ಆ ದಿನಗಳು ಚಿತ್ರದ ಯಶಸ್ಸಿನ ರೂವಾರಿಗಳಲ್ಲಿ ಪ್ರಮುಖರಾದ ನಿರ್ದೇಶಕ ಚೈತನ್ಯ, ಸಂಗೀತ ನಿರ್ದೇಶಕ ಇಳೆಯರಾಜ ಛಾಯಾಗ್ರಾಹಕ ವೇಣು ಮತ್ತು ನಾಯಕ ಚೇತನ್ ಮತ್ತೆ ಒಂದಾಗಿದ್ದಾರೆ! ಆದರೆ ಈ ಬಾರಿ ಚೈತನ್ಯ ಆರಿಸಿಕೊಂಡಿರುವ ವಸ್ತು ಪ್ರೇಮ ಕಥೆ!.
ಚಿತ್ರೀಕರಣಕ್ಕೆ ಮುಖ್ಯವಾಗಿ ಭೂತಾನ್ ಮತ್ತು ಮುಂಬೈ ನಗರಿಯನ್ನು ಆಯ್ದುಕೊಳ್ಳಲಾಗಿದೆ. ಚೈತನ್ಯ ಪ್ರಕಾರ ಚಿತ್ರದ ಕಥೆ ಭೂತಾನ್‍ನ ಸುಂದರ ಪರ್ವತ ಶ್ರೇಣಿಗಳು ಮುಂಬೈನ ಕರಾಳ ಬೀದಿಗಳ ನಡುವೆ ಸಮಾನಾಂತರವಾಗಿ ನಡೆಯಲಿದೆ. ಚಿತ್ರದ ಪಾತ್ರಗಳು ಕೂಡ! ಹಾಗಾಗಿ ಇದು ವಿಭಿನ್ನ ಪ್ರೇಮ ಕಥಾ ಚಿತ್ರವಾಗಿರಲಿದೆ ಎನ್ನುತ್ತಾರೆ ಚೈತನ್ಯ.

