ಅತ್ಯಂತ ಪ್ರತಿಷ್ಠಿತ ಚಲನ ಚಿತ್ರ ಪ್ರಶಸ್ತಿಗಳಲ್ಲೊಂದು ಎಂಬ ಹೆಗ್ಗಳಿಕೆ ಫಿಲ್ಮ್ ಫೇರ್ ಪ್ರಶಸ್ತಿಯದು. ಜೀವಮಾನದಲ್ಲೊಮ್ಮೆಯಾದರೂ ಈ ಪ್ರಶಸ್ತಿಗೆ ಭಾಜನರಾಗಬೇಕೆಂದು ಚಿತ್ರರಂಗದ ಎಲ್ಲರ ಕನಸು. ದಕ್ಷಿಣಭಾರತದ ಕನ್ನಡ, ತೆಲುಗು, ಮಳಯಾಳಂ ಮತ್ತು ತಮಿಳು ಚಿತ್ರಗಳಿಗೆ ಕಳೆದ ೫೫ ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೇವಲ ಉತ್ತಮ ಚಿತ್ರ, ನಟ, ನಟಿ ಮತ್ತು ನಿರ್ದೇಕರಿಗೆ ಮಾತ್ರ ಸೀಮಿತವಾಗಿದ್ದ ಪ್ರಶಸ್ತಿ ಕಳೆದ ಸಾಲಿನಿಂದ ಹಿನ್ನೆಲೆ ಗಾಯನ, ಗೀತರಚನೆ, ಪೋಷಕ ಪಾತ್ರಗಳಿಗೂ ವಿಸ್ತರಣೆಗೊಂಡಿರುವುದು ಉತ್ತಮ ಬೆಳವಣಿಗೆ!
ಕಳೆದ ಜುಲೈ 13 ರಂದು ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಅದ್ದೂರಿ ಸಮಾರಂಭದಲ್ಲಿ 55 ನೇ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪ್ರದಾನಮಾಡಲಾಯಿತು. ದಕ್ಷಿಣಭಾರತದ ನಾಲ್ಕೂ ಭಾಷೆಗಳ ಚಿತ್ರರಂಗದ ಪ್ರಮುಖರೆಲ್ಲ ಅಲ್ಲಿ ನೆರೆದಿದ್ದರು. ಜೊತೆಗೆ ಬಾಲಿವುಡ್ದಿನಿಂದ ಕೂಡ ಕೆಲವು ಅತಿಥಿಗಳು ಈ ಸಮಾರಂಭಕ್ಕೆ ಹಾಜರಾಗಿದ್ದರು.
2008 ರಲ್ಲಿ ಮಾಡಿದ ಸಾಧನೆಗಾಗಿ ಕನ್ನಡ ಚಿತ್ರರಂಗದಿಂದ ಪ್ರಶಸ್ತಿ ಸ್ವೀಕರಿಸಿದವರ ಪಟ್ಟಿ ಹೀಗಿದೆ.

- ಶ್ರೇಷ್ಠ ಚಿತ್ರ: ಆ ದಿನಗಳು
ಶ್ರೇಷ್ಠ ನಿರ್ದೇಶಕ: ಚೈತನ್ಯ (ಆ ದಿನಗಳು)
ಶ್ರೇಷ್ಠ ನಟ: ವಿಜಯ್ (ದುನಿಯಾ)
ಶ್ರೇಷ್ಠ ನಟಿ: ರಶ್ಮಿ(ದುನಿಯಾ)
ಶ್ರೇಷ್ಠ ಪೋಷಕ ನಟ: ಶರತ್ ಲೋಹಿತಾಶ್ವ (ಆ ದಿನಗಳು)
ಶ್ರೇಷ್ಠ ಪೋಷಕ ನಟಿ: ತಾರಾ ( ಈ ಬಂಧನ)
ಶ್ರೇಷ್ಠ ಸಂಗೀತ ನಿರ್ದೇಶಕ :ಮನೋಮೂರ್ತಿ (ಮಿಲನ)
ಶ್ರೇಷ್ಠ ಗಾಯಕ: ಸೋನು ನಿಗಮ್ (ನಿನ್ನಿಂದಲೇ..ಮಿಲನ)
ಶ್ರೇಷ್ಠ ಗಾಯಕಿ: ನಂದಿತಾ(ಕರಿಯ ಐ ಲವ್ ಯೂ.....ದುನಿಯಾ)
ಶ್ರೇಷ್ಠ ಸಾಹಿತಿ: ವಿ ಮನೋಹರ್(ಕಣ್ಣಲ್ಲೂ ನೀನೇನೆ..ಪಲ್ಲಕ್ಕಿ)
ಪ್ರಶಸ್ತಿ ಪಡೆದ ವಿಜಯ್-ರಶ್ಮಿ ಇಬ್ಬರೂ ಪ್ರಶಸ್ತಿ ಪಡೆದದ್ದಕ್ಕೆ ಅತೀವ ಹರ್ಷ ಪಟ್ಟರು! ಇವರ ಜೊತೆಗೆ ಚೈತನ್ಯ, ಶರತ್ ಲೋಹಿತಾಶ್ವ, ನಂದಿತಾರಿಗೆ ಕೂಡಾ ಇದು ಚೊಚ್ಚಲ ಫಿಲ್ಮ್ ಫೇರ್ ಗರಿ! ಮನೋಮೂರ್ತಿ ಕಳೆದ ಬಾರಿಯೂ ಮುಂಗಾರು ಮಳೆಗಾಗಿ ಈ ಪ್ರಶಸ್ತಿ ಪಡೆದಿದ್ದರು!
ಸೋನು ನಿಗಂ ಇದೇ ಮೊದಲ ಬಾರಿಗೆ ದಕ್ಷಿಣಭಾರತದ ಭಾಷೆಯಲ್ಲಿ ಅತ್ಯುತ್ತಮ ಗಾಯಕ
ಪ್ರಶಸ್ತಿಗೆ ಆಯ್ಕೆಯಾಗಿದ್ದು,ಆ ಪ್ರಶಸ್ತಿಗನ್ನು ಸ್ವೀಕರಿಸಲು ಸ್ವತಃ ಹಾಜರಾಗಿದ್ದರು!
ಅದು ನಮ್ಮ ಕನ್ನಡದ ಮಿಲನ ಚಿತ್ರದ "ನಿನ್ನಿಂದಲೇ" ಹಾಡಿಗಾಗಿ!. ಪ್ರಶಸ್ತಿ ಪಡೆದ ಸೋನು
ಕನ್ನಡ ನಾಡಿಗೆ ತಾನು ಚಿರ ಋಣಿ ಎಂದರು. ಮನೋ ಮೂರ್ತಿ ಮತ್ತು ಜಯಂತ್ ಕಾಯ್ಕಿಣಿಯವರನ್ನು
ಕೊಂಡಾಡಿದರು! ಅಲ್ಲದೇ ನಿನ್ನಿಂದಲೇ ಹಾಡನ್ನು ವೇದಿಕೆಯಲ್ಲಿ ಹಾಡಿದಾಗ ಕನ್ನಡ ಮಾತ್ರವಲ್ಲದೇ ಕನ್ನಡೆತರರೂ ಕೂಡ ಆ ಹಾಡಿನ ಮೋಡಿಗೆ ಒಳಗಾದರು!
ಪ್ರಶಸ್ತಿ ವಿಜೇತರೆಲ್ಲರಿಗೂ ಶುಭ ಹಾರೈಕೆಗಳು.

