ಮತ್ತೊಮ್ಮೆ ಬಳ್ಳಾರಿ ನಾಗನೊಂದಿಗೆ ಸಮಾಗಮ

Published on January 6, 2010 by Akumar   ·   2 Comments

.

ಗೆಲುವಿದೆ ಆದರೆ ನಲಿವಿಲ್ಲ

ಕಳೆದ ವರ್ಷವಿಡೀ ಸೋಲಿನಿಂದ ಕಂಗೆಟ್ಟಿದ್ದ ಚಿತ್ರರಂಗ ವರ್ಷಾಂತ್ಯಕ್ಕೆ ತುಸು ಚೇತರಿಸಿಕೊಂಡಿತ್ತು. ಗಣೇಶ್ ನಟನೆಯ ಮಳೆಯಲಿ ಜೊತೆಯಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಪುನೀತ್ ಅಭಿನಯದ ರಾಮ್ ಕೂಡ ಒಳ್ಳೆಯ ಆರಂಭ ಪಡೆಯುವ ಮೂಲಕ ಭರವಸೆ ಮೂಡಿಸಿದೆ. ಈ ಗೆಲುವಿನ ನಡುವೆಯೂ ಸಾಹಸ ಸಿಂಹ ವಿಷ್ಣು ನಮ್ಮ ನಡುವೆ ಇಲ್ಲ ಎಂಬ ನೋವು ಸದಾ ಕಾಡುತ್ತಿರುತ್ತದೆ… ಗೆಲುವಿದೆ ಆದರೆ ಆ ಗೆಲುವನ್ನು ಸವಿಯುವ ಮನೋಸ್ಥಿತಿಗೆ ಇನ್ನೂ ನಾವು ಬಂದಿಲ್ಲ.. ನೋವು ಇನ್ನೂ ಮಾಸಿಲ್ಲ…

ಸಾಹಸ ಸಿಂಹನ ‘ಬಳ್ಳಾರಿ ನಾಗ’ ಮರು ಬಿಡುಗಡೆ

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಮೋಘ ಅಭಿನಯದ್, ಅವರ ನಿಧನಕ್ಕೆ ಕೆಲವೇ ದಿನಗಳ ಮೊದಲು ತೆರೆಕಂಡಿದ್ದ “ಬಳ್ಳಾರಿ ನಾಗ” ಈ ವಾರ ಮತ್ತೆ ತೆರೆಯ ಮೇಲೆ ಬರಲಿದೆ.  ಸಾಹಸ ಸಿಂಹನ  ಅಭಿನಯ ವೈಭವವನ್ನು ಮತ್ತೊಮ್ಮೆ ನೋಡಬಹುದು. ಚಿತ್ರ  ಅದೇ ಆದರೂ ಚಿತ್ರ ನೊಡುವ ದೃಷ್ಟಿ ಕೋನ ಬದಲಾಗಲಿದೆ…

BellaryNagaAgain

Main Theater  ANUPAMA

.

‘ಸಮಾಗಮ’ ಎಂಬ ಹೊಸಬರ ಚಿತ್ರ!

ಸಮಾಗಮ ಎಂಬ ಹೊಸಬರ ಚಿತ್ರ ಈ ವಾರ ಕಪಾಲಿಯಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಬಗ್ಗೆ ಅಷ್ಟೊಂದು ಭರವಸೆ ಇಲ್ಲದಿದ್ದರೂ ಕನ್ನಡಿಗರ ಕೈ ತಪ್ಪಿ ಹೋಗಿದ್ದ ಕಪಾಲಿ ಚಿತ್ರಮಂದಿರ ಮತ್ತೆ ಕನ್ನಡಿಗರಿಗೆ ಸಿಕ್ಕುವಂತೆ ಮಾಡಿದ ಪುಣ್ಯ ಈ ಚಿತ್ರಕ್ಕೆ ಸಿಗಲಿದೆ.

Samagama

Main Theater KAPALI

Starring  Vishranth, Shasheel Raj
Music         Kiran
Director    Kasturi Jagannath
Producer  H. Sampath Kumar

ಪ್ರೀತಿಯ ತೇರು ತೆರೆಗೆ ಬರಲು ತಯಾರು!

ಹೊಸಬರ ಮತ್ತೊಂದು ಚಿತ್ರ “ಪ್ರೀತಿಯ ತೇರು” ಈ ವಾರ ತೆರೆಗೆ ಬರುತ್ತಿದೆ. ಇದರೊಂದಿಗೆ ಭರವಸೆ ಮೂಡಿಸಿದ್ದ ಶಿಶಿರ ಚಿತ್ರವನ್ನು ಪ್ರೇಕ್ಷಕ ಸಾರಾ ಸಗಟಾಗಿ ತಿರಸ್ಕರಿಸಿದ್ದಾನೆ. ಹೊಸ ವರ್ಷದ ಮೊದಲ ಚಿತ್ರಗಳಾದ ಮಿನುಗು ಮತ್ತು ನಾನ್ ಮಾಡಿದ್ ತಪ್ಪಾ ಒಂದೇ ವಾರಕ್ಕೆ ಹೊರ ನಡೆದಿವೆ…

Teru

Main Theater KAPALI

Starring  Tanil, Madhumita, Soniya
Music         Prasad
Director    Prasad
Producer  S.Lokesh Reddy


2010ರಲ್ಲಿ  ತೆರೆಕಂಡ ಒಟ್ಟು ಚಿತ್ರಗಳ ಸಂಖ್ಯೆ 5

.

.

ಮುಂದುವರಿದ ಪ್ರದರ್ಶನ

  • ಪೋಲೀಸ್ ಕ್ವಾರ್ಟರ್ಸ್ : ಭೂಮಿಕಾ -2 ನೇ ವಾರ
  • ರಾಮ್ : ಸಾಗರ್3 ನೇ ವಾರ
  • ಕಳ್ಳರ ಸಂತೆ : ತ್ರಿವೇಣಿ – 4 ನೇ ವಾರ
  • ಮಳೆಯಲಿ ಜೊತೆಯಲಿ : ಸಂತೋಷ್- 5 ನೇ ವಾರ.

.

ಗಾಂಧೀನಗರದ ಅತ್ಯಂತ ಹಳೆಯ ಚಿತ್ರ

ಮಳೆಯಲಿ ಜೊತೆಯಲಿ (5 ನೇ ವಾರದಲ್ಲಿ — ಸಂತೋಷ್).

.MJ4_10_9194

.

ಹೊರ ನಡೆತ್ತಿರುವ ಚಿತ್ರಗಳು

  • ಶಿಶಿರ – ನರ್ತಕಿಯಿಂದ. ಒಟ್ಟು ಪ್ರದರ್ಶನ : 2 ವಾರಗಳು
  • ನಾನ್ ಮಾಡಿದ್ ತಪ್ಪಾ – ಅನುಪಮದಿಂದ. ಒಟ್ಟು ಪ್ರದರ್ಶನ : 1 ವಾರ
  • ಮಿನುಗು : ತ್ರಿಭುವನ್ ನಿಂದ. ಒಟ್ಟು ಪ್ರದರ್ಶನ : 1 ವಾರ

.

ಮುಂದಿನ ಬದಲಾವಣೆ

  • ಸೂರ್ಯಕಾಂತಿ – ಜನವರಿ 14 ರಿಂದ
  • ಸುಗ್ರೀವ
  • ಆಪ್ತ ರಕ್ಷಕ

.


NOTE - Now you can also post your comments here itself !

You can also reach me  at:

akumar.reach  at gmail.com

Readers Comments (2)
  1. Maruthi says:

    I am waiting for APTARAKSHAKA, that is the last movie, iam interested in kannada, becoz I know that the industry reaching very worst these day, to whom these all films they are making i dont know..

  2. Maruthi says:

    vishnu… i miss you……….





Please note: Comment moderation is enabled and may delay your comment. There is no need to resubmit your comment.

Author Info

Author: Akumar

Akumar is a software engineer from Bangalore and an avid movie watcher and reviewer.