PR-Jackie

ದುನಿಯಾದಲ್ಲಿ ಮತ್ತೊಂದು ಮಳೆಯ ನಿರೀಕ್ಷೆ…

ದುನಿಯಾದಲ್ಲಿ ಮತ್ತೊಂದು ಮಳೆಯ ನಿರೀಕ್ಷೆ…

PR-Jackie

ಸ್ವಲ್ಪ ಫ್ಲಾಶ್ ಬ್ಯಾಕ್ ಗೆ ಹೋಗೋಣ…ನಾಲ್ಕು ವರ್ಷದ ಹಿಂದೆ.. ಬರೀ ರೌಡಿಸಂ ಚಿತ್ರಗಳೇ ತಾಂಡವವಾಡುತ್ತಿದ್ದ ಕಾಲ… ಹಳಸಿದ ಕಥೆಗಳನ್ನೇ ನೋಡಿ ನೋಡಿ ಸುಸ್ತು ಹೊಡಿದಿದ್ದ ಕಾಲ… ಕುಟುಂಬವೆಲ್ಲಾ ಕೂತು ನೋಡುವ ಚಿತ್ರಗಳು ಇನ್ನು ಮುಂದೆ ಬರುವುದೆ ಇಲ್ಲ ಎಂದು ನಿರ್ಧರಿಸಿದ್ದ ಕಾಲ… ಕಾಲ..ಕಾಲ..ಕಾಲ…ಕಲರ್ ನೆ ಕಳೆದುಕೊಂಡ ಕಾಲ…ಬರಗಾಲ…
ಅಂತಹ ಒಂದು ಕಾಲಕ್ಕೆ ಪೂರ್ಣ ವಿರಾಮ ಹೇಳಿ, ಮನೆಮಂದಿಯೆಲ್ಲಾ ಥಿಯೇಟರನತ್ತ ದೌಡಾಯಿಸುವಂತೆ ಮಾಡಿದ್ದು ಎನು??
ಚಿತ್ರರಂಗದ ಆಯಮಗಳನ್ನೇ ಬದಲಿಸಿದ ಕನ್ನಡ ಸೂಪರ್ ಡೂಪರ್ ಚಿತ್ರಗಳು–”ಮುಂಗಾರು ಮಳೆ” ಹಾಗೂ “ದುನಿಯಾ”!!

ನಾಲ್ಕು ವರ್ಷದ ಹಿಂದೆ ಸೂರಿ,ಯೋಗರಾಜ್ ಭಟ್…ಯಾರಿಗೂ ಗೊತ್ತಿಲ್ಲದ ಹೆಸರು…ಆದರೆ ಇವತ್ತು ಕನ್ನಡ ಚಿತ್ರರಂಗದ ಟಾಪ್ ಸ್ಟಾರ್ ನಿರ್ದೇಶಕರು…

ಇವರಿಬ್ಬರ ಸುದ್ದಿ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ, ಕಳೆದ ಎರಡು ವಾರಗಳಿಂದ ಇವೆರಡು ಹೆಸರುಗಳು ಬಹಳ ಸದ್ದನ್ನು ಮಾಡುತ್ತಿರುವ ಕಾರಣದಿಂದ.
ಆ ಸದ್ದು ಯಾಕೆ ಎಂಬುದನ್ನು ನಾನು ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತೆ…!!!
ಹೌದು..ಕನ್ನಡ ಚಿತ್ರರಂಗಕ್ಕೆ ಮತ್ತೊಂದು ರಂಗನ್ನು ನೀಡಲು ಬರುತ್ತಿದೆ “ಜಾಕಿ” ಹಾಗೂ “ಪಂಚರಂಗಿ”.
ಇವೆರಡು ಕನ್ನಡ ಚಿತ್ರರಂಗದ ಅಳಿವು-ಉಳಿವಿನ ಪ್ರಶ್ನೆ..ನಾನು ಈ ಮಾತನ್ನು ಹೇಳುವುದಕ್ಕೆ ಕಾರಣವಿದೆ. ೨೦೧೦ ರಲ್ಲಿ ತೆರೆಕಂದ ೧೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ “ಆಪ್ತರಕ್ಷಕ”,”ಕೃಷನ್ ಲವ್-ಸ್ಟೋರಿ”- ಎರಡು ಚಿತ್ರಗಳನ್ನು ಬಿಟ್ಟರೆ ಇನ್ನಾವ ಚಿತ್ರವು ಸದ್ದು ಮಾಡಿಲ್ಲ.. ಇದಲ್ಲದೆ,”ಎರಡನೆ ಮದುವೆ”,”ಲಿಫ಼್ಟ್ ಕೊಡ್ಲಾ”,”ನಾನು ನನ್ನ ಕನಸು” ಚಿತ್ರರಂಗಕ್ಕೆ ಮತ್ತೊಮ್ಮೆ ಸ್ಪೂರ್ತಿ ತಂದಿದೆ.ಆದರೆ ಚಿತ್ರರಂಗದ ಉಳಿವಿಗೆ ಬೇಕಾಗಿರುವುದು ಕೇವಲ ಸ್ಪೂರ್ತಿ ಅಲ್ಲ.ನಮಗೆ ಈಗ ಬೇಕಾಗಿರೋದು ಒಂದು ದೊಡ್ಡ ಮಟ್ಟದ ಯಶಸ್ಸು. ಕನ್ನಡದಲ್ಲಿ “ಮುಂಗಾರು ಮಳೆ”ಯ ನಂತರ ಸೂಪರ್ ಹಿಟ್ ಚಿತ್ರಗಳು ಬಂದು ಹೋಗಿದ್ದರು,”ಮುಂಗಾರು ಮಳೆ”ಯ ಯಶಸ್ಸನ್ನೂ ಮೀರುವ ಚಿತ್ರ ಬಂದಿಲ್ಲ.

ಮುಂಗಾರು ಮಳೆ,ದುನಿಯಾ ಕೊಟ್ಟ ಸೂರಿ-ಭಟ್ಟರ ಜೋಡಿ ಮತ್ತೆ ಮೋಡಿ ಮಾಡಲಿದೆಯೆ??ಎಂಬುದೆ ಯಕ್ಷ ಪ್ರಶ್ನೆ ಯಾಗಿದೆ..

ಪಂಚರಂಗಿ-ಯೋಗರಾಜ್ ಭಟ್ ನಿರ್ಮಾಣದ,ನಿರ್ದೇಶನದ ಚಿತ್ರ. ಮನೋಮೂರ್ತಿ ಸಂಗೇತ ಈ ಚಿತ್ರಕ್ಕೆ ಇದೆ. ಈಗಾಗಲೇ  ಈ ಚಿತ್ರದ “ಲೈಫು ಇಷ್ಟೇನೆ!” ಹಾಗೂ “ಪಂಚರಂಗಿ ಹಾಡುಗಳು”–ಯುವ ಮನಸುಗಳ ಹೊಸ ಕರೆತಗಳಾಗಿರುವುದಂತೂ ಸತ್ಯ.
ಚಿತ್ರದ ಡೈಲಾಗ್ ಗಳ ಬಗ್ಗೆ ಅತೀ ಹೆಚ್ಚು ಕುತೂಹಲವನ್ನು ಈ ಚಿತ್ರ ಇರಿಸಿಕೋಡಿದೆ. ಪಂಚರಂಗಿ ಮತ್ತೊಂದು ಮುಂಗಾರು ಮಳೆ ಆಗಲಿ. ಮುಂಗಾರು ಮಳೆ-ಗೋಲ್ಡನ್ ಸ್ಟಾರ್ ಅನ್ನು ಹುಟ್ಟು ಹಾಕಿತು..ಪಂಚರಂಗಿ ಡೈಮಂಡ್ ಸ್ಟಾರ್ ನನ್ನು ಹುಟ್ಟು ಹಾಕಲಿ ಎಂಬುದೆ ಚಿತ್ರ ರಸಿಕರ ಆಶಯ.
ಸೆಪ್ಟೆಂಬರ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದ್ದು,ಇಡೀ ಕನ್ನಡ ಚಿತ್ರರಂಗವೇ ಕಾದು ನೋಡುತ್ತಿದೆ.

ಪಂಚರಂಗಿ-ಸೂರಿ ನಿರ್ದೇಶನದ ಚಿತ್ರ. ಹರಿಕೃಷ್ಣ ಸಂಗೇತ ಈ ಚಿತ್ರಕ್ಕೆ ಇದೆ. ಈಗಾಗಲೇ  ಈ ಚಿತ್ರದ “ಎಕ್ಕಾ ರಾಜ ರಾಣಿ” ಹಾಗೂ “ಎಡವಟ್ ಆಯ್ತು”–ಸಂಗೀತ ಲೋಕದಲ್ಲಿ ಹೋಸ ಪ್ರಯತ್ನ ಗಳು ಎನಿಸಿವೆ. ಭಟ್ಟರ ಸಾಹಿತ್ಯ ವಿನೂತನವಾಗಿದೆ. ಕನ್ನಡದದಲ್ಲಿ ಇಂತಹ ಪದಗಳು ಇಷ್ಟು ದಿನಗಳು ಎಲ್ಲಿದ್ದವು ಎನಿಸಿವೆ…
ಚಿತ್ರ ಡಾ|| ರಾಜಕುಮಾರ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವುದು ಮತ್ತೊಂದು ಖುಷಿ ಸಂಗತಿ.ಕರ್ನಾಟಕದ ಬಾಕ್ಸ್ ಆಫಿಸ್ ಕಿಂಗ್ “ಪುನೀತ್ ರಾಜಕುಮಾರ್” ಅಭಿನಯದ “ಜಾಕಿ”ಚಿತ್ರಕ್ಕೆ ಸಾಕಷ್ಟು ನಿರೀಕ್ಷೆಗಳಿವೆ.
ಅಕ್ಟೋಬರ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದ್ದು,ಇಡೀ ಕರ್ನಾಟಕವೇ ಕಾದು ನೋಡುತ್ತಿದೆ.
ಇಲ್ಲಿ ಮತ್ತೊಂದು ವಿಚಾರವಿದೆ. ದುನಿಯಾ ಚಿತ್ರದ ಪೋಸ್ಟರ್ ಗಳಲ್ಲಿಯೂ ಚಿತ್ರದ ಶೀರ್ಷಿಕೆಯ ಮೇಲೆ “ಸೂರಿ” ಎಂಬ ಹೆಸರಿತ್ತು,”ಜಾಕಿ” ಎಂಬ ಶೀರ್ಷಿಕೆಯ ಮೇಲೆ “ಸೂರಿ” ಎಂಬ ಹೆಸರಿದೆ. ಲಕ್ ಇಲ್ಲಿ ವರ್ಕ್ ಮಾಡಬಹುದೇನೋ..ಎಕೆಂದರೆ ಸೂರಿ ಎಂಬ ಹೆಸರು ಟೈಟಲ್ ಕೆಳಗೆ ಇದ್ದಾಗ ಚಿತ್ರ ಸೋತಿರುವ ನಿದರ್ಶನವಿದೆ.(ಇಂತಿ ನಿನ್ನ ಪ್ರೀತಿಯ-ಸೂರಿ)

ಎನಾದರೂ ಆಗಲಿ, ಇವೆರಡು ಚಿತ್ರಗಳು ಗೆಲ್ಲಲೆ ಬೇಕು. ಸೂರಿ-ಯೋಗರಾಜ್ ಭಟ್ಟರ ಮೇಲೆ ಇಡೀ ಕರ್ನಾಟಕ ಬರವಸೆ ಇಟ್ಟಿದೆ. ಬರವಸೆ ಸುಳ್ಳು ಮಾಡ ಬೇಡಿ-”ಸೂರಿ,ಭಟ್”!!

ಮತ್ತೆ ದುನಿಯಾದಲ್ಲಿ ಮಳೆಯ ನಿರೀಕ್ಷೆಯಲ್ಲಿ….

-ಕನ್ನಡ ಚಿತ್ರ ರಸಿಕರ ಪರವಾಗಿ “ಗಾಂಧಿನಗರದ ಗಿರ್-ಗಿಟ್ಲೆ” ಪುನೀತ್.ಬಿ.ಎ.