ಮಾದೇಶನ ಹಾಡುಗಳನ್ನು ಇನ್ನೂ ಕೇಳಿಲ್ವಾ!? ಮೊದ್ಲು ಕೇಳಿ...

akumar's picture

ಮಾದೇಶ ಚಿತ್ರದ ಆಡಿಯೋ ವಿಮರ್ಷೆಗೂ ಮೊದಲು ಈ ಚಿತ್ರದ ಒಂದಿಷ್ಟು ವಿಶೇಷತೆಗಳನ್ನು ನೋಡೋಣ..

  • ಶಿವರಾಜ್ ಕುಮಾರ್ ಚಿತ್ರಕ್ಕೆ ಮೊಟ್ಟ ಮೊದಲ ಬಾರಿಗೆ ಮನೋ ಮೂರ್ತಿಯವರ ಸಂಗೀತ!
  • ಆಕ್ಷನ್ ಆಧಾರಿತ ಚಿತ್ರಕ್ಕೆ ಈವರೆಗೂ ಕೈ ಹಾಕಿರದ ಮನೋಮೂರ್ತಿಯವರಿಂದ ಚೊಚ್ಚಲ ಪ್ರಯತ್ನ!
  • ಕನ್ನಡದ ಇನ್ನೋರ್ವ ಅಗ್ರ ಶ್ರೇಯಾಂಕಿತ ಗುರುಕಿರಣ್ ಮೊದಲ ಬಾರಿಗೆ ಮನೋಮೂರ್ತಿ ಸಂಗೀತಕ್ಕೆ ಹಾಡಿರುವುದು!
  • ಮನೋಮೂರ್ತಿ, ಜಯಂತ್ ಕಾಯ್ಕಿಣಿ, ಸೋನು ನಿಗಂ-, ಶ್ರೇಯಾ ಗೋಶಾಲ್ - ಹೀಗೆ ಮುಂಗಾರು ಮಳೆಯ ಅತಿರಥರೆಲ್ಲರ ಸಮಾಗಮ!

ಚಿತ್ರ - ಮಾದೇಶ (2008)
ಸಂಗೀತ - ಮನೋ ಮೂರ್ತಿ
ನಿರ್ದೇಶಕ - ರವಿ ಶ್ರೀವತ್ಸ
ನಿರ್ಮಾಪಕ - ಜಿ.ಎಂ.ಗೋವರ್ಧನ ಮೂರ್ತಿ
ಆಡಿಯೋ ಸಂಸ್ಥೆ - ಬಿಗ್ ಮ್ಯೂಸಿಕ್.
ತಾರಾಗಣ - ಶಿವರಾಜ್ ಕುಮಾರ್, ರವಿ ಬೆಳಗೆರೆ, ರವಿ ಕಾಳೆ, ಸೋನಂ
ಹಾಡುಗಳನ್ನು ಅವುಗಳಿಗೆ ಕೊಡಲಾಗಿರುವ ಅಂಕಗಳ ಆರೋಹಣ ಕ್ರಮದಲ್ಲಿ ನೋಡೋಣ!

  1. ಗಂಟು ಗಂಟು - (ಸಾಹಿತ್ಯ: ಹೃದಯ ಶಿವ. ಗಾಯನ: ಹೇಮಂತ್, ಕೇಶವ್, ಶ್ರೀವಿದ್ಯಾ) : ಹೀಗೆ ಕೇಳಿ, ಹಾಗೆ ಮರೆಯಬಹುದಾದ ಹಾಡು. ಸಾಹಿತ್ಯ, ಸಂಗೀತ ಎರಡೂ ಸಾಧಾರಣ.
    5/10
  2. ತಾರಮ್ಮಯ್ಯ - (ಸಾಹಿತ್ಯ: ವಿ. ಮನೋಹರ್; ಗಾಯನ: ಸುನಿಧಿ ಚೌಹಾಣ್, ಹೇಮಂತ್) : ಆಂಗ್ಲ ಪದಗಳನ್ನು ಧಾರಾಳವಾಗಿ ಬಳಸಲಾಗಿದೆ. ಮತ್ತೊಂದು ಸಾಧಾರಣವಾದ ಗೀತೆ. ಸಾಹಿತ್ಯದಲ್ಲಾಗಲೀ, ಹಾಡಿನಲ್ಲಾಗಲಿ ನೆನಪಿನಲ್ಲುಳಿಯುವ ಅಂಶ ಯಾವುದೂ ಇಲ್ಲ.
    5.5/10
  3. ಮುಂಜಾನೆ ಮಂಜಾಗು - (ಸಾಹಿತ್ಯ: ಕವಿರಾಜ್; ಗಾಯನ: ಸುನಿಧಿ ಚೌಹಾಣ್, ಕುನಾಲ್ ಗಂಜಾವಾಲ) : ಕೇಳಲು ಇಂಪಾದ ಯುಗಳ ಗೀತೆ. ಹಿನ್ನೆಲೆ ಸಂಗೀತ ಕೂಡ ಚೆನ್ನಾಗಿದೆ.
    6/10
  4. ಮಾದೇಶ, ಮಾದೇಶ, ಮಾದೇಶ - (ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್; ಗಾಯನ: ಗುರುಕಿರಣ್) : ಭೂಗತ ಲೋಕವನ್ನು ಬಣ್ಣಿಸುವ ಲಯ ಪ್ರಧಾನ ಗೀತೆ. Brilliant Singing By Guru!
    7/10
  5. ಲಹರಿ ಲಹರಿ - (ಸಾಹಿತ್ಯ: ಜಯಂತ್ ಕಾಯ್ಕಿಣಿ; ಗಾಯನ: ಶ್ರೇಯಾ ಗೋಶಾಲ್) : ಜಯಂತ್ ಬರೆದಿದ್ದಾರೆ ಎಂದ ಮೇಲೆ ಸಾಹಿತ್ಯದ ಬಗ್ಗೆ ಎರಡು ಮಾತಿಲ್ಲ! ಇದೇ ಹಾಡನ್ನು ಸೋನು ನಿಗಂ ಕೂಡ ಹಾಡಿದ್ದಾರೆ... ಮಾಧುರ್ಯದ ವಿಚಾರದಲ್ಲಿ ಶ್ರೇಯಾ, ಸೋನು ಇಬ್ಬರೂ ಒಬ್ಬರಿಗೊಬ್ಬರು ಪೈಪೋಟಿ ನೀಡುವಂತೆ ಇಂಪಾಗಿ ಹಾಡಿದ್ದಾರೆ. ಆದರೆ ಶುದ್ಧವಾದ ಕನ್ನಡ ಉಚ್ಚಾರದ ವಿಚಾರದಲ್ಲಿ ಶ್ರೇಯಾಗೆ ಸ್ವಲ್ಪ ಹೆಚ್ಚು ಅಂಕ. ಉಚ್ಚಾರದಲ್ಲಿ ಸೋನು ಒಂದೆರಡು ಕಡೆ ಚಿಕ್ಕ ಪುಟ್ಟ ವ್ಯತ್ಯಾಸ ಮಾಡೀದ್ದಾರೆ. ಉದಾಹಣೆಗೆ ಪಲ್ಲವಿಯಲ್ಲಿ "ನನ್ನಾ ಮನವ ಸವರಿ" ಎನ್ನುವಲ್ಲಿ "ನನ್ನಾ ಮನವ ಸಾವರಿ" ಎಂದಿದ್ದಾರೆ. ಬಹುಕಾಲ ಕಾಡುವ ಗೀತೆ!
    ಸೋನು ಗಾಯನಕ್ಕೆ 8/10. ಶ್ರೇಯಾ ಗಾಯನಕ್ಕೆ 8.5/10
  6. ತಿರುಗೋ ಭೂಮಿಗೆ - (ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್, ಕವಿರಾಜ್; ಗಾಯನ - ವಿಜಯ್ ಪ್ರಕಾಶ್) : 9/10.
    ಗೀತೆಯ ಬಗ್ಗೆ ಅಂಕವೇ ಮಾತಾಡುತ್ತದೆ.. ನಾನೇನೂ ಹೇಳುವ ಅಗತ್ಯವಿಲ್ಲ ತಾನೇ.. BEST SONG OF THE ALBUM. ಈ ವಿಮರ್ಷೆ ಬರೆಯುವಷ್ಟರಲ್ಲೇ ಮೂರ್ನಾಲ್ಕು ಬಾರಿ ಕೇಳಿದ್ದೇನೆಂದರೆ ಊಹಿಸಿ ಇದರ ಪ್ರಭಾವ. ಮನೋ ಮೂರ್ತಿ ಸಾರ್, ನಿಮಗೆ ಮೆಲೋಡಿ ಅಷ್ಟೇ ಅಲ್ಲ, ಈ ರೀತಿಯ ಹಾಡಿಗೂ ಅದ್ಭುತವಾಗಿ ಸಂಗೀತ ಕೊಡಲು ಬರುತ್ತದೆ ಸಾರ್.. ನಿಮಗೂ, ವಿಜಯ್ ಪ್ರಕಾಶ್ ಇಬ್ಬರಿಗೂ HATS OFF!. ನನ್ನ ಪ್ರಕಾರ ನಮ್ಮ ಕನ್ನಡದ ಹುಡುಗ ವಿಜಯ್ ಹಾಡಿರುವ ಈ ಗೀತೆ ಉಳಿದೆಲ್ಲಾ ಗೀತೆಗಳಿಗಿಂತ ಉತ್ತಮವಾಗಿ ಮೂಡಿ ಬಂದಿದೆ. ಗಾಳಿಪಟ ಚಿತ್ರದ "ಕವಿತೆ, ಕವಿತೆ" ಕೇಳಿದಾಗಲೇ ಈತನ ಬಗ್ಗೆ ಭರವಸೆ ಮೂಡಿತ್ತು! ಈ ಹಾಡಿನಿಂದ ಅದು ಮತ್ತೊಮ್ಮೆ ಸಾಬೀತಾಗಿದೆ.

ಇದಲ್ಲದೇ ಗಾಯತ್ರಿ ಮಂತ್ರಕ್ಕೆ ಕೂಡ ವಿಭಿನ್ನವಾದ ಟಚ್ ನೀಡಲಾಗಿದೆ. ಉತ್ತಮ ಪ್ರಯತ್ನ.