತಾಜ್ ಮಹಲ್ (ಸಂತೋಷ್) 2 ನೇ ವಾರ
  • ಹೃದಯಾ I Miss you. (ಮೇನಕಾ) 2 ನೇ ವಾರ

 

ಹೊಸ ಆಡಿಯೋಗಳು:

vamshi ಪುನೀತ್ ರಾಜ್ ಕುಮಾರ್ - ಪ್ರಕಾಶ್ ಮಿಲನದ ವರ್ಷದ ಮತ್ತೊಂದು ಬಹು ನಿರೀಕ್ಷಿತ ಚಿತ್ರ! ವಂಶಿ ಚಿತ್ರದ ಆಡಿಯೋ ವಿಮರ್ಶೆ.. ನಿರೀಕ್ಷಿಸಿ... ಅತೀ ಶೀಘ್ರದಲ್ಲಿ.! 

 

ಅತೀ ಶೀಘ್ರದಲ್ಲೇ..

  • ಬೊಂಬಾಟ್ -ಅಗಸ್ಟ್ 8 ರಿಂದ ಕಪಾಲಿ
  • ಮಾದೇಶ - ಅಗಸ್ಟ್ 14 ರಿಂದ
  • ಧಿಮಾಕು
  • ಸೈಕೋ
  • ಮೇಘವೇ ಮೇಘವೇ