ಉತ್ಸಾಹವಿದೆ..ಉಲ್ಲಾಸದ ಹುಡುಕಾಟ ಪ್ರೇಕ್ಷಕನದು..

Published on May 11, 2010 by Puneeth B A   ·   No Comments

ಅದೃಷ್ಟ ಎಂಬ ಪದಕ್ಕೆ ಪರ್ಯಾಯ ಹುಡುಕೋದಾದ್ರೆ,ಅದಕ್ಕೆ ಸಿಗೋ ಮೊದಲನೆ ಉತ್ತರ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್.ರಾತ್ರೋ ರಾತ್ರಿ ಕೋಟಿ ಹುಡುಗ ಎಂಬ ಖ್ಯಾತಿಗೆ ಪಾತ್ರನಾದ ನಮ್ಮ ಗಣೇಶ.ಗಣೇಶ್ ಅಭಿಮಾನಿ ಬಳಗದಲ್ಲಿ ಹೆಚ್ಚು ಹೆಂಗಸರು,ಮಕ್ಕಳು.ಸಾಲು ಸಾಲು ಹಿಟ್ ಚಿತ್ರಗಳನ್ನೆ ಕೊಟ್ಟವ “ಬೊಂಬಾಟ್” ಚಿತ್ರದಿಂದ ಸಾಲು-ಸಾಲು ಸೋಲುಗಳನ್ನೆ ಕಾಣುತ್ತಿದ್ದಾರೆ.ಬೊಂಬಾಟ್,ಸಂಗಮ,ಸರ್ಕಸ್ ಎಲ್ಲವೂ ಬಾಕ್ಸ್ ಆಫಿಸ್ ನಲ್ಲಿ ತೋಪಾದವು. ಈ ಹಿಂದೆ ತೆರೆ ಕಂಡ “ಮಳೆಯಲಿ ಜೊತೆಯಲಿ” ಗಣೇಶನಿಗೆ ಸ್ವಲ್ಪ ಮಟ್ಟಿನ ಯಶಸ್ಸನ್ನು ತಂದು ಕೊಟ್ಟಿತು. ಗಣಿ ಮಾಡಿದ ಎಲ್ಲಾ ಸ್ವಮೇಕ್ ಚಿತ್ರಗಳು ಮಕಾಡೆ ಮಲುಗಿದ್ದರಿಂದ “ಮ..ಜೋ” ಮಾಡುವ ಮುನ್ನ ಅವರೊಂದು ರಿಮೇಕ್ ಚಿತ್ರದಲ್ಲಿ ಅಭಿನಯಿಸಿದರು. “ಮಳೆಯಲಿ ಜೊತೆಯಲಿ” ಮುಂಚೆಯೇ ತೆರೆಗೆ ಬರಬೇಕಾಗಿದ್ದ ಈ ಚಿತ್ರ ಈಗ ತೆರೆಗೆ ಬಂದಿದೆ.ಅದುವೆ ತೆಲುಗಿನ “ಉಲ್ಲಾಸಂಗ ಉತ್ಸಾಹಂಗ” ಚಿತ್ರದ ಅವತರಣಿಕೆ “ಉಲ್ಲಾಸ ಉತ್ಸಾಹ”.ಪಾಯಶಃ “ಉಲ್ಲಾಸ ಉತ್ಸಾಹ” “ಮ..ಜೋ..” ಮುಂಚೆಯೇ ತೆರೆ ಕಂಡಿದ್ದರೆ,”ಮ..ಜೋ” ಇನ್ನು ಚೆನ್ನಾಗಿ ಒಡುತಿತ್ತೇನೋ…ಕಾರಣ “ಉಲ್ಲಾಸ ಉತ್ಸಾಹ” ಪ್ರೇಕ್ಷಕನಿಗೆ “ಗಣೇಶ್..ಎಂಬ ನಟ ಎಲ್ಲೂ ಹೋಗಿಲ್ಲ..ಇನ್ನು ಆಕ್ಟ್ ಮಾಡ್ತಾ ಇದ್ದಾನೆ” ಎಂಬ ಮನವರಿಕೆ ಚಿತ್ರ.”ಉಲ್ಲಾಸ ಉತ್ಸಾಹ” ಗಣೇಶನ ರೆಗುಲರ್ ಪಾಟ್ರನ್ ಗೆ ಸೂಟ್ ಆಗುವ ಚಿತ್ರ.

ಇನ್ನು “ಉಲ್ಲಾಸ ಉತ್ಸಾಹ” ವಿಮರ್ಶೆ:

“ಉಲ್ಲಾಸ ಉತ್ಸಾಹ” ಚಿತ್ರದ ಕಥೆಯಲ್ಲಿ ಹೊಸತೆನಿಲ್ಲ. ರೀಮೇಕ್ ಮಾಡಲೇ ಬೇಕಾದಂಥ “ಬೊಂಬಾಟ್” ಕಥೆಯಂತೂ ಅಲ್ಲ.”ಉಲ್ಲಾಸ ಉತ್ಸಾಹ” ಸಾದಾರಣ ಮನರಂಜನಾತ್ಮಕ ಸಿನಿಮಾ.ಇಡೀ ಚಿತ್ರ ಗಣೇಶಮಯವಾಗಿದೆ,ಪ್ರತಿ ಫ್ರೇಂ ನಲ್ಲೂ ಇರುವ ಗಣೇಶ್..ನೋಡಲು ಚೆಂದ. ಮುಂಗಾರು ಮಳೆಯ ಪ್ರೀತಂ ಇಲ್ಲೂ ಇದ್ದಾನೆ. ಆದರೆ ಚಿತ್ರದಲ್ಲಿ ಬಾರಿ ಎಡವಿರೋದು ನಿರ್ದೇಶಕ “ದೇವರಾಜ್ ಪಾಲನ್”.ಸಾಮಾನ್ಯವಾಗಿ ಗಣೇಶ್ ಚಿತ್ರದಲ್ಲಿ ಇರಬೇಕಾದ ಪಂಚಿಂಗ್ ಡೈಲಾಗುಗಳು ಇಲ್ಲಿ ಪೂರ್ ಡೈಲಾಗುಗಳಾಗಿವೆ. ಹಾಡುಗಳ ವಿಚಾರಕ್ಕೆ ಬಂದರೆ,”ಇದು ಗಣೇಶ್ ಚಿತ್ರನಾ??” ಎನ್ನಿಸುವುದಂತೂ ನಿಜ.”ಚಲಿಸುವಾ ಚೆಲುವೆ..”ಹಾಡೊಂದನ್ನು ಬಿಟ್ಟರೆ ಬೇರಾವ ಹಾಡುಗಳು ಮೋಡಿ ಮಾಡೊಲ್ಲ.ಇನ್ನು ನಾಯಕಿ ಯಾಮಿ ಗೌತಮಿ ನೋಡಲು ಸುಂದರ,ಅಭಿನಯದಲ್ಲೂ ಚೆಂದ.

ಆದರೆ ಮೊದಲರ್ಧ ಬಹಳ ಸಪ್ಪೆ.ಹಾಸ್ಯ ತರಿಸಲು ಜೋಕುಗಳನ್ನು, ಸನ್ನಿವೇಶಗಳನ್ನು ತುರುಕಿದಂತಿವೆ. ದ್ವಿತಿಯಾರ್ಧದಲ್ಲಿ ಗಣೇಶ್ ಮತ್ತಷ್ಟು ಆಪ್ತರೆನಿಸುತ್ತಾರೆ. ಅಭಿನಯದ ವಿಷಯದಲ್ಲಿ,ಬೇರೆ ಚಿತ್ರಗಳಿಗೆ ಹೋಲಿಸಿದರೆ,ಗಣೇಶ್ ಅಭಿನಯ ತುಂಬ ಸಾಧಾರಣ.ಅವರ ಗಾಳಿಪಟ,ಅರಮನೆಯಲ್ಲಿ ಮಾಡಿದ ಅಭಿನಯದ ಮುಂದೆ “ಉಲ್ಲಾಸ ಉತ್ಸಾಹ” ಕೊಂಚ ಸಪ್ಪೆ.

ಚಿತ್ರಮಂದಿರದಾಚೆ ಬಂದಾಗ,ಚಿತ್ರ ಚೂರು ನೆನಪಿನಲ್ಲಿ ಇಳಿಯುವುದಿಲ್ಲ. ಅಕಸ್ಮಾತ್ ಉಳಿದರೂ ಅದು : “ಬೇಡ ಸರೋಜ..ಬೇಡ..”

ಇದು ನೋಡಲೇ ಬೇಕಾದ ಚಿತ್ರವಂತೂ ಅಲ್ಲ.ಆದರೆ ಬೇಸಿಗೆ ರಜೆಯಲ್ಲಿ,ಫ್ಯಾಮಿಲಿ ಆಡಿಯನ್ಸ್ ಗೆ ಉತ್ತಮ ಮನರಂಜನೆ “ಉಲ್ಲಾಸ ಉತ್ಸಾಹ”.ಒಮ್ಮೆ ಹೋಗಿ ನೋಡಿ ಬನ್ನಿ…

Rating: 7/10

Readers Comments (0)




Please note: Comment moderation is enabled and may delay your comment. There is no need to resubmit your comment.

Author Info