ಚಿತ್ರ: ಅರ್ಜುನ್ ಸಂಗೀತ: ವಿ. ಹರಿಕೃಷ್ಣ
ತಾರಾಗಣ: ದರ್ಶನ್, ಮೀರಾ ಚೋಪ್ರಾ, ಸಂಜನಾ ನಿರ್ದೇಶನ:ಶಾಹುರಾಜ್ ಶಿಂಧೆ
ದರ್ಶನ್ - ವಿ. ಹರಿಕೃಷ್ಣ ಜೋಡಿ ಎಂದರೆ ಮಾಸ್ ಕೇಳುಗರಿಗೆ ಅಚ್ಚು ಮೆಚ್ಚು. ಭೂಪತಿ, ಗಜ, ಇಂದ್ರ ನಂತರ ದರ್ಶನ್ ಅಭಿನಯದ "ಅರ್ಜುನ್" ಚಿತ್ರಕ್ಕೆ ಮತ್ತೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ.
ಒಟ್ಟು ಹಾಡುಗಳು:5
- ಬಲ್ಲೆ ಬಲ್ಲೆ (ಸೋನು ನಿಗಂ, ಶ್ರೆಯಾ ಗೋಶಾಲ್; ರಚನೆ: ವಿ. ನಾಗೇಂದ್ರ ಪ್ರಸಾದ್): ಉತ್ತಮ ಸಂಗೀತ, ಉತ್ತಮ ಗಾಯನ. ಉಳಿದ ಹಾಡುಗಳಿಗೆ ಹೋಲಿಸಿದರೆ, ಸಾಹಿತ್ಯ ಇದರಲ್ಲಿ ಕೊಂಚ ಮೇಲು. 8/10
- ತೌಬಾರೆ ತೌಬಾ (ಟಿಪ್ಪು; ರಚನೆ: ಕವಿರಾಜ್):ಟಿಪ್ಪು ಹಾಡಿರುವಈ ಹಾಡು ಯಾವುದೋ ಹಿಂದಿ ಹಾಡನ್ನು ಅಲ್ಲಲ್ಲಿ ನೆನಪಿಸುತ್ತದೆ. ಉತ್ತಮ ಗಾಯನ. 7/10
- ಲೆಫ್ಟ್ ಅಲ್ಲಿ ಜಯಮಾಲ (ಜಸ್ಸಿ ಗಿಫ್ಟ್, ರೀಟಾ; ರಚನೆ: ಕವಿರಾಜ್):ಜಯಂತ್ ಕಾಯ್ಕಿಣಿ ಥರದ ಸಾಹಿತ್ಯವನ್ನು ದಯಮಾಡಿ ಮನೇಲೇ ಬಿಟ್ಟು ಈ ಹಾಡು ಕೇಳಲು ಬನ್ನಿ. ಯಾಕೆ ಅಂತ ಬಿಡಿಸಿ ಹೇಳೋ ಅಗತ್ಯ ಇಲ್ಲ ಅನ್ಸುತ್ತೆ. 4 / 10
- ಗುಂಟೂರು ಗುಂಟೂರು (ಜಸ್ಸಿ ಗಿಫ್ಟ್, ಚೈತ್ರಾ ಹೆಚ್.ಜಿ; ರಚನೆ: ಕವಿರಾಜ್): ದರ್ಶನ್-ಹರಿಕೃಷ್ಣ ಕಾಂಬಿನೇಶನ್ ಅಂದ ಮೇಲೆ ಚೈತ್ರಾ ಹಾಡಿರುವ ಐಟಂ ಸಾಂಗ್ ಇಲ್ದಿದ್ರೆ ಆಗುತ್ತಾ? ಗಜ ಚಿತ್ರದ "ಬಂಗಾರಿ ಯಾರೇ ನೀ ಬುಲ್ ಬುಲ್" ಮತ್ತು ಇಂದ್ರ ಚಿತ್ರದ "ಏಕ್ ಗಲಾಸಿ ದೋ" ಹಾಡುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿದರೆ ಈ ಹಾಡು ರೆಡಿ! 5.5/10
- ಹೇ ಕನಕ (ಶಂಕರ್ ಮಹದೇವನ್, ಶಮಿತಾ ಮಲ್ನಾಡ್; ರಚನೆ: ವಿ. ನಾಗೇಂದ್ರ ಪ್ರಸಾದ್): ಇಲ್ಲಿ ಮಿಕ್ಸಿಲಿ ರುಬ್ಬೋದೂ ಬೇಡ, ಗಜ ಚಿತ್ರದ "ಐತಲಕ್ಕಡಿ" ಹಾಡನ್ನ ಹಾಗೇ ಕೈಯ್ಯಲ್ಲೆ ಸ್ವಲ್ಪ ಅಲ್ಲಾಡಿಸಿಬಿಟ್ರೆಈ ಹಾಡು ಸಿದ್ಧ! ಅದೇ ದರ್ಶನ್, ಅಂತದ್ದೇ ಡ್ಯಾನ್ಸು, ಅದೇ ಹರಿಕೃಷ್ಣ, ಹೆಚ್ಚು ಕಡಿಮೆ ಅಂಥದ್ದೇ ಲೊಕೇಷನ್ ಮ್ಯೂಸಿಕ್ಕೂ ಅದೇ ರೀತಿ ಇದ್ರೆ ತಪ್ಪೇನು ಅಂತೀರಾ 5/10

