ಈ ವಾರ ಹೆಸರಿಗೆ ಮಾತ್ರ ಸುನಾಮಿ…


ಜನವರಿ 20 ರಿಂದ 26 ರ ವರೆಗೆ

ಈ ವಾರ ಹೆಸರಿಗೆ ಮಾತ್ರ “ಸುನಾಮಿ” ಎಂಬ ಚಿಕ್ಕ ಬಜೆಟ್ ನ ಚಿಕ್ಕ ಚಿತ್ರ ಬೀಡುಗಡೆಯಾಗುತ್ತಿದೆ. ಆದರೆ ನಿಜವಾದ ಸುನಾಮಿ ಬರುವ ಎರಡು ವಾರಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಬರಲಿದೆ! ಉಪೇಂದ್ರ ಅಭಿನಯದ ಪಿ.ವಾಸು ನಿರ್ದೇಶನದ ಮಹತ್ವಾಕಾಂಕ್ಷೆಯ “ಆರಕ್ಷಯ” ಜನವರಿ 26ರ ಗುರುವಾರವೇ ತೆರೆಗೆ ಬರುತ್ತಿದೆ.. ಅದಾಗಿ ಒಂದೇ ವಾರಕ್ಕೆ ಹರ್ಷ ನಿರ್ದೇಶನದಲ್ಲಿ ದರ್ಶನ್ ಅಭಿನಯಿಸಿರುವ ಸಖತ್ ಸ್ಟೈಲಿಷ್ “ಚಿಂಗಾರಿ” ಕೂಡ ಬರುತ್ತಿದೆ!…. ಗಾಂಧೀನಗರದ ಮಟ್ಟಿಗೆ ಇದೊಂದು ಸುನಾಮಿಯೇ ಸರಿ!

ಸುನಾಮಿ:

  • ಚಿತ್ರ ಪ್ರಭೇದ: ಸಾಹಸ ಪ್ರಧಾನ

  • ತಾರಾಗಣ: ರಾಜಾ, ಪೂನಂ, ರಂಗಾಯಣ ರಘು

  • ಸಂಗೀತ: ಸದ್ಗುಣ ರಾಜಾ

  • ನಿರ್ಮಾಣ: ರಾಜು ಪಾಟೀಲ್

  • ನಿರ್ದೇಶನ: ಮಾಕಂ ಶ್ರೀ ಮನೋಹರ

  • ಗಾಂಧೀನಗರದ ಮುಖ್ಯ ಚಿತ್ರಮಂದಿರ:  ಅನುಪಮ

ಯಾವ ಚಿತ್ರ ಎಷ್ಟನೇ ವಾರದಲ್ಲಿ ಯಾವ ಚಿತ್ರಮಂದಿರದಲ್ಲಿ
ಸಿದ್ಲ್ಲಿಂಗು 2 ನೇ ವಾರ ತ್ರಿವೇಣಿ
ಕೊ ಕೋ ಕೋಳಿ ಕೋತಿ 2 ನೇ ವಾರ ನರ್ತಕಿ
ಶಕ್ತಿ 3 ನೇ ವಾರ ಕಪಾಲಿ
ಶೈಲೂ 7 ನೇ ವಾರ ಸಾಗರ್
ವಿಷ್ಣುವರ್ಧನ 7 ನೇ ವಾರ ಸಂತೋಷ್
ಸಾರಥಿ 17 ನೇ ವಾರ (ಸಂಯೋಜಿತ. ಮೂಲ ಚಿತ್ರಮಂದಿರ: ನರ್ತಕಿ) ಮೇನಕಾ

ಪಿ.ವಾಸು ನಿರ್ದಶನದ ಉಪೇಂದ್ರ ನಟನೆಯ ಆರಕ್ಷಕ ಚಿತ್ರಗಳು ಬಿಡುಗಡೆಗೆ ಸಿದ್ದವಾಗಿದ್ದು ಮುಂದಿನ ಎರಡು ವಾರಗಳಲ್ಲಿ ತೆರೆಗೆ ಬರಲಿವೆ. ಹರ್ಷ ನಿರ್ದೇಶನದ ದರ್ಶನ್ ನಟನೆಯ ಚಿಂಗಾರಿ ಸಹ ಬಿಡುಗಡೆಗೆ ಆಗಲಿವೆ!

 

- AKumar