ಬರಗಾಲ ನೀಗಿಸಿದ ಕಲರ್-ಕಲರ್ ಕೃಷ್ಣ!!

ಕನ್ನಡ ಚಿತ್ರರಂಗ ಕಳೆದ ಎರಡು ವರ್ಷಗಳಿಂದ ಕಂಡಂತಹ ಧಾರುಣ ಸ್ಥಿತಿ ಸದ್ಯ ಈಗ ಸುಧಾರಿಸುತ್ತಿದೆ ಎಂಬುದು ಒಳ್ಳೆಯ ವಿಚಾರ. ಇನ್ನೇನು ಕನ್ನಡ ಚಿತ್ರರಂಗ ಮುಳುಗಿಯೇ ಹೋಯಿತು ಅನ್ನೋ ಅಷ್ಟರಲ್ಲಿ ಚಿತ್ರರಂಗದ ರಕ್ಷಕನಾಗಿ ಬಂದದ್ದು “ಆಪ್ತರಕ್ಷಕ”. ಫೆಬ್ರವರಿ ನಂತರದಿಂದ ಚಿತ್ರರ್‍ಅಂಗಕ್ಕೆ ಕವಿದಿದ್ದ ಕಾರ್ಮೋಡ ಸರೆದಿದೆ. ಕಳೆದ ಎರಡು ತಿಂಗಳಲ್ಲಿ ಬಂದಂತಹ “ತಮಸ್ಸು”,”ನಾನು ನನ್ನ ಕನಸು” ಚಿತ್ರರಂಗಕ್ಕೆ ಮತ್ತೆ ಸ್ಪೂರ್ತಿ ಮೋಡಿಸಿದೆ. ಈಗ ಅದೇ ಹಾದಿಯಲ್ಲಿ ಮತ್ತೊಂದು ಕಲರ್-ಫುಲ್ ಚಿತ್ರ ಕನ್ನಡದಲ್ಲಿ ಬಂದಿದೆ.
ಕನ್ನಡದ ಮತ್ತೊಂದು ಮೆಗಾ ಹಿಟ್ ಆಗಬಲ್ಲ ಎಲ್ಲಾ ಅರ್ಹತೆಗಳು ಉಳ್ಳಂತಹ ಚಿತ್ರ “ಕೃಷ್ಣನ್ ಲವ್ ಸ್ಟೋರಿ”!!!
ವಿಮರ್ಶೆ:
“ಕೃಷ್ಣನ್ ಲವ್ ಸ್ಟೋರಿ” ಕನ್ನಡದ ಮಟ್ಟಿಗೆ ಒಂದು ಹೊಸ ಪ್ರಯತ್ನ. ಪ್ರತಿ ಹಂತದಲ್ಲೂ ಎನ್ನೋ ಹೊಸತನ್ನು ಈ ಚಿತ್ರ ತೊರಿಸುತ್ತದೆ.
ಕಥೆ: ಕಥೆಯೆ ಚಿತ್ರದ ನಿಜವಾದ ಹೀರೋ. ಕಥೆಯೊಂದು ಗಟ್ಟಿಯಿದ್ದರೆ ಎಂತಹ ಚಿತ್ರ ಬೇಕಾದರೂ ಚೆನ್ನಾಗಿ ಮೂಡಿ ಬರುತ್ತದೆ ಎಂಬ ಹಿರಿಯರ ಮಾತು ಇಲ್ಲಿ ಸತ್ಯವಾಗಿದೆ. ಇದು ಯಾರ ಕಥೆಯೇ ಆಗಿರಲಿ,ಆದರೆ ಅದಕ್ಕೆ ಸಿನಿಮಾ ರೂಪ ಕೊಟ್ಟಂತಹ ಶಶಾಂಕನಿಗೆ ಹಾಟ್ಸ್ ಆಫ್!!. ಕೆಲವು ಪ್ರಶ್ನೆಗಳಿಗೆ ಕಥೆಯೇ ಪಾತ್ರವಾಗಿ ನಿಂತು ಉತ್ತರ ಹೇಳುವ ಧಾಟಿ ಹೊಸತು ಎನಿಸುತ್ತದೆ.
ಆಮೇಲೆ….
ನಿರ್ದೇಶನ/ಸಂಭಾಷಣೆ: ನಿರ್ದೇಷನ ಬಹಳ ಕ್ಲೀನ್ ಆಗಿ ಮೊಡಿ ಬಂದಿದೆ. ಆದರೂ ಅಲ್ಲಿ ಇಲ್ಲಿ ಮತ್ತಷ್ಟು ಚೆಂದಗೊಳಿಸುವ ಅವಕಾಶ ನಿರ್ದೇಶಕರಿಗೆ ಇತ್ತು. ಅನಾವಶ್ಯಕವಾದ ರೌಡಿಸಂ ದೃಶ್ಯಗಳು ಪ್ರಾರಂಭದಲ್ಲಿ ಕೊಂಚ ಇರುಸು ಮುರುಸು ಗೊಳಿಸುತ್ತದೆ. ಚಿತ್ರದ ಕ್ಲೈಮಾಕ್ಸ್ ನಲ್ಲಿ ನಿರ್ದೇಶಕ ನಿಜವಾಗಿಯು ಗೆದ್ದಿದ್ದಾರೆ. ಈ ವಿಷಯವಾಗಿ ಹಲವಾರು ಪ್ರೇಕ್ಷಕರಿಗೆ ಸಾಮಧಾನವಾಗಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ನನಗೆ ಈ ಕ್ಲೈಮಾಕ್ಸ್ ನಲ್ಲಿ ಕಂಡಂತಹ ನಿರ್ದೇಶಕರ ಬುದ್ದಿವಂತಿಕೆ ಇಷ್ಟವಾಯಿತು.ಕಾರಣ ಇಷ್ಟೆ: “ಈ ಕ್ಲೈಮಾಕ್ಸ್ ಅಲ್ಲದಿದ್ರೆ.. ಮತ್ಯಾವ ಕ್ಲೈಮಾಕ್ಸ್ ಸರಿಹೊಂದುತಿತ್ತು????” ಈ ಪ್ರಶ್ನೆಗೆ ಉತ್ತರವೇ ಇಲ್ಲ. ಕಥೆ ಒಂದು ಮಧ್ಯಮ ಕುಟುಂಬದ,ಸಮಾಜದ ಕಟ್ಟುಪಾಡಿಗೆ ಸಿಲುಕಿರುವ ಒಂದು ಕುಟುಂಬ ಕಥೆ ಯಾಗಿರುವುದರಿಂದ ನಾಯಕಿ ಆ ನಿರ್ಧಾರ ತೆಗೆದುಕೊಳ್ಳದೆ ಬೇರೆ ಎನು ದಾರಿ ಇರಲಿಲ್ಲ.ಸಂಭಾಷಣೆ ಇಲ್ಲಿಯೂ ಅತೀ ಎನಿಸುವುದಿಲ್ಲ.
ಆಮೇಲೆ….
ಕ್ಯಾಮರಾ: ಹಾಡುಗಳ ಚಿತ್ರೀಕರಣದ ವಿಚಾರಕ್ಕೆ ಬರುವುದಾದರೆ,”ಇದು ಕನ್ನಡದ ಚಿತ್ರವೇನಾ??” ಎನ್ನಿಸುವಷ್ಟು ಚೆನ್ನಾಗಿದೆ. ಈ ವಿಷಯದಲ್ಲಿ “ಶೇಖರ್ ಚಂದ್ರು” ಚಿತ್ರವನ್ನು ಅತೀ ಶ್ರೀಮಂತವಾಗಿಸಿದ್ದಾರೆ.ಕಣ್ಣಿಗೆ ಹಬ್ಬವಾಗಿಸಿದ್ದಾರೆ ಚಂದ್ರು.
ಆಮೇಲೆ….
ಸಂಗೀತ: ವಿ.ಶ್ರ್‍ಈಧರ್ ಗೆದಿದ್ದಾರೆ. “ಹೃದಯವೆ ಬಯಸಿದೆ…” ಹಾಡು ಕಿವಿಗಳಿಗೆ ಹಬ್ಬ. “ಮೋಸ ಮಾಡಮಾಡಲೆಂದು…” ದೇವದಾಸರಿಗೆ ಅತ್ತು,ಪಡ್ದೆಗಳಿಗೆ ಶಿಳ್ಳೆ ಹಾಕಲು ಮಾಡಿಸಿದ ಹಾಡು. ಆ ಶಿಳ್ಳೆ ಹಾಡಿನಿಂದನೋ, ಲೂಸ್ ಮಾದನಿಂದನೋ ಗೊತ್ತಿಲ್ಲ.
ಆಮೇಲೆ….
ನಟರ:
ಚಿತ್ರದ ನಾಯಕ ಅಜಯ್ ಅಭಿನಯದಲ್ಲಿ ಮಾಗಿದ್ದಾರೆ. ಅವರ ಹಿಂದಿನ ತಾಜ್ ಮಹಲ್,ಪ್ರೇಮ್ ಕಹಾನಿಗಿಂತಲೂ ಇಲ್ಲಿ ಅಜಯ್ ಇಷ್ಟವಾಗುತ್ತಾರೆ. ಅವರ ಪಾತ್ರಕ್ಕೆ ಮತ್ಯಾರಿಂದಲೋ ಡಬ್ಬಿಂಗ್ ಮಾಡಿಸಿದ್ದರೆ ಚೆಂದ ಇರುತ್ತಿತ್ತೇನೋ ಎನಿಸುವುದಂತೂ ನಿಜ!!
ಚಿತ್ರದ ನಯಕಿ ರಾದಿಕಾ ಪಂಡಿತ್ ಚಿತ್ರದ ನಿಜಾವದ ನಾಯಕ. ಅವರ ಅಭಿನಯಕ್ಕೆ ಸ್ಕೋರ್ ೯೯. ಮತ್ತೊಂದು ಅಂಕ ಡಬ್ಬಿಂಗ್ ಮಾಡದಿರುವ ಕಾರಣದಿಂದ ಕಳೆದುಕೊಂಡಿದ್ದಾರೆ. ಅಭಿನಯದಲ್ಲಿ ಬಹಳ ಆಪ್ತರೆನಿಸುತ್ತಾರೆ. ಕನ್ನಡದಲ್ಲಿ ಕೇವಲ “ಇಂಪೋರ್ಟ್” ಹೀರೋಯಿನ್ ಗಳೆ ತುಂಬಿ ಹೋಗಿರುವಂತಹ ಸಂದರ್ಭದಲ್ಲಿ ರಾಧಿಕ ಕನ್ನಡದ ಅಸ್ಸೆಟ್. ಇವರು ಬೇರೆ ಕಡೆ “ಎಕ್ಸ್ ಪೋರ್ಟ್” ಆಗದಂತೆ ನಮ್ಮಲ್ಲಿಯೆ ಅವರಿಗೆ ಸರಿಯಾದ ಮನ್ನಣೆ ನೀಡುವುದು ಕನ್ನಡದವರ ಕರ್ತವ್ಯ.
ಆಮೇಲೆ….
ಉಳಿದವರು: ಅಚ್ಯುತ್,ಉಮಾಶ್ರೀ,ಪದ್ಮಜಾ ರಾವ್..ಇವರುಗಳು ಪಾತ್ರಕ್ಕೆ ನ್ಯಾಯ ಒದಗಿದಿದ್ದಾರೆ.
ಆಮೇಲೆ…
ಇನ್ನೇನು ಇಲ್ಲ..
ಇಲ್ಲ…ವಿಷಯ ಇದೇ..:
ಇಂತಹ ಒಳ್ಳೆಯ ಕನ್ನಡ ಚಿತ್ರಗಳು ಬಂದಾಗ ಹೋಗಿ ಚಿತ್ರಮಂದಿರದಲ್ಲೆ ನೋಡಿ. ನೋಡಿ ಇಂತಹ ಚಿತ್ರಗಳನ್ನು ಬೆಂಬಲಿಸಿ.
ನಾವು ಯಾರಿಗೂ ಕಮ್ಮಿ ಇಲ್ಲ…ನಮ್ ಕನ್ನಡದವರೆಂದರೆ ಸುಮ್ನೆ ಅಲ್ಲ…!!!
ಗಿರ್-ಗಿಟ್ಲೆ ಮಾರ್ಕ್ಸ್:
೯೭/೧೦೦
