"ಸೂಪರ್ ಮ್ಯಾನ್" ಪ್ರಜ್ವಲ್ ಗೆ ಪಾರ್ವತಿ ನಾಯಕಿ

akumar's picture
Tagged:  

ಪ್ರಜ್ವಲ್ ದೇವರಾಜ್ "ಸೂಪರ್ ಮ್ಯಾನ್" ಆಗೋಕೆ ಹೊರಟಿದ್ದಾರೆ. ಈ ಸೂಪರ್ ಮ್ಯಾನ್‍ನನ್ನು ನಿರ್ಮಿಸುತ್ತಿರುವವರು ಚಂದ್ರಶೇಖರ್. ಸೂಪರ್ ಮ್ಯಾನ್ ಹೇಗೆ ಹೇಗೆ ತನ್ನ ಚಮತ್ಕಾರ ಮಾಡಬೇಕು ಅಂತ ದಿಗ್ದರ್ಶನವನ್ನು ಕೊಡುವವರು ಪ್ರಭಾಕರ್. "ನಿನ್ನ ಪೂಜೆಗೆ ಬಂದೆ ಮಾದೇಶ್ವರ" ಅಂತ ಹಾಡಿ ಜನಪ್ರಿಯರಾಗಿರುವ ರಘು ದೀಕ್ಷಿತ್ ಈ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ.

ಅದ್ಸರಿ ನಂ ಸೂಪರ್ ಮ್ಯಾನ್ ಪ್ರಜ್ವಲ್‍ಗೆ ಒಂದು ಸೂಪರ್ ಆಗಿರೋ ನಾಯಕಿ ಬೇಡ್ವಾ? ಇಲ್ಲಿದೆ ತಾಜಾ ಸುದ್ದಿ ಕೇಳಿ.. ಮಿಲನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ನಟಿಸಿ ಗಮನ ಸೆಳೆದ ಕೇರಳದ ಚೆಲುವೆ ಪಾರ್ವತಿ ಸೂಪರ್ ಮ್ಯಾನನ ಸೂಪರ್ ವುಮನ್ ಆಗಲಿದ್ದಾರೆ.

ಮಿಲನ ಚಿತ್ರದ ಯಶಸ್ಸಿನಲ್ಲಿ ಮನೋ ಮೂರ್ತಿಯವರ ಸಂಗೀತ ಎಷ್ಟು ಕೆಲಸ ಮಾಡಿದೆಯೋ ಹಾಗೆಯೇ ಪಾರ್ವತಿಯ ಪಾಲೂ ಸಾಕಷ್ಟಿದೆ. ಪಕ್ಕದ ಮನೆ ಹುಡೂಗಿ ಥರ ನಟಿಸಿ ಹೆಂಗಳೆಯರಿಗೆ ಇಷ್ಟವಾಗಿದ್ದ ಪಾರ್ವತಿ ತಮಿಳು ತೆಲುಗು ಮಳಯಾಳಿ ಚಿತ್ರಗಳಲ್ಲೂ ಈಗಾಗಲೇ ನಟಿಸಿದ್ದಾರೆ. "ಸೂಪರ್ ಮ್ಯಾನ್" ಆಕೆಗೆ ಕನ್ನಡದಲ್ಲಿ ಎರಡನೇ ಚಿತ್ರ.