Manasina Maathu

ಈ ಸಂಜೆ ಮನಸಿನ ಮಾತು ಹೇಳಲೇ… !

ಜನವರಿ 28ರಿಂದ ಫೆಬ್ರುವರಿ 3ರವೆರೆಗೆ



ಮನಸಿನ ಮಾತು
ಚಿತ್ರ ಪ್ರಭೇದ: ರೊಮ್ಯಾಂಟಿಕ್
ತಾರಾಗಣ: ಅಜಯ್ ರಾವ್, ಐಂದ್ರಿತಾ ರೇ
ಸಂಗೀತ: ಎ.ಎಂ.ನೀಲ್
ನಿರ್ದೇಶನ: ಅನಂತ್ ರಾಜು
ಮುಖ್ಯ ಚಿತ್ರ ಮಂದಿರ: ಸಂತೋಷ



ಈ ಸಂಜೆ
ಚಿತ್ರ ಪ್ರಭೇದ: ರೊಮ್ಯಾಂಟಿಕ್
ತಾರಾಗಣ: ಆರ್ಯ, ಸಂಜನಾ
ಸಂಗೀತ: ಜೈ ಶಿವ
ನಿರ್ದೇಶನ: ಶ್ರೀ
ಮುಖ್ಯ ಚಿತ್ರ ಮಂದಿರ: ಭೂಮಿಕಾ



ಈ ವಾರ ತೆರೆಕಾಣಲಿರುವ ಚಿತ್ರಗಳನ್ನೂ ಸೇರಿಸಿ 2011 ಇದುವರೆಗಿನ ಚಿತ್ರಗಳ ಸಂಖ್ಯೆ: 7

ಹೆಚ್ಚಿನ ವಿವರಗಳಿಗೆ GGPEDIA ಗೆ  ಭೇಟಿ ಕೊಡಿ

.

ಕಳೆದ ವಾರ ಬಿಡುಗಡೆಯಾದ ಒಲವೇ ಮಂದಾರ ಚಿತ್ರ ಎಲ್ಲರಿಂದಲೂ ಅತ್ಯುತ್ತಮ ಚಿತ್ರವೆಂದು ಕರೆಸಿಕೊಳ್ಳುತ್ತಿದೆ. ಎಲ್ಲಾ ಮಾಧ್ಯಮಗಳೂ ಚಿತ್ರವನ್ನು ಹಾಡಿ ಹೊಗಳಿವೆ! ನಿರ್ದೇಶಕ ಜಯತೀರ್ಥ ತಮ್ಮ ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ. ಚಿತ್ರ ಕಮರ್ಯಲ್ಲಾಗಿ ಅಂತಹ ದೊಡ್ಡ ಆರವನ್ನೇನೊ ಪಡೆದಿಲ್ಲವಾದರೂ ಚಿತ್ರಕ್ಕೆ ಸಿಕ್ಕಿರುವ ಉತ್ತಮ ವಿಮರ್ಶೆ ಚಿತ್ರಕ್ಕೆ ಸಹಕಾರಿಯಾಗುವ ನಿರೀಕ್ಷೆಯಿದೆ.

.

2 ನೇ ವಾರ – ತ್ರಿವೇಣಿ

Box Office Status: Superb reviews, Opening not so great.


ದುನಿಯಾ ವಿಜಯ್, ಶುಭಾ ಪೂಂಜ, ರಿಷಿಕಾ ಅಭಿನಯದ ರಾಮು ನಿರ್ಮಾಣದ “ಕಂಠೀರವ” ಚಿತ್ರ ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆಯಾಗಿದ್ದರೂ ಚಿತ್ರದ ಓಪನಿಂಗ್ ಮಾತ್ರ ದೊಡ್ಡ ಮಟ್ಟದಲ್ಲಿರಲಿಲ್ಲ. ಚಿತ್ರ ಬಿಡುಗಡೆಯಾದ  ಎರಡನೇ  ದಿನವೇ ಕರ್ನಾಟಕ ಬಂದ್ ಬಂದಿದ್ದು ಚಿತ್ರದ ಗಳಿಕೆಯ ಮೇಲೆ ನೇರ ಪರಿಣಾಮ ಬೀರಿದೆ.
.

2 ನೇ ವಾರ – ಅನುಪಮ

Box Office Status: Opening not so great.



ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಾಸ್ ಚಿತ್ರ ಸುಮಾರು 140 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೂಲಕ ಕನ್ನಡ ಚಿತ್ರರಂಗದಲ್ಲೊಂದು ಹೊಸ ದಾಖಲೆಯನ್ನು ಸೃಷ್ಟಿಸಿದ್ದು ಈಗ ಇತಿಹಾಸ. ಚಿತ್ರದ ಪ್ರದರ್ಶನ ತೃಪ್ತಿಕರವಾಗಿದೆ. ಚಿತ್ರ ಹಲವಾರು ಕೇಂದ್ರಗಳಲ್ಲಿ ಮೂರನೇ ವಾರಕ್ಕೆ ಕಾಲಿಡುತ್ತಿದೆ.
.

3 ನೇ ವಾರ – ಮೇನಕಾ

Box Office Status: Good collection in first two weeks, Decent running.


ಮೊದಲಾಸಲ ಚಿತ್ರ ಎಲ್ಲರಿಂದಲೂ ಮುಕ್ತ ಕಂಠದಿಂದ ಶ್ಲಾಘಿಸಲ್ಪಟ್ಟಿದೆ. ಚಿತ್ರದಲ್ಲಿ ರಂಗಾಯಣ ರಘು – ತಾರಾ ಜೋಡಿಯ ಅಮೋಘ ಅಭಿನಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಚಿತ್ರಕ್ಕೆ ಸಿಗಬೇಕಾದ ಪ್ರಚಾರ ಸಿಗುತ್ತಿಲ್ಲ. ದೊಡ್ಡ ಚಿತ್ರಗಳ ಪೈಪೋಟಿಯ ನಡುವೆ ಉತ್ತಮ ಚಿತ್ರವೊಂದು ಸೊರಗುತ್ತಿರುವುದು ನಿಜಕ್ಕೂ ಖೇದಕರ! ಚಿತ್ರ ಬೆಂಗಳೂರು, ಮೈಸ್ಸೂರಿನಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದ್ದರೂ ಇತರ ಕಡೆ ಚಿತ್ರಕ್ಕೆ ಸಿಗಬೇಕಾದ ಬೆಂಬಲ ಸಿಗುತ್ತಿಲ್ಲ.
.

5 ನೇ ವಾರ – ಕಪಾಲಿ (25 ದಿನಗಳು)

Box Office Status: Average hit.


ವರ್ಷಗಳಲ್ಲಿ ಬಂದ ಎಲ್ಲಾ ಶಿವಣ್ಣ ಅಭಿನಯದ ಚಿತ್ರಗಳಿಗಿಂತ ಈ ಚಿತ್ರ ತುಸು ಮುಂದಿದೆ ಅನ್ನ ಬಹುದು. ಆದರೆ ಚಿತ್ರ ದೊಡ್ಡ ಯಶಸ್ಸು ಕಾಣುವಲ್ಲಿ ವಿಫಲವಾಗಿದ್ದು ಸಾಧಾರಣ ಮಟ್ಟದ ಯಶಸ್ಸನ್ನು ಕಂಡಿದೆ. ಐದನೇ ವಾರದ ಕೊನೆಗ ಬಹುತೇಕ ಪ್ರಮುಖ ಕೇಂದ್ರಗಳನ್ನು ಕಳೆದುಕೊಂಡಿರುವ ಚಿತ್ರ ಈ ವಾರ ಬೆಂಗಳೂರಿನ ಒಂದು ಚಿತ್ರಮಂದಿರವೂ ಸೇರಿದಂತೆ ಸುಮಾರು 8-10 ಕೇಂದ್ರಗಳಲ್ಲಿ 6 ನೇ ವಾರಕ್ಕೆ ಕಾಲಿಡುತ್ತಿದೆ.
.

6 ನೇ ವಾರ – ನರ್ತಕಿ

Box Office Status: Moderate HIT


ಉಪೇಂದ್ರ ನಿರ್ದೇಶನದ ಸೂಪರ್ ಚಿತ್ರ 9 ನೇ ವಾರಕ್ಕೆ ಕಾಲಿಡುತ್ತಿದ್ದು 75ನೇ ದಿನದತ್ತ ಮುನ್ನುಗ್ಗುತ್ತಿದೆ. ಬೆಂಗಳೂರು ಮತ್ತು ಮಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಅಭೂತಪೂರ್ವ ಪ್ರದರ್ಶನ ಕಾಣಿತ್ತಿದ್ದು ಹೊಸ ದಾಖಲೆ ಬರೆಯುತ್ತಿದೆ. ಚಿತ್ರದ ತೆಲುಗು ಅವತರಣಿಕೆ ಸಿದ್ಧವಾಗಿದ್ದು ಈ ತಿಂಗಳ ಕೊನೆಗೆ ತೆರೆಕಾಣುವ ಸಾಧ್ಯತೆಗಳಿವೆ. ಜೊತೆಗೆ ತಮಿಳು, ಹಿಂದಿ, ಬಂಗಾಳಿ ಮತ್ತು ಓರಿಯಾ ಭಾಷೆಗಳಿಗೂ ಚಿತ್ರ ಮಾರಾಟವಾಗಿದ್ದು ಹೊಸ ದಾಖಲೆ! ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ ಭಾಷ್ಯಬರೆದ ಈ ಚಿತ್ರ ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ನೋಡುವಂತೆ ಮಾಡಿದ ಹೆಗ್ಗಳಿಕೆಗೂ ಪಾತ್ರವಾಗಿದೆ!
.

9 ನೇ ವಾರ – ಸಾಗರ್

Box Office Status: Block Buster – Towards 75 days

ಇದುವರೆಗೆ ಜಾಕಿ ಅಲಂಕರಿಸಿದ್ದ “ಗಾಂಧೀನಗರದ ಅತ್ಯಂತ ಹಳೆಯ ಚಿತ್ರ ” ಎಂಬ ಸ್ಥಾನವನ್ನು ಈ ವಾರದಿಂದ ಉಪೇಂದ್ರ ಅಭಿನಯದ ಸೂಪರ್ ಅಲಂಕರಿಸಿದೆ. ವರ್ಷದ ಅತ್ಯಂತ ಯಶಸ್ವೀಚಿತ್ರಗಳಲ್ಲೊಂದು ಎನಿಸಿಕೊಂಡಿರುವ ಈ ಚಿತ್ರ ಸಧ್ಯ ಗಾಂಧೀನಗರದದ ಅತ್ಯಂತ ಹಳೆಯ ಚಿತ್ರ!

.

- ಜಾಕಿ: ಸಂತೋಷ್ ಚಿತ್ರಮಂದರದಿಂದ ಒಟ್ಟು ಪ್ರದರ್ಶನ: 15 ವಾರಗಳು

(ಸಪ್ನಾಕ್ಕೆ ಸ್ಥಳಾಂತರ)


  • 5 ಈಡಿಯಟ್ಸ್
  • ಕಾಲ್ಗೆಜ್ಜೆ
  • ಸಂಜು ವೆಡ್ಸ್ ಗೀತಾ

Yours

AKUMAR

(akumar.reach at gmail dot com