ಪೃಥ್ವಿ ಎಂಬ ಭರವಸೆಯ ಬೆಳದಿಂಗಳು

ಪೃಥ್ವಿ ಎಂಬ ಭರವಸೆಯ ಬೆಳದಿಂಗಳು

ಒಂದು ವಾಕ್ಯದಲ್ಲಿ ಹೇಳುವುದಾದರೆ ಪೃಥ್ವಿ ಚಿತ್ರದಿಂದ ಜೇಕಬ ವರ್ಗೀಸ ಎಂಬ ಭರವಸೆಯ ಕಿರಣ ಕನ್ನಡ ಚಿತ್ರರಂಗಕ್ಕೆ ದೊರಕಿದಂತಾಗಿದೆ. ತಮ್ಮ ಎರಡನೇ ಪ್ರಯತ್ನದಲ್ಲಿ ಬಹಳ ಸೂಕ್ಷವಾದ ವಿಷಯವನ್ನು ಕೈಗೆತ್ತಿಕೊಂಡ ಅವರ ಪ್ರಯತ್ನವನ್ನು ಶ್ಲಾಘಿಸಲೇಬೇಕು.ಚಿತ್ರದ ದ್ವಿತಿಯಾರ್ಥದಲ್ಲಿ ನಾಯಕನ ಸಾಮಾಜಿಕ ಕಳಕಳಿ ಮತ್ತು ಆತನ ವೈವಾಹಿಕ ಜೀವನದ ಮೇಲಿನ ಪರಿಣಾಮದ ಮಧ್ಯದಲ್ಲಿ ಕೊಂಚ ಗೊಂದಲಗೊಂಡಂತೆ ಕಂಡರೂ ಚಿತ್ರ ತನ್ನ ಹೊಸತನದಿಂದ ಇಷ್ಟವಾಗುತ್ತದೆ. ಒಂದೆರಡು ಹಾಡು ಕಡಿಮೆ ಮಾಡಬಹುದಿತ್ತು.

ಚಿತ್ರದ ಕಥೆಯ ಬಗ್ಗೆ ನಾನು ಮತ್ತೆ ಬರೆಯಲು ಹೋಗುವುದಿಲ್ಲಿ. ಈಗಾಗಲೇ ಇದರ ಬಗ್ಗೆ ಹಲವರು ಬರೆದಾಗೆದೆ. ಬಳ್ಳಾರಿಯ ಗಣಿ ಧಣಿಗಳ ದಬ್ಬಾಳಿಕೆಗೆ ಕನ್ನಡೆ ಹಿಡಿಯುವ ಪ್ರಯತ್ನ. ಆದನ್ನು ಎದುರಿಸಿ ನಿಲ್ಲುವ ಜಿಲ್ಲಾಧಿಕಾರಿಯ ಬದುಕು-ಬವಣೆ ಸುತ್ತ ಹೆಣೆದ ಕಥೆ.

ಪುನೀತ ಇಲ್ಲಿ ತಮ್ಮ ಅಭಿನಯದಲ್ಲಿ ಮಾಗಿದ್ದಾರೆ. ನಾಯಕನಾಗಿ ಅಪ್ಪ್ಪು ಅವರ ಮೊದಲ ಚಿತ್ರವಾದರೆ ಈ ಚಿತ್ರದಿಂದ ಮುಂದಿನ ಹಂತ ತಲುಪಿದ್ದಾರೆ. ಪಾರ್ವತಿಗೆ ಹೆಚ್ಚು ಅವಕಾಶವಿಲ್ಲ.

ಈಗ ಕನ್ನಡ ಪ್ರೇಕ್ಷಕನ ಮುಂದಿರುವ ಆಯ್ಕೆ – ಇಂಥ ನೂತನ ಪ್ರಯತ್ನವನ್ನು ಪ್ರೋತ್ಸಾಹಿಸಬೇಕೆ ಅಥವಾ ಮರಳಿ ಲಾಂಗು-ಮಚ್ಚು, ಹುಚ್ಚು ಹೊಳೆಯ ಪ್ರೇಮ ಕಥೆಯ ಸಿಧ್ದ ಸೂತ್ರಕ್ಕೆ ಮರಳಬೇಕೆ.

ಕೊನೆಯ ಮಾತು : ೨೦೧೦ರ ಪ್ರಶಸ್ತಿಗಳಲ್ಲಿ ಪುನೀತ ಹೆಸರು ಕೇಳಿಬಂದರೆ ಆಶ್ಚರ್ಯವಿಲ್ಲ.