ಆಪ್ತರಕ್ಷಕನ ಅಬ್ಬರದ ನಡುವೆ ಜುಗಾರಿ-ಸುಗ್ರೀವ-ವರ್ಷಧಾರೆ ತೆರೆಗೆ!

Published on February 24, 2010 by Akumar   ·   1 Comment


ಆಪ್ತ ರಕ್ಷಕನ ಆರ್ಭಟಕ್ಕೆ ಇಡೀ ಚಿತ್ರರಂಗವೇ ಬೆರಗು!

ಬಾಕ್ಸ್ ಆಫೀಸ್ ಗಳಿಗೆಯಲ್ಲಿ ಹೊಸ ದಾಖಲೆ! ಚಿತ್ರಕ್ಕೆ ಅಭೂತಪೂರ್ವ ಆರಂಭ!

ಸತತ ಸೋಲಿನಿಂದ ಕಂಗೆಟ್ಟಿದ್ದ ಕನ್ನಡ ಚಿತ್ರರಂಗದಲ್ಲಿ ಕಳೆದ ವಾರ ಬಿಡುಗಡೆಯಾದ ಡಾ. ವಿಷ್ಣುವರ್ಧನ್ ಅಭಿನಯದ 200ನೇ ಹಾಗೂ ಕೊನೆಯ ಚಿತ್ರ ಆಪ್ತರಕ್ಷಕ ಬಿರುಗಾಳಿಯನ್ನೇ ಎಬ್ಬಿಸಿದೆ! ದಕ್ಷಿಣ ಭಾರತದಲ್ಲೇ  ಅತೀ ಹೆಚ್ಚಿನ  ಬೆಲೆಗೆ ಬ್ಲಾಕ್ ಟಿಕೆಟ್ ಮಾರಾಟವಾಗಿದೆ! ಟಿಕೆಟ್ ಒಂದಕ್ಕೆ 3000 ರೂ.ಗೂ ಹೆಚ್ಚು ಕೊಟ್ಟು ಅಭಿಮಾನಿಗಳು ಚಿತ್ರ ವೀಕ್ಷಿಸಿದ ಸುದ್ದಿ ಗಾಂಧೀನಗರದಿಂದ ಬಂದಿದೆ! ತಮ್ಮ ನೆಚ್ಚಿನ ನಟನ ಕೊನೆಯ ಚಿತ್ರವನ್ನು ನೋಡಲು ಜನ ಮುಗಿ ಬಿದ್ದು ಚಿತ್ರಮಂದಿರಗಳಿಗೆ ಹೋಗುತ್ತಿದ್ದಾರೆ. ಜೊತೆಗೆ ನಾಗವಲ್ಲಿ ಎಂಬ ನರ್ತಕಿಯ ಅಟ್ಟಹಾಸವನ್ನು ನೊಡಲು ಜನ ಕಾತರರಾಗಿದ್ದಾರೆ! ಅಂತೂ ಸೋತು ಸುಣ್ಣಾಗಿದ್ದ ಚಿತ್ರರಂಗಕ್ಕೆ ಆಪ್ತ ರಕ್ಷಕ ನಿಜವಾದ ರಕ್ಷಕನಾಗಲು ಹೊರಟಿದ್ದಾನೆ… ಕನ್ನಡ ಚಿತ್ರರಂಗದ ಅತೀ ಯಶಸ್ವೀ ಚಿತ್ರವಾಗುವತ್ತ ಆಪ್ತ ರಕ್ಷಕ ಸಾಗಿದ್ದಾನೆ!

.

ಸುಗ್ರೀವನಾಗಿ ಶಿವಣ್ಣ

ಅಣಜಿ ಫಿಲಂಸ್ ಲಾಂಛನದಲ್ಲಿ ಅಣಜಿ ನಾಗರಾಜ ನಿರ್ಮಿಸಿರುವ, 18 ಗಂಟೆಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಸುಗ್ರೀವ‘ ಚಿತ್ರ ಈ ವಾರ  ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕೇವಲ 18 ಗಂಟೆಗಳಲ್ಲಿ ಚಿತ್ರೀಕರಣ ಮುಗಿಸಿರುವುದೂ ಅಲ್ಲದೇ ಹತ್ತು ಛಾಯಾಗ್ರಾಹಕರು, ಹತ್ತು ನಿರ್ದೇಶಕರನ್ನು ಹೊಂದಿರುವ ಚಿತ್ರ ಇದಾಗಿದೆ. ಹಾಗಾಗಿ ಚಿತ್ರ ಕುತೂಹಲವನ್ನು ಕೆರಳಿಸಿದೆ. ಶಿವರಾಜ್ ಕುಮಾರ್ ಯಜ್ಞಾ ಶೆಟ್ಟಿ ರಾಜು ತಾಳಿಕೋಟೆ ಗುರುರಾಜ್ ಹೊಸಕೋಟೆ ಚಿತ್ರದ ಮುಖ್ಯ ಪಾತ್ರವರ್ಗದಲ್ಲಿದ್ದಾರೆ. ಈ ಚಿತ್ರ ಜನರನ್ನು ಎಷ್ಟರ ಮಟ್ಟಿಗೆ ಸೆಳೆಯುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Main Theater KAPALI

Starring    Shivarajkumar, Yagna Shetty, Raju Thalikote, Gururaj Hoskote
Music         Gurukiran
Producer  Anaji Nagaraj

Directors:

• Pramod Chakravarthi

• A P Arjun
• Nagendra Magadi
• R.Ananth Raju
• PN Sathya
• Nagashekar
• Vijay
• Raghava Loki
• OM Prakash Rao
• Thushar Ranganath

.

ನರಸಿಂಹರಾಜು ಮೊಮ್ಮಕ್ಕಳ ಜುಗಾರಿ!

ಕನ್ನಡದ ಪ್ರಖ್ಯಾತ ಹಾಸ್ಯ ನಟರಾಗಿದ್ದ ದಿ. ನರಸಿಂಹರಾಜು ಕುಟುಂಬದ “ಜುಗಾರಿ” ಚಿತ್ರ ಈ ವಾರ ತೆರೆಕಾಣುತ್ತಿದೆ. ಬೆಂಗಳೂರಿಗೆ ಬರುವ ಅನಾಮಿಕನೊಬ್ಬನ ಬದುಕಿನ ಚಿತ್ರಣವೇ ಚಿತ್ರದ ಕಥೆಯಾಗಿದೆ. ನರಸಿಂಹರಾಜು ಮೊಮ್ಮಗ ಅವಿನಾಶ್ ಮತ್ತು ಹರ್ಷಿತಾ ಪೂಣಚ್ಚ ಚಿತ್ರದ ನಾಯಕ-ನಾಯಕಿಯರಾಗಿದ್ದರೆ ನರಸಿಂಹರಾಜು ಅವರ ಮತ್ತೊಬ್ಬ ಮೊಮ್ಮಗ ಅರವಿಂದ್ ಚಿತ್ರದ ನಿರ್ದೇಶಕರು. ಚಿತ್ರದ ಸಂಗೀತ ಅರ್ಜುನ್ ಅವರದು.


Main Theater TRIVENI

Starring  Avnash Divakar, Harshita Poonachcha
Music         Arjun
Director    SD Aravind
Producer GR Ramesh

.

ಸುಡು ಬೇಸಿಗೆಯಲ್ಲೇ ವರ್ಷಧಾರೆ!

ವರ್ಷಧಾರೆ – ಇದೊಂದು ಪ್ರೇಮ ಕಥಾನಕ ಚಿತ್ರ! ಮಿಥುನ್ ತೇಜಸ್ವಿ, ಸೂರಜ್ ಮತ್ತು ಪಾಯಲ್ ಘೋಷ್, ಸಂಗೀತಾ ಶೆಟ್ಟಿ ಚಿತ್ರದಲ್ಲಿ ನಟಿಸಿದ್ದು  ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತವನ್ನೊದಗಿಸಿದ್ದಾರೆ. ವೇಮಗಲ್ ಜಗನ್ನಾಥ ರಾವ್ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.


Main Theater TRIVENI

Starring  Mithun Tejaswi, Payal Ghosh, Sangeetha Shetty, Suraj
Music         Ajaneesh Loknath
Director   Vemagal Jagannatharao
Producer Vemagal Jagannatharao

.

2010ರಲ್ಲಿ  ತೆರೆಕಂಡ ಒಟ್ಟು ಚಿತ್ರಗಳ ಸಂಖ್ಯೆ 23

.

..
.

.

ಮುಂದುವರಿದ ಪ್ರದರ್ಶನ


ನರ್ತಕಿ - 2 ನೇ ವಾರ

JMM_tiny

ಸಂತೋಷ್ - 4 ನೇ ವಾರ

porki_tiny

ಅನುಪಮ 5 ನೇ ವಾರ

raaaam_tiny1

ಸಾಗರ್ 10 ನೇ ವಾರ

.

ಗಾಂಧೀನಗರದ ಅತ್ಯಂತ ಹಳೆಯ ಚಿತ್ರ

raaaam_tiny1 (10 ನೇ ವಾರದಲ್ಲಿ — ಸಾಗರ್).

.

ಸಂಯೋಜಿತ ಪ್ರದರ್ಶನ

  • ಮಳೆಯಲಿ ಜೊತೆಯಲಿ – 12 ನೇ ವಾರ (ಸಪ್ನಾ. ಮೊದದ 8 ವಾರಗಳು ಸಂತೊಷ್‍ನಲ್ಲಿ)

.

ಹೊರ ನಡೆಯುತ್ತಿರುವ ಚಿತ್ರಗಳು

  • ಕ್ರೇಜಿ ಕುಟುಂಬ – ತ್ರಿವೇಣಿಯಿಂದ. ಒಟ್ಟು ಪ್ರದರ್ಶನ : 2 ವಾರಗಳು
  • ಅಂಬರ – ಕಪಾಲಿಯಿಂದ. ಒಟ್ಟು ಪ್ರದರ್ಶನ 1 ವಾರ

.

ಮುಂದಿನ ಬದಲಾವಣೆ

  • ಪ್ರೇಮಿಸಂ
  • ಶ್ರೀ ಹರಿಕಥೆ

.

NOTE - Now you can also post your comments here itself !

You can also reach me  at:
akumar.reach  at gmail.com
Readers Comments (1)
  1. mayura says:

    best of luck sandalwood





Please note: Comment moderation is enabled and may delay your comment. There is no need to resubmit your comment.

Author Info

Author: Akumar

Akumar is a software engineer from Bangalore and an avid movie watcher and reviewer.