ಸಂಕ್ರಾಂತಿಗೆ ಸೂರ್ಯಕಾಂತಿ!

Published on January 13, 2010 by Akumar   ·   No Comments

.

sunflower1sunflower1sunflower1

ಪರಭಾಷೆಯ ನಡುವೆ ಅನಾಥವಾಗುತ್ತಿದೆ ಕನ್ನಡ ಚಿತ್ರ!

ಎಂಟು ಪರಭಾಷಾ ಚಿತ್ರಗಳ ನಡುವೆ ಕನ್ನಡದ ಏಕೈಕ ಚಿತ್ರ ಬಿಡುಗಡೆ!

ಸಂಕ್ರಾಂತಿಯ ಈ ವಾರ ಎಂಟು ಪರಭಾಷಾ ಚಿತ್ರಗಳು ಬಿಡುಗಡೆಯಗುತ್ತಿವೆ.. ತಮಿಳಿನ ಮೂರು ತೆಲುಗಿನ ಮೂರು ಹಿಂದಿ ಆಂಗ್ಲ ಭಾಷೆಗಳ ತಲಾ ಒಂದೊಂದು ಚಿತ್ರಗಳು ಕನ್ನಡ ನಾಡಿನ ಬೆಳ್ಳಿ ಪರದೆಗಳಲ್ಲಿ ರಾರಾಜಿಸಲಿವೆ. ಇವುಗಳ ನಡುವೆ ಕನ್ನಡದ ಏಕೈಕ ಚಿತ್ರ ಸೂರ್ಯಕಾಂತಿ ತೆರೆಕಾಣುತ್ತಿದೆ. ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದರೂ ತೆರೆಕಾಣುವ ಭಾಗ್ಯ ಪಡೆದದ್ದು ಒಂದು ಚಿತ್ರ ಮಾತ್ರ. ಮೇನಕಾ, ಭೂಮಿಕಾ ಜೊತೆಗೆ ಈ ವಾರ ಅನುಪಮ (ಅಪರ್ಣಾ) ಚಿತ್ರಮಂದಿರ ಕೂಡ ತೆಲುಗರ ಪಾಲಾಗುತ್ತಿದೆ!  ನಮ್ಮ ನಿರ್ಮಾಪಕರು ತಮ್ಮ ತಮ್ಮಲ್ಲೇ ತಾನು ಮೊದಲು ತಾನು ಮೊದಲು ಎಂದು ಬಿಡುಗಡೆಗಾಗಿ ಕಚ್ಚಾಟ ಮಾಡುತ್ತಿದ್ದರೆ ಪರಭಾಷೆಯವರು ತಣ್ಣನೆ ತಮ್ಮ ಚಿತ್ರಗಳನ್ನು ಬಿಡುಗಡೆಮಾಡುತ್ತಿದ್ದಾರೆ. ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬುದು ನಮ್ಮ ಚಿತ್ರರಂಗವನ್ನು ನೋಡಿ ಮಾಡಿದ ಗಾದೆ ಇರಬೇಕು…

ಆಪ್ತ ಮಿತ್ರನ ಪುನರಾಗಮನ!

ವಿಷ್ಣು ನಮ್ಮನ್ನಗಲಿದ್ದೇ ತಡ ಅವರ ಚಿತ್ರಗಳಿಗೆ ಭಾರೀ ಡಿಮ್ಯಾಂಡ್ ಬಂದು ಬಿಟ್ಟಿದೆ! ಹೊಸ ಚಿತ್ರಗಳಿಗಷ್ಟೇ ಅಲ್ಲ, ಅವರು ನಟಿಸಿದ ಹಳೆಯ ಚಿತ್ರಗಳಿಗೂ ಭಾರೀ ಬೇಡಿಕೆ! ಅದರಲ್ಲೂ ಅವರ ಅವಿಸ್ಮರಣೀಯ ಚಿತ್ರಗಳಲ್ಲೊಂದಾದ ಆಪ್ತ ಮಿತ್ರನಿಗೆ ಬೇಡಿಕೆ ಇಲ್ಲದೇ ಹೋದೀತೇ? ಸಂತೋಷ್ ಚಿತ್ರಮಂದಿರದಲ್ಲಿ ಅಮೋಘ ಒಂದು ವರ್ಷಗಳ ಕಾಲ ದಾಖಲೆಯ ಪ್ರದರ್ಶನ ಕಂಡಿದ್ದ ಆಪ್ತ ಮಿತ್ರ ಈ ವಾರ ಕಪಾಲಿಯಲ್ಲಿ ಮರು ಬಿಡುಗಡೆಯಾಗುತ್ತಿದೆ.

apthamitra

Main Theater  KAPAALI

.

sunflower1sunflower1sunflower1sunflower1sunflower1sunflower1sunflower1sunflower1sunflower1sunflower1sunflower1sunflower1

ಚೈತನ್ಯ – ಚೇತನ್-ಇಳಯರಾಜ ಮತ್ತೊಮ್ಮೆ  ಸೂರ್ಯಕಾಂತಿಯಲ್ಲಿ !

ಆ ದಿನಗಳು ಚಿತ್ರವನ್ನು ಸಮರ್ಥವಾಗಿ ನಿರ್ದೇಶಿಸಿದ್ದ ಚೈತನ್ಯ ನಿರ್ದೇಶನದ ಹೊಸ ಚಿತ್ರ “ಸೂರ್ಯಕಾಂತಿ” ಈ ವಾರ ಬಿಡುಗಡೆಯಾಗುತ್ತಿದೆ. ಸಂಕ್ರಾಂತಿಗೆ ಬಿಡುಗಡೆಯಾಗುತ್ತಿರುವ ಏಕೈಕ ಹೊಸ ಚಿತ್ರ ಇದು! ಆ ದಿನಗಳು ತಂಡದ ಇನ್ನಿಬ್ಬರು ಸದಸ್ಯರು ಕೂಡ ಈ ಚಿತ್ರದಲ್ಲಿದ್ದಾರೆ. ಒಬ್ಬರು ನಾಯಕ ಚೇತನ್, ಇನ್ನೊಬ್ಬರು ಸಂಗೀತ ನಿರ್ದೇಶಕ ಇಳಯರಾಜಾ! ಈ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದು ಚಿತ್ರ ಯಶಸ್ವಿಯಾದೀತು ಎಂಬ ನಂಬಿಕೆ ಉದ್ಯಮದಲ್ಲಿದೆ!

SURYAKANTHI

Main Theater NARTHAKI

Starring  Chethan, Regina Cassandra
Music         Ilaiyaraja
Director    KM Chaitanya
Producer Vasu, Sujatha BN

sunflower1sunflower1sunflower1sunflower1sunflower1sunflower1sunflower1sunflower1sunflower1sunflower1sunflower1sunflower1

2010ರಲ್ಲಿ  ತೆರೆಕಂಡ ಒಟ್ಟು ಚಿತ್ರಗಳ ಸಂಖ್ಯೆ 6

.

.

ಮುಂದುವರಿದ ಪ್ರದರ್ಶನ

  • ರಾಮ್ಸಾಗರ್4 ನೇ ವಾರ
  • ಕಳ್ಳರ ಸಂತೆ : ತ್ರಿವೇಣಿ – 5ನೇ ವಾರ
  • ಮಳೆಯಲಿ ಜೊತೆಯಲಿ : ಸಂತೋಷ್- 6 ನೇ ವಾರ.

.

ಗಾಂಧೀನಗರದ ಅತ್ಯಂತ ಹಳೆಯ ಚಿತ್ರ

ಮಳೆಯಲಿ ಜೊತೆಯಲಿ (6 ನೇ ವಾರದಲ್ಲಿ — ಸಂತೋಷ್).

.MJ4_10_9194

.

ಹೊರ ನಡೆತ್ತಿರುವ ಚಿತ್ರಗಳು

  • ಸಮಾಗಮ – ಅನುಪಮದಿಂದ. ಒಟ್ಟು ಪ್ರದರ್ಶನ: 1 ವಾರ
  • ಪೋಲೀಸ್ ಕ್ವಾರ್ಟರ್ಸ್ – ಭೂಮಿಕಾದಿಂದ. ಒಟ್ಟು ಪ್ರದರ್ಶನ : 2 ವಾರಗಳು
  • ಪ್ರೀತಿಯ ತೇರು – ಕಪಾಲಿಯಿಂದ. ಒಟ್ಟು ಪ್ರದರ್ಶನ : 1 ವಾರ.

.

ಮುಂದಿನ ಬದಲಾವಣೆ

  • ಪೊರ್ಕಿ – ಜನವರಿ 21 ರಿಂದ - ಅನುಪಮ
  • ಸ್ಕೂಲ್ ಮಾಸ್ಟರ್
  • ಆಪ್ತ ರಕ್ಷಕ
  • ಜಸ್ಟ್ ಮಾತ್ ಮಾತಲ್ಲಿ

.

sunflower1sunflower1sunflower1

NOTE - Now you can also post your comments here itself !

You can also reach me  at:

akumar.reach  at gmail.com

Readers Comments (0)




Please note: Comment moderation is enabled and may delay your comment. There is no need to resubmit your comment.

Author Info

Author: Akumar

Akumar is a software engineer from Bangalore and an avid movie watcher and reviewer.