ಈ ವಾರ ಮೊಗ್ಗಿನ ಮನಸು. ಮುಂದಿನವಾರ ತಾಜ್ ಮಹಲ್!

akumar's picture
Tagged:  
ಜುಲೈ 18 ರಿಂದ 24 

ಮೊಗ್ಗಿನ ಮನಸು, ಜಿಂದಗಿ ಬೆಳ್ಳಿ ತೆರೆಗೆ!

ಹೊಸ ಬಿಡುಗಡೆಗಳು: 

  • mm
  • ಮೊಗ್ಗಿನ ಮನಸು : "ಮುಂಗಾರು ಮಳೆ" ಚಿತ್ರವನ್ನು ನಿರ್ಮಿಸಿದ ಇ. ಕೃಷ್ಣಪ್ಪನವರು ತಮ್ಮ ಇ.ಕೆ. ಎಂಟರ್ಟೈನರ್ಸ್ ಬ್ಯಾನರ್‍ನಲ್ಲಿ ನಿರ್ಮಿಸಿರುವ ಬಹು ನಿರೀಕ್ಷಿತ "ಮೊಗ್ಗಿನ ಮನಸು" ಚಿತ್ರ ಈ ವಾರ ಗಾಂಧೀನಗರದ ಸಾಗರ್ ಚಿತ್ರಮಂದಿರದಲ್ಲಿ ತೆರೆಗೆ ಬರುತ್ತಿದೆ.
  • ಈ ಚಿತ್ರ ವೀಕ್ಷಿಸುವುದರಿಂದ ಹುಡುಗರ ಹೃದಯಕ್ಕೆ ಹಾನಿಯಾಗಬಹುದು ಎಂಬ ಎಚ್ಚರಿಕೆಯನ್ನು ಶೀರ್ಷಿಕೆಯ ಕೆಳಗೆ ನೀಡಲಾಗಿದೆ! ಶುಭಾ ಪೂಂಜ, ರಾಧಿಕಾ ಪಂಡಿತ್, ಸಂಗೀತಾ ಶೆಟ್ಟಿ, ಮಾನಸಿ, ಹರ್ಷ, ಸ್ಕಂದ, ಮನೋಯ್, ಜೆ.ಡಿ.ನಾಗರಾಜ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಈಗಾಗಲೇ ಮನೋಮೂರ್ತಿಯವರ ಹಾಡುಗಳು ಜನಪ್ರಿಯವಾಗಿರುವುದು ಚಿತ್ರಕ್ಕೆ ಲಾಭವಾದರೂ ಆಗಬಹುದು. ಅಂದಹಾಗೆ ಇಂದ್ರ ಚಿತ್ರ 49 ದಿನಗಳ ನಂತರ ಸಾಗರ್‍ನಿಂದ ಹೊರ ನಡೆಯಲೇ ಬೇಕಾಗಿದೆ! 50 ನೇ ದಿನವನ್ನು ಸ್ವಪ್ನ ಚಿತ್ರಮಂದಿರದಲ್ಲಿ ಆಚರಿಸಬಹುದು!
  • jindagiಜಿಂದಗಿ - ಅಂದ್ಕೊಂಡಂಗಲ್ಲ ಮಗಾ : ಇದು ಕಾಮಣ್ಣನ ಮಕ್ಕಳನ್ನು ಹೊರದಬ್ಬಿ ಸಂತೋಷ್ ಚಿತ್ರಮಂದಿರದಲ್ಲಿ ಈ ವಾರ ತೆರೆಕಾಣಲಿರುವ ಚಿತ್ರ. ಮುಗಿಲ್ ಈ ಚಿತ್ರದ ನಿರ್ದೇಶಕರು. ಬಹುತೇಕ ಹೊಸಬರೇ ಇರುವ ಈ ಚಿತ್ರ ಚಿತ್ರ ಮತ್ತೊಂದು ದುನಿಯಾ ಆಗುತ್ತದೋ ಇಲ್ಲವೋ ಕಾದು ನೋಡಬೇಕು!
Image

ಮುಂದುವರಿದ ಪ್ರದರ್ಶನ :

  • ಅರಮನೆ (ಕೈಲಾಶ್) - 13 ನೇ ವಾರ (ಮೊದಲ 9 ವಾರ ಸಂತೋಷ್ ನಲ್ಲಿ)
  • ಮುಸ್ಸಂಜೆ ಮಾತು (ತ್ರಿವೇಣಿ) - 10 ನೇ ವಾರ
  • ನೀ ಟಾಟಾ ನಾ ಬಿರ್ಲಾ (ಕಪಾಲಿ) - 4 ನೇ ವಾರ
  • ಮೆರವಣಿಗೆ (ಅಪರ್ಣಾ) - 4 ನೇ ವಾರ


ಅತೀ ಶೀಘ್ರದಲ್ಲೇ..

  • ತಾಜ್ ಮಹಲ್ - ಜುಲೈ 25 ರಿಂದ
  • ಮಾದೇಶ
  • ಧಿಮಾಕು
  • ಬೊಂಬಾಟ್