ಗಾಂಧೀ ನಗರ ಈ ವಾರ (ಜುಲೈ 4 ರಿಂದ ಜುಲೈ 9)
ಈ ವಾರ ಯಾವುದೇ ಹೊಸ ಕನ್ನಡ ಚಿತ್ರಗಳ ಬಿಡುಗಡೆ ಇಲ್ಲ. ಹಿಂದಿಯಲ್ಲಿ ಮತ್ತೆರಡು ದೊಡ್ಡ ಚಿತ್ರಗಳ ಬಿಡುಗಡೆಯಾಗುತ್ತಿದೆ. ಇವು ಕನ್ನಡ ಚಿತ್ರಗಳ ಮೇಲೆ ಕೊಂಚ ಪರಿಣಾಮ ಬೀರಬಹುದು. ಈ ವಾರ ಮೇನಕಾ ಚಿತ್ರಮಂದಿರ ಕೂಡ ತೆಲಗು ಚಿತ್ರದ ಪಾಲಾಗಲಿದೆ. ಮುಂದಿನವಾರ ಮುರಳಿ-ವಿಜಯ್ ರಾಘವೇಂದ್ರ ನಟನೆಯ "ಮಿಂಚಿನ ಓಟ" ತೆರೆಗೆ ಬರಲಿದೆ.
ಮುಸ್ಸಂಜೆ ಮಾತಿಗೆ ಭರ್ಜರಿ 50 ದಿನಗಳ ಸಂಭ್ರಮ: ಕಿಚ್ಚ ಸುದೀಪ್-ರಮ್ಯಾ ಅಭಿನಯದ "ಮುಸ್ಸಂಜೆ ಮಾತು" ಈ ವಾರ ತ್ರಿವೇಣಿಯಲ್ಲಿ ಅರ್ಧ ಶತಕ ಪೂರೈಸಲಿದೆ. PVR ನಲ್ಲೂ 50 ದಿನಗಳನ್ನು ಪೂರಸಿರುವುದು ಸಂತಸದ ವಿಷಯ!
ಹೊಸ ಆಡಿಯೋ ಬಿಡುಗಡೆಗಳು :
೧. ಬೊಂಬಾಟ್ (ಗಣೇಶ್ - ರಮ್ಯಾ): ಸಂಗೀತ: ಮನೋ ಮೂರ್ತಿ.
೨. ಧಿಮಾಕು (ನವೀನ್ ಕೃಷ್ಣ): ಸಂಗೀತ: ಅರ್ಜುನ್
೩. ಪಟ್ರೆ ಲವ್ಸ್ ಪದ್ಮಾ

