kg1

ಈ ವಾರ ಕೆಂಪೇಗೌಡನ ಆಗಮನ!

ಮಾರ್ಚ್ 10 ರಿಂದ 17ರವೆರೆಗೆ



ಕೆಂಪೇಗೌಡ


ಚಿತ್ರ ಪ್ರಭೇದ: ಆಕ್ಷನ್
ತಾರಾಗಣ: ಸುದೀಪ್, ರಾಗಿಣಿ
ಸಂಗೀತ: ಅರ್ಜುನ್
ನಿರ್ದೇಶನ: ಸುದೀಪ್

ಮುಖ್ಯ ಚಿತ್ರ ಮಂದಿರ: ಸಂತೋಷ್.

.

ಶ್ರಾವಣ


ಚಿತ್ರ ಪ್ರಭೇದ: ಸಾಂಸಾರಿಕ

ತಾರಾಗಣ: ವಿಜಯ ರಾಘವೇಂದ್ರ, ಗಾಯತ್ರಿ
ಸಂಗೀತ: ಕಾರ್ತಿಕ್ ಭೂಪತಿ
ನಿರ್ದೇಶನ: ಬಿ.ಎಸ್.ರಾಜಶೇಖರ್

ಮುಖ್ಯ ಚಿತ್ರ ಮಂದಿರ: ಮೇನಕ

.


.ಈ ವಾರ ತೆರೆಕಾಣಲಿರುವ ಚಿತ್ರಗಳನ್ನೂ ಸೇರಿಸಿ 2011 ಇದುವರೆಗಿನ ಚಿತ್ರಗಳ ಸಂಖ್ಯೆ: 24

ಹೆಚ್ಚಿನ ವಿವರಗಳಿಗೆ GGPEDIA ಗೆ  ಭೇಟಿ ಕೊಡಿ


—-::: ಸೂಪರ್ ಗೆ ಭರ್ಜರಿ 100 ದಿನಗಳು  ಒಲವೇ ಮಂದಾರ ಸಂಭ್ರಮದ 50 ದಿನಗಳು!::::—-

ರಂಗಾಯಣ ರಘು, ಬುಲೆಟ್ ಪ್ರಕಾಶ್ ನಟನೆಯ ಹಾಸ್ಯ ಪ್ರಧಾನ ಚಿತ್ರ “ರಾಮ ರಾಮ ರಘುರಾಮ” ಚಿತ್ರಕ್ಕೆ ಅತ್ಯಂತ ನೀರಸ ಪ್ರತಿಕ್ರಿಯೆ ಸಿಕ್ಕಿದ್ದು ಚಿತ್ರ ಮೊದಲ ವಾರದ ಕೊನೆಗೆ ಬಹುತೇಕ ಚಿತ್ರಮಂದಿರಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ.

2 ನೇ ವಾರ – ಅನುಪಮ

Box Office Status: Very poor opening


ದುನಿಯಾ ವಿಜಯ್, ನಿಧಿ ಸುಬ್ಬಯ್ಯ ನಟನೆಯ ಎಸ್.ಮಹೇಂದರ್ ನಿರ್ದೇಶನದ ವೀರಬಾಹು ಚಿತ್ರ ಸಾಧಾರಣ ಮಟ್ಟದ ಪ್ರದರ್ಶನ ಕಾಣುತ್ತಿದೆ. ಚಿತ್ರ ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸಲು ವಿಫಲವಾಗಿದೆ.

4 ನೇ ವಾರ – ಭೂಮಿಕಾ

Box Office Status: Average


ಕೋಮಲ್ ನಿರ್ಮಿಸಿ ಅವರೇ ನಾಯಕರಾಗಿ ನಟಿಸಿರುವ ಕಳ್ ಮಂಜ ಚಿತ್ರ ನಿರೀಕ್ಷೆಗೂ ಮೀರಿ ಮುನ್ನಡೆಯುತ್ತಿರುವುದು ಚಿತ್ರತಂಡಕ್ಕೆ ಸಹಜವಾಗಿಯೇ ಸಂತಸವನ್ನುಟುಮಾಡಿದೆ. ಕನ್ನಡ ಚಿತ್ರಗಳು ಅಷ್ಟಾಗಿ ಓಡದ ತ್ರಿಭುವನ್ ಚಿತ್ರಮಂದಿರದಲ್ಲಿ ಕಳ್ ಮಂಜನ ದರ್ಬಾರ್ ನಡೆಯುತ್ತಿದ್ದು ಯಶಸ್ವೀ ಪ್ರದರ್ಶನ ಕಾಣುತ್ತಿದೆ! ಅತ್ಯಂತ ಕಡಿಮೆ ಬಜೆಟ್ ನ ಈ ಚಿತ್ರ ಈಗಾಗಲೇ “ಹಿಟ್” ಅನಿಸಿಕೊಂಡಿದೆ.

6 ನೇ ವಾರ – ತ್ರಿಭುವನ್

Box Office Status: HIT


ಒಲವೇ ಮಂದಾರ ಚಿತ್ರ ಎಲ್ಲರಿಂದಲೂ ಅತ್ಯುತ್ತಮ ಚಿತ್ರವೆಂದು ಕರೆಸಿಕೊಂಡಿದ್ದು ಭರ್ಜರಿ ೫೦ ದಿನಗಳ ಪ್ರದರ್ಶನ ಕಂಡಿದೆ. ಎಲ್ಲಾ ಮಾಧ್ಯಮಗಳೂ ಚಿತ್ರವನ್ನು ಹಾಡಿ ಹೊಗಳಿವೆ! ನಿರ್ದೇಶಕ ಜಯತೀರ್ಥ ತಮ್ಮ ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ. ಚಿತ್ರ ೫೦ ದಿನಗಳನ್ನು ಪೂರಸುತ್ತಿದೆ  2011ರ ಮೊದಲ ಹಾಗೂ ಅಚ್ಚರಿಯ ಗೆಲುವು ಇದು!
8 ನೇ ವಾರ – ತ್ರಿವೇಣಿ

Box Office Status: HIT


ಶಿವರಾಜ್ ಕುಮಾರ್ ನಟನೆಯ ಮೈಲಾರಿ ಚಿತ್ರ ಈಗಾಗಲೇ ಯಶಸ್ವೀ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿದ್ದು ಶತದಿನದತ್ತ ಮುನ್ನುಗ್ಗುತ್ತಿದೆ! ಈ ಚಿತ್ರದ ಮೂಲಕ ಸುಮಾರು ೫ ವರ್ಷಗಳ ನಂತರ ಶಿವಣ್ಣ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ!

.11 ನೇ ವಾರ – ನರ್ತಕಿ

Box Office Status: SUPER HIT


ಉಪೇಂದ್ರ ನಿರ್ದೇಶನದ ಸೂಪರ್ ಚಿತ್ರ ಈ ವಾರ 100ಗಳನ್ನು ಪೂರಸುತ್ತಿದೆ. ಬೆಂಗಳೂರು ಮತ್ತು ಮಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಅಭೂತಪೂರ್ವ ಪ್ರದರ್ಶನ ಕಾಣಿತ್ತಿದ್ದು ಹೊಸ ದಾಖಲೆ ಬರೆದಿದೆ. ಚಿತ್ರದ ತೆಲುಗು ಅವತರಣಿಕೆ ಈ ವಾರವೇ ಆಂಧ್ರದಾದ್ಯಂತ ತೆರೆಕಾಣುತ್ತಿದೆ. ಶೀಘ್ರದಲ್ಲೇ ವಿದೇಶಗಳಲ್ಲೂ ಸೂಪರ್ ತೆರೆಕಾಣಲಿದೆ. ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ ಭಾಷ್ಯಬರೆದ ಈ ಚಿತ್ರ ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ನೋಡುವಂತೆ ಮಾಡಿದ ಹೆಗ್ಗಳಿಕೆಗೂ ಪಾತ್ರವಾಗಿದೆ!
ಬೆಂಗಳೂರಿನ ಐದು ಚಿತ್ರಮಂದಿರಗಳೂ ಸೇರಿ ಮೈಸೂರು, ಮಂಗಳೂರು, ತುಮಕೂರು, ಹುಬ್ಬಳ್ಳಿ ಮೊದಲಾದೆಡೆ ಚಿತ್ರ ಸಂಭ್ರಮದ ಶತದಿನೋತ್ಸವವನ್ನಾಚರಿಸಿಕೊಳ್ಳುತ್ತಿದೆ.

.

15 ನೇ ವಾರ – ಸಾಗರ್

Box Office Status: Block Buster – Grand 100 days!


..


- ಕಾರ್ತಿಕ್:  ಕಪಾಲಿ ಚಿತ್ರಮಂದರದಿಂದ – ಒಟ್ಟು ಪ್ರದರ್ಶನ: 2 ವಾರಗಳು. Box Office Status: DISASTER

- ಗನ್:  ಸಂತೋಷ್ ಚಿತ್ರಮಂದರದಿಂದ – ಒಟ್ಟು ಪ್ರದರ್ಶನ: 2 ವಾರಗಳು. Box Office Status: FLOP

- ಆಪ್ತ: ಅಭಿಮಾನ್ ಚಿತ್ರಮಂದಿರದಿಂದ – ಒಟ್ಟು ಪ್ರದರ್ಶನ: 1 ವಾರ: Box Office Status: DISASTER


  • ಸಂಜು ವೆಡ್ಸ್ ಗೀತಾ – ಏಪ್ರಿಲ್ 1 ರಿಂದ

Yours

AKumar

(akumar.reach at gmail dot com)