ತಾಜ್ ಮಹಲ್, ಹೃದಯಾ I Miss you, ಭಯ ಚಿತ್ರಗಳು ಬೆಳ್ಳಿತೆರೆಗೆ
ಹೊಸ ಬಿಡುಗಡೆಗಳು:

ಟಿ. ಶಿವಶಂಕರ ರೆಡ್ಡಿ ನಿರ್ಮಿಸಿರುವ ಆರ್. ಚಂದ್ರು ಮೊದಲ ಬಾರಿಗೆ ನಿರ್ದೇಶಿಸಿರುವ ಬಹು ನಿರೀಕ್ಷಿತ "ತಾಜ್ ಮಹಲ್" ಚಿತ್ರ ಈ ವಾರ ಗಾಂಧೀನಗರದ ಸಂತೋಷ್ ಚಿತ್ರಮಂದಿರದಲ್ಲಿ ತೆರೆಗೆ ಬರುತ್ತಿದೆ.ಕಳೆದ ವಾರಷ್ಟೇ ತೆರೆಕಂಡಿದ್ದ ಜಿಂದಗಿ ಚಿತ್ರ ಸಪ್ನಾ ಚಿತ್ರಮಂದಿರಕ್ಕೆ ತಳ್ಳಲ್ಪಡುತ್ತಿದೆ. ಈಗಾಗಲೇ ಸಪ್ನಾಕ್ಕೆ ತಳ್ಳಲ್ಪಟ್ಟು ಪ್ರದರ್ಶನ ಕಾಣುತ್ತಿದ್ದ ಇಂದ್ರನ ದರ್ಬಾರಿಗೆ ಆ ಮೂಲಕ ಕಡಿವಾಣ ಬೀಳಲಿದೆ.
ಪೂಜಾಗಾಂಧಿ, ಅಜಯ್ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕರ್ನಾಟಕದ ಜೊತೆ ಜೊತೆಗೆ ಇಂಗ್ಲೆಂಡಿನ ನಾಲ್ಕುಚಿತ್ರಮಂದಿರಗಳಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದೆ! ಇದು ಕನ್ನಡ ಚಿತ್ರವೊಂದರ ಮಹತ್ಸಾಧನೆಯೇ ಸರಿ! ಅಮೇರಿಕಾದ ಸ್ಯಾನ್ ಜೋಸ್‍ನಲ್ಲೂ ಚಿತ್ರವನ್ನು ತೆರೆಕಾಣಿಸುವ ಇರಾದೆ ಚಿತ್ರತಂಡಕ್ಕಿದೆ.ಚಿತ್ರಕ್ಕೆ ಅಭಿಮಾನ್ ಸಂಗೀತ ನೀಡಿದ್ದು ಎಂದೆರಡು ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. ಚಿತ್ರದ ತುಣುಕುಗಳು ಈಗಾಗಲೇ ಟಿವಿ ಚಾನೆಲ್‍ಗಳಲ್ಲಿ ಬಿತ್ತರವಾಗುತ್ತಿದ್ದು ವಿಭಿನ್ನವಾಗಿವೆ! ಹಾಗಾಗಿ ತಾಜ್ ಮಹಲ್ ಸಹಜವಾಗಿಯೇ ಕುತೂಹಲ ಕೆರಳಿಸಿದೆ.
ಹೃದಯಾ I Miss You ಎಂಬ ಹೊಸಬರೇ ಪ್ರಧಾನ ಭೂಮಿಕೆಯಲ್ಲಿರುವ ಚಿತ್ರ ಈ ವಾರ ಮೇನಕಾ ಚಿತ್ರಮಂದಿರದಲ್ಲಿ ತೆರೆಕಾಣಿತ್ತಿದೆ. ಎಂ. ಗೋಪಿ ಯಾದವ್ ನಿರ್ಮಿಸಿ ಸತ್ಯ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಂ ಶಂಕರ್ ಚಿತ್ರದ ಸಂಗೀತ ನಿರ್ದೇಶಕರು. ದುನಿಯಾ, ನಂದ ನಂದಿತ ಖ್ಯಾತಿಯ ಯೋಗೀಶ್ ಮತ್ತು ದುನಿಯಾ ರಶ್ಮಿ ಚಿತ್ರದಲ್ಲಿ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ!
ಎರಡು ವಾರದ ಹಿಂದಷ್ಟೇ "ಅಪರಹಣ" ಎಂಬ ಚಿತ್ರ ಸದ್ದಿಲ್ಲದೇ ಬಿಡುಗಡೆಯಾಗಿತ್ತು. ಬಿ.ಆರ್. ಕೇಶವ್ ಈ ಚಿತ್ರದ ನಿರ್ದೇಶಕರಾಗಿದ್ದರು. ಈ ವಾರ ಅವರೇ ನಿರ್ದೇಶಿಸಿರುವ ಮತ್ತೊಂದು ಚಿತ್ರ "ಭಯ" ಸ್ಟೇಟ್ಸ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಹೆಸರೇ ಹೇಳುವಂತೆ ಇದು ಹಾರರ್ ಚಿತ್ರ! ನಟಿ ನಟಿಯರೆಲ್ಲರೂ ಹೊಸಬರು! ಹಾಗಾಗಿ ಹೊಸ ರೀತಿಯ ಭಯ ಚಿತ್ರ ಹುಟ್ಟಿಸಬಹುದು!
ಮುಂದುವರಿದ ಪ್ರದರ್ಶನ :
ಮೊಗ್ಗಿನ ಮನಸು ಚಿತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ! ಯಶಸ್ಸಿನ ನಾಗಾಲೋಟದೊಂದಿಗೆ ಎರಡನೇ ವಾರಕ್ಕೆ ಪ್ರವೇಶ!
- ಅರಮನೆ (ಕೈಲಾಶ್) - 14 ನೇ ವಾರ (ಮೊದಲ 9 ವಾರ ಸಂತೋಷ್ ನಲ್ಲಿ)
- ಮುಸ್ಸಂಜೆ ಮಾತು (ತ್ರಿವೇಣಿ) - 11 ನೇ ವಾರ
- ನೀ ಟಾಟಾ ನಾ ಬಿರ್ಲಾ (ಕಪಾಲಿ) - 5 ನೇ ವಾರ
- ಮೆರವಣಿಗೆ (ಅಪರ್ಣಾ) - 5 ನೇ ವಾರ
- ಮೊಗ್ಗಿನ ಮನಸು (ಸಾಗರ್) 2 ನೇ ವಾರ
ಹೊಸ ಆಡಿಯೋಗಳು:
- ಅರ್ಜುನ್ (ವಿ. ಹರಿಕೃಷ್ಣ)
- PUC (ಜೆ. ರವಿರಾಜ್)
- ಸಂಗಾತಿ (ಹಂಸಲೇಖ)
ಅತೀ ಶೀಘ್ರದಲ್ಲೇ..
- ಮಾದೇಶ
- ಧಿಮಾಕು
- ಬೊಂಬಾಟ್
- ಮಂಜಿನ ಹನಿ

