ಒಂದೇ ದಿನ ಆರು ಸಿನಿಮಾ ಬಿಡುಗಡೆ!

Published on June 30, 2010 by Akumar   ·   No Comments

ಇತಿಹಾಸ ಪುಟಗಳಲ್ಲಿ ಹೊಸದೊಂದು ದಾಖಲೆ ಬರೆಯಲು ಕನ್ನಡ ಚಿತ್ರರಂಗ ಅಣಿಯಾಗುತ್ತಿದೆ. ಒಂದೇ ದಿನ ಆರು ಹೊಸ ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ! ಸ್ಟಾಕ್ ಕ್ಲಿಯರೆನ್ಸ್ ಅಂದರೆ ಇದೇ ಇರಬೇಕು.  ಯಾವ ಚಿತ್ರವೂ ಅಂತಹ ಅತಿ ನಿರೀಕ್ಷಿತ ಚಿತ್ರವಲ್ಲ, ಯಾವುದಕ್ಕೂ ಪ್ರಚಾರವಿಲ್ಲ. ಚಿತ್ರಗಳೆಲ್ಲ ಹೀನಾಯವಾಗಿ ಸೋಲುತ್ತಿರುವ ಈ ಕಾಲದಲ್ಲಿ ಇಷ್ಟೊಂದು ಚಿತ್ರಗಳು ಒಮ್ಮೆಲೇ ಬಂದಾಗ ಪ್ರೇಕ್ಷಕ ಯಾವುದನ್ನು ನೋಡುತ್ತಾನೋ ಯಾವುದನ್ನು ಬಿಡುತ್ತಾನೋ, ದೇವರೇ ಬಲ್ಲ. ಚಿತ್ರರಂಗದ ಬೆಳವಣಿಗೆಯ ದೃಷ್ಟಿಯಿಂದ ನೋಡುವುದಾದರೆ ಇದು ಒಳ್ಳೆಯದಲ್ಲ, ಸಂಖ್ಯಾ ದೃಷ್ಟಿಯಿಂದ ಮಾತ್ರ ಸಮೃದ್ಧವಾದ ವಾರ! ಆರೂ ಚಿತ್ರಗಳೂ ಸ್ವಮೇಕ್ ಎನ್ನುವುದು ಮಾತ್ರ ಹೈಲೈಟ್ ಮತ್ತು ಸಮಾಧಾನದ ಸಂಗತಿ!

.

ಹೆಂಡ್ತೀರ್ ದರ್ಬಾರ್:

ರಮೇಶ್, ಮೀನ ಅಭಿನಯದ ಈ ಚಿತ್ರವನ್ನು  ವಿ.ಶೇಖರ್ ತಾವೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸಾಧು ಕೋಕಿಲ ಸಂಗೀತ ಚಿತ್ರಕ್ಕಿದೆ. ಇದು ಹಾಸ್ಯ ಪ್ರಧಾನ ಚಿತ್ರವಾಗಿದ್ದು ಸಾಧು ಕೋಕಿಲ ಜೊತೆಗೆ ರಂಗಾಯಣ ರಘು ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Main Theater SANTHOSH

Starring Ramesh, Meena, Rangayana Raghu, Sadhu Kokila

Music By Sadhu Kokila
Producer GR
Director V.Shekhar
.

ಜಾಕಿ ಷ್ರಾಫ್ ನಟನೆಯ ‘ಜಮಾನ’

ಖ್ಯಾತ ಬಾಲಿವುಡ್ ನಟ ಜಾಕಿಷ್ರಾಫ್ ಈ ಮೊದಲು ಮಾ.ಕಿಷನ್ ನಿರ್ದೇಶನದ C/O ಫುಟ್ ಪಾತ್ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದರು. ಈ ವಾರ ಅವರು ನಟಿಸಿರುವ ಎರಡನೇ ಕನ್ನಡ ಚಿತ್ರ “ಜಮಾನ” ತೆರೆ ಕಾಣುತ್ತಿದೆ. ನವ ನಟ ವಿನೋದ್ ಕುಮಾರ್ ಚಿತ್ರದ ನಾಯಕ. ಜೀವನದಲ್ಲಿ ಸಮಯದ ಮಹತ್ವವನ್ನು ಚಿತ್ರದಲ್ಲಿ ಹೇಳಲಾಗಿದೆಯಂತೆ. ಇಳಯರಾಜ ಮಗ ಕಾರ್ತಿಕ್ ರಾಜ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.

Main Theater ANUPAMA

Starring Vinod Kumar, Jackie Shroff, Akarsha, Nithish

Music By Karthik Raja
Producer Chethan
Director Lucky Shankar Adithya

ಹೋಳಿ ಆಡಲಿರುವ ರಾಗಿಣಿ!

ರಾಗಿಣಿ ಗೊತ್ತಲ್ಲ, ವೀರ ಮದಕರಿಯ ನಾಯಕಿ! ಇತ್ತೀಚೆಗೆ ಶಂಕರ್ IPS ನಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ, ಆಕೆ.  ರಂಗುರಂಗಿನ ಬಣ್ಣದೋಕುಳಿಯ ಹೋಳಿ ಹಬ್ಬದ ಹಿಂದಿನ ದುರಂತ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ಚಿತ್ರವನ್ನು ಶಂಕರ್ ಲಿಂಗಯ್ಯ ಸುಗ್ಗಳ್ಳಿ ನಿರ್ದೇಶಿಸಿದ್ದಾರೆ.ವೆಂಕಟೇಶ್ ಪ್ರಸಾದ್ ಎಂಬ ನವ ನಟ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Main Theater TRIBHUVAN

Starring Venkatesh Prasad, Ragini Trivedi

Music By Amarapriya
Producer Lalitha Suggalli, Rajyalakshmi
Director Shankar Lingayya Suggalli

.

ರೌಡಿ ಹೃದಯ ಹೇಗಿರುತ್ತೆ ಗೊತ್ತಾ?

ರೌಡಿಗಳಿಗೂ ಹೃದಯ ಇರುತ್ತದೆ ಅಂತ ಹೇಳೋಕೆ ಹೊರಟಿದೆ ಇಲ್ಲೊಂದು ಚಿತ್ರ ತಂಡ! ರೌಡಿ ಹೃದಯ.ಹೆಸರಿನ ಚಿತ್ರ ಈ ವಾರ ತೆರೆ ಕಾಣುತ್ತಿದೆ.ಕಿರುತೆರೆ ನಟ ರಾಕೇಶ್ ಮತ್ತು ಕಾವ್ಯಶ್ರೀ ಚಿತ್ರದಲ್ಲಿ ನಟಿಸಿದ್ದಾರೆ.

Main Theater BHOOMIKA

Starring Rakesh, Kavyashree

Music By Ravishankar
Producer Suresh Bharadwaj
Director M.Shivakumar

ಪ್ರೀತಿ ಅಂದ್ರೆ ಇಷ್ಟೇನಾ?

ಪ್ರೀತಿ ಅಂದ್ರೆ ಇಷ್ಟೇನಾ ಅಂತ ಮತ್ತೊಂದು ಚಿತ್ರತಂಡ ಕೇಳ್ತಾ ಇದೆ.  ಉತ್ತರ ಈ ವಾರವೇ ಸಿಗಬಹುದು ಅವರಿಗೆ – ಪ್ರೇಕ್ಷಕ ಮಹಾಶಯರಿಂದ.

Main Theater MENAKA

Music By AT Raveesh
Producer Roop Kamal
Director Ravikanth

ಕಲಾತ್ಮಕ ಚಿತ್ರ “ಪರೀಕ್ಷೆ” ಕೂಡ ಈ ವಾರ ತೆರೆಗೆ

ಖ್ಯಾತ ರಂಗಭೂಮಿ ಕಲಾವಿದ ಹಾಗೂ ಗಾಯಕ ಏಣಗಿ ಬಾಳಪ್ಪ ಸುದೀರ್ಘ ಸಮಯದ ಬಳಿಕ ನಟಿಸಿದ ಚಿತ್ರ ‘ಪರೀಕ್ಷೆ’ ಈ ವಾರ ಉತ್ತರ ಕರ್ನಾಟಕ, PVR ಮತ್ತು ಕೆಲವು ಕೇಂದ್ರಗಳಲ್ಲಿ ತೆರೆ ಕಾಣುತ್ತಿದೆ. ಶೋಷಣೆಗೊಳಗಾದ ಹೆಣ್ಣಿನ ಪಾತ್ರದಲ್ಲಿ ಅನು ಪ್ರಭಾಕರ್ ಕಾಣಿಸಿಕೊಂಡಿದ್ದಾರೆ.‘ಪರೀಕ್ಷೆ’ ಚಿತ್ರವನ್ನು ರವಿ ಕುಮಾರ್ ಎಂಬುವವರು ನಿರ್ದೇಶಿಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ್ ಪಾಟೀಲ್ ಚಿತ್ರದ ನಿರ್ಮಾಪಕರು.

.

2010ರಲ್ಲಿ ತೆರೆಕಂಡ ಒಟ್ಟು ಚಿತ್ರಗಳ ಸಂಖ್ಯೆ 66

.

ಮುಂದುವರಿದ ಪ್ರದರ್ಶನ


ನರ್ತಕಿ – 2 ನೇ ವಾರ

ಸಾಗರ್ – 3 ನೇ ವಾರ

ಕಪಾಲಿ- 5 ನೇ ವಾರ

.

ಗಾಂಧೀನಗರದ ಅತ್ಯಂತ ಹಳೆಯ ಚಿತ್ರ

(5 ನೇ ವಾರದಲ್ಲಿ — ಕಪಾಲಿ).

.

.
ಹೊರ ನಡೆಯುತ್ತಿರುವ ಚಿತ್ರಗಳು

  • ತಮಸ್ಸು – ತ್ರಿವೇಣಿಯಿಂದ. ಒಟ್ಟು ಪ್ರದರ್ಶನ: 3 ವಾರಗಳು.. ಆ ಜಾಗಕ್ಕೆ ಪೊರ್ಕಿ ಆಗಮನ!
  • ನಾನು ನನ್ನ ಕನಸು – ಭೂಮಿಕಾದಿಂದ. ಒಟ್ಟು ಪ್ರದರ್ಶನ: 7 ವಾರಗಳು
  • ಪುಂಡ – ಸಂತೋಷ್ ನಿಂದ. ಒಟ್ಟು ಪ್ರದರ್ಶನ : 2 ವಾರಗಳು
  • ಜೊತೆಯಾಗಿ ಹಿತವಾಗಿ – ಅನುಪಮಾದಿಂದ.  ಒಟ್ಟು ಪ್ರದರ್ಶನ: 1 ವಾರ

.

ಮುಂದಿನ ಬದಲಾವಣೆ

  • ಒಲವೇ ವಿಸ್ಮಯ - ಜುಲೈ 9 ರಿಂದ
  • ಶೌರ್ಯ
  • ಚೆಲವೆಯೇ ನಿನ್ನೇ ನೋಡಲು

.

- Akumar

Readers Comments (0)




Please note: Comment moderation is enabled and may delay your comment. There is no need to resubmit your comment.

Author Info

Author: Akumar

Akumar is a software engineer from Bangalore and an avid movie watcher and reviewer.