ಆರಕ್ಷಕನಾಗಿ ಉಪೇಂದ್ರ…!!


ಜನವರಿ 26 ರಿಂದ ಫೆಬ್ರವರಿ 2 ರ ವರೆಗೆ

ಆಪ್ತಮಿತ್ರ, ಆಪ್ತ ರಕ್ಷಕ ಚಿತ್ರಗಳ ರೂವಾರಿ ಪಿ.ವಾಸು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಸೂಪರ್ ಸ್ಟಾರ್ ಉಪೇಂದ್ರ ನಾಯಕತ್ವದ ಬಹುನಿರೀಕ್ಷಿತ ಚಿತ್ರ ‘ಆರಕ್ಷಕ‘ ಈ ವಾರ, ಜನವರಿ 26, 2012 ಕ್ಕೆ ಬಿಡುಗಡೆ ಆಗುತ್ತಿದೆ. ಗಣರಾಜ್ಯೋತ್ಸವದ ದಿನ ಆರಕ್ಷಕ ಪ್ರತ್ಯಕ್ಷ ಆಗುತ್ತಿದ್ದಾನೆ. ಬಹುದಿನಗಳಿಂದ ತೆರೆಯಮೇಲೆ ಬಾರದ ಉಪೇಂದ್ರ  ಈ ಚಿತ್ರದಲ್ಲಿ ಪೋಲೀಸ್ ಮತ್ತು ಮಾನಸಿಕ ರೋಗಿಯ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದಾ, ರಾಗಿಣಿ, ಸೀತಾ ಚಿತ್ರದ ಇತರ ಪಾತ್ರಗಲಲ್ಲಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದು ಹಾಡುಗಳು ಕೂಡ ಯಶಸ್ವಿಯಾಗಿವೆ.

ಉಪೇಂದ್ರ ಅವರ ವಿಭಿನ್ನ ಗೆಟಪ್ ಮತ್ತು ಪಿ.ವಾಸು ಚಿತ್ರಗಳ ಮೇಲಿನ ವಿಶ್ವಾಸ ಇವೆರಡೂ ಕಾರಣಗಳಿಂದಾಗಿ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ. 25 ಅಡಿ ಉದ್ದ ಹಾಗೂ 10 ಅಡಿ ಅಗಲವಿರುವ ಬಾಟಲ್ ನೊಳಕ್ಕೆ ಉಪೇಂದ್ರ ಭಾವಚಿತ್ರವಿರಿಸಿ ಸಾಗರ್ ಚಿತ್ರಮಂದಿರದ ಮುಂದೆ ನಿಲ್ಲಿಸುವುದಾಗಿ ನಿರ್ಮಾಪಕ ಕೃಷ್ಣ ಪ್ರಜ್ವಲ್ ಹೇಳಿದ್ದಾರೆ.  ಚಿತ್ರ ನಿರೀಕ್ಷೆಗಳನ್ನು ಹೇಗೆ ಮುಟ್ಟಲಿದೆ…….. ಕಾದು ನೋಡೋಣ..

 

ಆರಕ್ಷಕ:

  • ಚಿತ್ರ ಪ್ರಭೇದ: ಪತ್ತೇದಾರಿ, ರೋಚಕ

  • ತಾರಾಗಣ:  ಉಪೇಂದ್ರ, ಸದಾ, ರಾಗಿಣಿ, ಸೀತ

  • ಸಂಗೀತ: ಗುರುಕಿರಣ್

  • ನಿರ್ಮಾಣ: ಕೃಷ್ಣ ಪ್ರಜ್ವಲ್

  • ನಿರ್ದೇಶನ: ಪಿ.ವಾಸು

  • ಗಾಂಧೀನಗರದ ಮುಖ್ಯ ಚಿತ್ರಮಂದಿರ:  ಸಾಗರ್

 

ಕಿಚ್ಚ ಸುದೀಪ್ ನಟನೆಯ ವಿಷ್ಣುವರ್ಧನ ಯಶಸ್ವೀ 50 ದಿನಗಳನ್ನು ಪೂರೈಸುತ್ತಿದೆ. ಅಭಿನಂದನೆಗಳು!

ಯಾವ ಚಿತ್ರ ಎಷ್ಟನೇ ವಾರದಲ್ಲಿ ಯಾವ ಚಿತ್ರಮಂದಿರದಲ್ಲಿ
ಸಿದ್ಲ್ಲಿಂಗು
3 ನೇ ವಾರ ತ್ರಿವೇಣಿ
ಕೊ ಕೋ ಕೋಳಿ ಕೋತಿ 3 ನೇ ವಾರ ನರ್ತಕಿ
ಶಕ್ತಿ
4 ನೇ ವಾರ ಕಪಾಲಿ
ವಿಷ್ಣುವರ್ಧನ 8 ನೇ ವಾರ ಸಂತೋಷ್
ಸಾರಥಿ 18 ನೇ ವಾರ (ಸಂಯೋಜಿತ. ಮೂಲ ಚಿತ್ರಮಂದಿರ: ನರ್ತಕಿ) ಮೇನಕಾ

ಮುಖ್ಯ ಚಿತ್ರಮಂದಿರದಿಂದ ಹೊರಕ್ಕೆ

ಯಾವ ಚಿತ್ರ ಒಟ್ಟು ಪ್ರದರ್ಶನ ಯಾವ ಚಿತ್ರಮಂದಿರದಿಂದ ಷರಾ
ಶೈಲೂ 7 ವಾರಗಳು ಸಾಗರ್ ಸಾಧಾರಣ ಯಶಸ್ಸು (HIT)

ಹರ್ಷ ನಿರ್ದೇಶನದ ದರ್ಶನ್ ನಟನೆಯ ಬಹು ನಿರೀಕ್ಷಿತ ಸ್ಟೈಲಿಷ್ ಚಿಂಗಾರಿ ಮುಂದಿನ ವಾರ, ಫೆಬ್ರವರಿ 3 ರಂದು ತೆರೆಕಂಡರೆ ಫೆಬ್ರವರಿ 10ಕ್ಕೆ ಗವಿಪುರ, AK56 ಮತ್ತು ತುಘ್ಹಲಕ್ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ!

 

 

- AKumar