ಒಂದೇ ದಿನ ಶ್ರೀಮುರಳಿ ಅಭಿನಯದ ಎರಡು ಚಿತ್ರಗಳು ತೆರೆಗೆ ಬರುತ್ತಿವೆ! ಹಾಗಾಗಿ ಇದು ಮುರಳಿ ವಾರ! ಸಂತೋಷ್‍ನಲ್ಲಿ ರಾಧಿಕಾ ಗಾಂಧಿ ಮತ್ತು ಪೂಜಾ ಗಾಂಧಿ ಜೊತೆ ಹರಿಕಥೆ ಹಾಡಲಿರುವ ಮುರಳಿ ಪಕ್ಕದ ಅನುಪಮಾದಲ್ಲಿ ಶಿರಿನ್ ಜೊತೆ ಸಿಹಿ ಗಾಳಿ ಸೇವಿಸಲಿದ್ದಾನೆ!
ದಯಾಳ್ ಪದ್ಮನಾಭನ್ — ಹೆಸರು ಎಲ್ಲೋ ಕೇಳಿದ ಹಾಗಿದೆಯಲ್ಲ! ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸರ್ಕಸ್ ಮಾಡಿದ್ದು ಇದೇ ದಯಾಳ್ ಅಲ್ವಾ? ಹೌದು… ಸಾಕ್ಷಾತ್ ಅದೇ ದಯಾಳ್! ಇದೀಗ ಹರಿಕಥೆ ಹಾಡಲು ಹೊರಟಿದ್ದಾರೆ. ಶ್ರೀಮುರಳಿ ಜೊತೆ ಅಕ್ಕ ತಂಗಿ ಪೂಜಾ ಮತ್ತು ರಾಧಿಕಾ ಗಾಂಧಿ ನಟಿಸಿರುವ ಹರಿಕಥೆ ಚಿತ್ರವನ್ನು ದಯಾಳ್ ಪದ್ಮನಾಭನ್ ನಿರ್ದೇಶಿಸಿದ್ದಾರೆ. ಎನ್.ಎಂ. ಕುಮಾರ್ ಹಾಗೂ ಮುರಳಿ ಅವರ ತಂದೆ ಚಿನ್ನೇ ಗೌಡ್ರು ಈ ಚಿತ್ರದ ನಿರ್ಮಾಪಕರು!

Starring Sri Murali, Pooja Gandhi, Radhika Gandhi
Music By Sameer Kulkarni
Producer SA Chinne Gowda, N.M Kumar
Director Dayal Padmanabhan
.
ಮೊದಲೇ ಹೇಳಿದಂತೆ ಇದು ಮುರಳೀ ವಾರ. ಮುರಳಿ ಅಭಿನಯದ ಸಿಹಿಗಾಳಿ ಚಿತ್ರ ಈ ವಾರವೇ ತೆರೆಗೆ ಬರುತ್ತಿದೆ. ಶಿರಿನ್ ಚಿತ್ರದ ನಾಯಕಿ. ತುಳಸಿ ಶಿವಮಣಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸೋಲಿನ ಮೇಲೆ ಸೋಲುಂಡಿರುವ ಮುರಳಿ ಪಾಲಿಗೆ ಸಿಹಿಗಾಳಿ ಸಿಹಿಯಾಗಿ ಮಾರ್ಪಡುತ್ತದೆಯೋ ಬಿರುಗಾಳಿಯಾಗುತ್ತದೆಯೋ ಕಾಯಬೇಕು.

Starring Sri Murali, Shirin, Tulasi Shivamani
Music GR Shankar
Director Lekhan
Producer Umesh, Balakrishna, Anil
.


![]() |
ಕಪಾಲಿ – 3 ನೇ ವಾರ |
![]() |
ತ್ರಿವೇಣಿ – 3 ನೇ ವಾರ |
![]() |
ನರ್ತಕಿ - 4 ನೇ ವಾರ |
ಸಾಗರ್ – 12 ನೇ ವಾರ |
.
NOTE - Now you can also post your comments here itself !
