akumar's blog

akumar's picture

ಮೊಗ್ಗಿನ ಮನಸಲ್ಲಿ ಮತ್ತೆ ಮಿಂದ ಖುಷಿ!

ಇಂದು ಮೊಗ್ಗಿನ ಮನಸು ಚಿತ್ರವನ್ನು ಮತ್ತೊಮ್ಮೆ ತೆರೆಯ ಮೇಲೆ ವೀಕ್ಷಿಸುವ ಅವಕಾಶ ಒದಗಿ ಬಂತು! ಅದಕ್ಕಾಗಿ ನನ್ನ ಸಹೋದ್ಯೋಗಿ ಸಾಯಿಪ್ರಸಾದ್‍ಗೆ ಧನ್ಯವಾದಗಳು! ಹೇಗೂ ಈ ವಾರ ನಮ್ಮ ಮನೆಯ ಸಮೀಪದ ಮುಕುಂದ ಟಾಕೀಸಿಗೆ ಮೊಗ್ಗಿನ ಮನಸು ಬಂದಿರುವ ವಿಷಯ ನೆನಪಾಗಿ, ಸಂಜೆ ಹೋಗೋಣ ಎಂದೆ.. ಅವನೂ ಫ್ರೀ ಆಗಿದ್ದ. ಸರಿ ಸಂಜೆ 5.30ರ ಶೋಗೆ ಹೊರಟೆವು...
akumar's picture

ಗಂಧದಗುಡಿ ಫ್ಲಾಶ್ ಬ್ಯಾಕ್ 5 : ನಾಗರಹಾವು !

ffವಿಷ್ಣುವರ್ಧನ್ ಮತ್ತು ಅಂಬರೀಶ್ ಎಂಬಿಬ್ಬರು ಮಹಾನ್ ತಾರೆಯರನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ 1972 ರಲ್ಲಿ ತೆರೆಕಂಡ ನಾಗರಹಾವು ಚಿತ್ರದ್ದು. ನಾಗರಹಾವು ಚಿತ್ರದ ನಿರ್ದೇಶಕರು ಯಾರೆಂದು ಗೊತ್ತು ತಾನೇ? ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ಬೆರಗಾಗಿ ನೋಡುವಂತೆ ಮಾಡಿದ ಸ್ಟಾರ್ ನಿರ್ದೇಶಕ ಪುಟ್ಟಣ್ಣ ಕಣಗಾಲ್! ತ.ರಾ.ಸುಬ್ಬರಾಯರ ಸುಪ್ರಸಿದ್ಧ ಕಾದಂಬರಿ ನಾಗರಹಾವು ಪುಟ್ಟಣ್ಣನವರ ದಿಗ್ದರ್ಶನದಲ್ಲಿ ಅದೇ ಹೆಸರಿನ ಚಲನಚಿತ್ರವಾಯಿತು. 


 
akumar's picture

ಗಂಧದಗುಡಿ ಫ್ಲಾಶ್ ಬ್ಯಾಕ್ 4 : ಕಸ್ತೂರಿ ನಿವಾಸ!

hh2006ರಲ್ಲಿ ಡಾ.ರಾಜ್ ನಮ್ಮನ್ನಗಲಿದ ದಿನ ಯಾವುದೇ ಟಿ.ವಿ. ಚಾನೆಲ್ ಹಾಕಿದರೂ ಒಂದೇ ಹಾಡು... "ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ! ಸೂತ್ರವ ಹರಿದ ಬೊಂಬೆಯ ಮುರಿದು ಮಣ್ಣಾಗಿಸಿದ..." ಇದು ಡಾ. ರಾಜ್ ಕುಮಾರ್ ಅಭಿನಯದ ಕಸ್ತೂರಿ ನಿವಾಸ ಚಿತ್ರದ ಅಜರಾಮರ ಹಾಡು. ಕನ್ನಡದ ಮೇರು ನಟ ಡಾ. ರಾಜ್ ಕುಮಾರ್ ಚಿತ್ರ ಬದುಕಿನ ಅವಿಸ್ಮರಣೀಯ ಚಿತ್ರಗಳಲ್ಲಿ 1971ರಲ್ಲಿ ತೆರೆಕಂಡ ಕಸ್ತೂರಿ ನಿವಾಸ ಅತ್ಯಂತ ಪ್ರಮುಖವಾದ ಮೈಲಿಗಲ್ಲು.
akumar's picture

ಮಳೆ ನಿಂತು ಹೋದ ಮೇಲೆ ಖುಷಿ ಮತ್ತೆ ಬಂದಿದೆ...

ಕಳೆದ ವರ್ಷವಿಡೀ ಬೆಂಗಳೂರಿನ ಪಿವಿಆರ್ ಎಂಬ ಕಾಸ್ಮೋ ಚಿತ್ರಮಂದಿರದಲ್ಲಿ ಕನ್ನಡದ ಮುಂಗಾರು ಮಳೆ ಧಾರಾಕಾರವಾಗಿ ಸುರಿದು ಇಡೀ ದೇಶವೇ ಅಚ್ಚರಿ ಪಡುವಂತೆ ಮಾಡಿತ್ತು. ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸತತವಾಗಿ ಪ್ರದರ್ಶನಗೊಂಡ ದೇಶದ ಮೊಟ್ಟ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಮುಂಗಾರು ಮಳೆ ಪಾತ್ರವಾಗಿದ್ದು ಈಗ ಇತಿಹಾಸ. ಇದೀಗ ಮತ್ತೊಂದು ಚಿತ್ರ ಅದೇ ಹಾದಿಯಲ್ಲಿದೆ. ಅದೂ ಕೂಡ ಕನ್ನಡ ಚಿತ್ರವೇ ಎನ್ನುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರ! ಕಳೆದ ವರ್ಷ ಸಪ್ಟೆಂಬರ್‍ನಲ್ಲಿ ತೆರೆಕಂಡ ಮಿಲನ ಇದೇ ಪಿವಿಆರ್‍ನಲ್ಲಿ ಇನ್ನೆರಡು ವಾರಗಳಲ್ಲಿ ಒಂದು ವರ್ಷ ಪೂರೈಸಲಿದೆ.
akumar's picture

ಗಂಧದಗುಡಿ ಫ್ಲ್ಯಾಶ್ ಬ್ಯಾಕ್ 3: ಭೂತಯ್ಯನ ಮಗ ಅಯ್ಯು

baಕನ್ನಡ ಚಿತ್ರರಂಗದ ಅತ್ಯುತ್ತಮ ಚಿತ್ರಗಳನ್ನು ಪಟ್ಟಿಮಾಡಿದರೆ ಅದರಲ್ಲಿ ಭೂತಯ್ಯನ ಮಗ ಅಯ್ಯು ಚಿತ್ರ ಮೊದಲ ಸಾಲಿನಲ್ಲಿರುತ್ತದೆ. 1974 ರಲ್ಲಿ ತೆರೆಕಂಡ ಈ ಚಿತ್ರ ಒಂದು ಮಾದರಿ ಚಿತ್ರ ಹೇಗಿರಬೇಕು ಎಂಬುದಕ್ಕೆ ಈಗಲೂ ಒಳ್ಳೆಯ ಉದಾಹರಣೆ. ಖ್ಯಾತ ಸಾಹಿತಿ ಗೋರೂರು ರಾಮಸ್ವಾಮಿ ಅಯ್ಯಂಗಾರರ ಕಾದಂಬರಿಯನ್ನು ಆಧರಿಸಿ ಸಿದ್ಧಲಿಂಗಯ್ಯನವರುಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಲೋಕೇಶ್, ಎಂ.ಪಿ.ಶಂಕರ್, ವಿಷ್ಣುವರ್ಧನ್ ಅಭಿನಯ, ಡಿ.ವಿ.ರಾಜಾರಾಂ ಛಾಯಾಗ್ರಹಣಗಳು ಚಿತ್ರದ ಜೀವಾಳ. ಚಿತ್ರದ ಛಾಯಾಗ್ರಹಣ ಮತ್ತೊಂದು ಆಕರ್ಷಣೆ. ಎಲ್.ವಿ.ಶಾರದ, ಲೋಕನಾಥ್,ಭವಾನಿ ಕೂಡ ಅತ್ಯುತ್ತಮ ಅಭಿನಯ ನೀಡಿದ್ದಾರೆ.
akumar's picture

ಗಂಧದಗುಡಿ ಫ್ಲ್ಯಾಶ್ ಬ್ಯಾಕ್ 2: ಸನಾದಿ ಅಪ್ಪಣ್ಣ

saa"ಕರೆದರೂ ಕೇಳದೇ.. ಸುಂದರನೆ ಏಕೆ ನನ್ನಲ್ಲಿ ಈ ಮೌನ", "ರಾಗ ಅನುರಾಗ,ಶುಭಯೋಗ ಸೇರಿದೆ" ಆಹಾ, ಎಂಥಹ ಮಧುರವಾದ ಹಾಡುಗಳು. ಕನ್ನಡಿಗರುಈ ಹಾಡುಗಳನ್ನು ಎಂದಿಗಾದರೂ ಮರೆಯಲು ಸಾಧ್ಯವೇ?  1977 ರಲ್ಲಿ  ತೆರೆಕಂಡ "ಸನಾದಿ ಅಪ್ಪಣ್ಣ" ಚಿತ್ರದ ಹಾಡುಗಳಿವು. ಶಹನಾಯಿ ಮಾಂತ್ರಿಕ ಭಾರತರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಈ ಚಿತ್ರಕ್ಕೆ ಶಹನಾಯಿ ಒದಗಿಸಿರುವುದು ಚಿತ್ರದ ಪ್ರಮುಖ ಆಕರ್ಷಣೆಗಳಲ್ಲೊಂದು. ಡಾ. ರಾಜ್ ಕುಮಾರ್ ಅವರೇ ಸ್ವತಃ ಶಹನಾಯಿ ನುಡಿಸಿದ್ದಾರೋ ಎಂಬಂತೆ ಶಹನಾಯಿ ವಾದಕ ಅಪ್ಪಣ್ಣನ ಪಾತ್ರದಲ್ಲಿ ರಾಜ್ ಪರಕಾಯ ಪ್ರವೇಶ ಮಾಡಿರುವುದು ಇಡೀ ಚಿತ್ರದ ಜೀವಾಳ.
akumar's picture

ಗಂಧದಗುಡಿ ಫ್ಲ್ಯಾಶ್ ಬ್ಯಾಕ್ : ಹೊಂಬಿಸಿಲು

1978 ರಲ್ಲಿ ತೆರೆಕಂಡ "ಹೊಂಬಿಸಿಲು" ಮಧುರವಾದ ಹಾಡುಗಳಿಂದ ಕನ್ನಡ ಚಿತ್ರರಸಿಕರ ಎದೆಯಲ್ಲಿ ಇಂದಿಗೂ ನೆಲೆಸಿರುವ ಒಂದು ಸುಂದರ ಕಲಾಕೃತಿ. ಒಂದು ಒಳ್ಳೆಯ ಚಿತ್ರ ತಯಾರಾಗುವ ಕಾಲ ಬಂದರೆ ಎಲ್ಲವೂ ತಾನಾಗಿಯೇ ಜೊತೆಗೂಡುತ್ತವೆ ಎಂಬುದಕ್ಕೆ "ಹೊಂಬಿಸಿಲು" ಅತ್ಯುತ್ತಮ ಉದಾಹರಣೆ. ಇಂತಹ ಪ್ರಯತ್ನವನ್ನು ಜನರೂ ತುಂಬು ಹೃದಯದಿಂದ ಸ್ವೀಕರಿಸುತ್ತಾರೆ ಎಂಬುದನ್ನು ಸಹ ಈ ಚಿತ್ರ ಸಾಬೀತು ಮಾಡಿದೆ.
akumar's picture

2008 - ಪೂರ್ವಾರ್ಧದ ಏಳು ಬೀಳುಗಳತ್ತ ಒಂದು ನೋಟ !

೨೦೦೮ ಬಂದು ಆಗಲೇ ಆರು ತಿಂಗಳುಗಳು ಆಗುತ್ತಾ ಬಂತು. ಈ ಅರ್ಧ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಹೇಗೆ? ಗೆದ್ದವರಾರು, ಸೋತವರ್ಯಾರು?  read more »

Syndicate content