‘ಚಾಮಯ್ಯ ಮೇಷ್ಟ್ರು’ ಕೆ.ಎಸ್.ಅಶ್ವತ್ಥ್ ಇನ್ನಿಲ್ಲ!

‘ಚಾಮಯ್ಯ ಮೇಷ್ಟ್ರು’ ಕೆ.ಎಸ್.ಅಶ್ವತ್ಥ್ ಇನ್ನಿಲ್ಲ!

ಹಿರಿಯ ನಟ ಕೆ.ಎಸ್.ಅಶ್ವತ್ಥ್ ಇಂದು ಬೆಳಗಿನ ಜಾವ ನಮ್ಮನ್ನು ಅಗಲಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆಯಷ್ಟೇ ಅವರು ಚೇತರಿಸಿಕೊಳ್ಳುತ್ತಿದ್ದ ಸುದ್ದಿ ಕೇಳಿ ನೆಮ್ಮದಿಯಾಗಿತ್ತು. ಆದರೆ ಇಂದು ಬೆಳಿಗ್ಗೆ ಅವರ ನಿಧನ ವಾರ್ತೆ ಬಂದಿದೆ.

Ashwath1

ಕನ್ನಡ ಚಿತ್ರರಂಗಕ್ಕೆ ಕಳೆದೊಂದು ತಿಂಗಳಿನಿಂದ ಆಘಾತಗಳ ಮೇಲೆ ಆಘಾತಗಳ ಸುರಿಮಳೆಯಾಗುತ್ತಿದೆ. ಸಿ. ಅಶ್ವತ್ಥ್, ಡಾ.ವಿಷ್ಣುವರ್ಧನ್ ನಂತರ ಮತ್ತೊಂದು ಹಿರಿಯ ಜೀವ ಕಣ್ಮರೆಯಾಗಿದೆ. ನಾಗರ ಹಾವು ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರಾಗಿ ಕೆ.ಎಸ್.ಅಶ್ವತ್ಥ್ ಅವರ ಅಭಿನಯ ಅವಿಸ್ಮರಣೀಯ. ನಮ್ಮ ಮಕ್ಕಳು, ಜೇನುಗೂಡು, ಕುಲವಧು, ನವ ಜೀವನ, ಸುಬ್ಬಾ ಶಾಸ್ತ್ರಿ, ಬೆಳ್ಳಿ ಮೋಡ,  ಗಂಗೆ ಗೌರಿ, ಮುದ್ದು ಮೀನ, ಹೊಸ  ಬೆಳಕು, ಬಂಗಾರದ ಪಂಜರ ಸೇರಿದಂತೆ ಸುಮಾರು 272 ಚಿತ್ರಗಳಲ್ಲಿ ಭಾವಪೂರ್ಣ ಅಭಿನಯ ನೀಡಿದ್ದರು. ಇತ್ತೀಚಿನ ಸಿರಿವಂತ ಚಿತ್ರದಲ್ಲಿ ಕೂಡ ಅಶ್ವತ್ಥ್ ನಟಿಸಿದ್ದರು.

ಕೆ.ಎಸ್. ಅಶ್ವತ್ಥ್ ನಿಧನ ಕನ್ನಡ ಚಿತ್ರರಂಗದ ಪಾಲಿಗೆ ನಿಜಕ್ಕೂ ಭರಿಸಲಾರದ ನಷ್ಟ. ಈ ಹಿರ್ಯ ನಟನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗಂಧದಗುಡಿ ಭಗವಂತನಲ್ಲಿ ಪ್ರಾರ್ಥಿಸುತ್ತದೆ.

1 Comment »

  1. gunda Says:

    kannada itihaasadhalle idhu dhuradhrushta varusha
    Ashwath mahaan natananna kaLedhukonda chitraranga anaathavaagidhe.
    Modhalu Shaareerya Ashwath
    Mathe nata vishnu
    Eega Shareera Ashwath
    idhu kannada chitrarangadhalle nadedhiruva dhodda grahaNa

    comment-bottom

RSS feed for comments on this post. TrackBack URL

Leave a comment