ಬರ್ತಿದೆ “ಗಾಂಧಿನಗರದ ಗಿರ್-ಗಿಟ್ಲೆ”!!

By | April 6, 2010

ಗಂಧದಗುಡಿ.ಕಾಂ ಅಂತರ್ಜಾಲದಲ್ಲಿರುವ ಕನ್ನಡ ಚಿತ್ರರಂಗದ ಬಗೆಗಿನ ಅತ್ಯುತ್ತಮ ವೆಬ್-ಸೈಟುಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಅದಕ್ಕೆ ಕಾರಣ ಇಷ್ಟೆ, ಬೇರೆ ಎಲ್ಲ ವೆಬ್-ಸೈಟುಗಳು ಒಂದು ಸೀಮಾ ರೇಖೆ ಹಾಕಿಕೊಂಡು ಕೇವಲ ಒಬ್ಬ ವ್ಯಕ್ತಿ ಪೂಜೆ ಅಥವಾ ಒಂದು ದಿಕ್ಕಿನ ಯೋಚ(ಜ)ನೆಯನ್ನು ಇಟ್ಟುಕೊಂಡಿರುತ್ತದೆ.

ಗಂಧದಗುಡಿ.ಕಾಂ ಗೆ ಯಾವುದೆ ಸೀಮಾ ರೇಖೆಯಿಲ್ಲ. ಪ್ರತಿ ವಿಷಯದ ಬಗ್ಗೆ ಇಲ್ಲಿ ಚಿಂತನ-ಮಂಥನವಾಗುತ್ತದೆ. ಅದು ಆ ವಿಷಯದ ಪರವಾಗಿರಬಹುದು, ವಿರೋಧವಾಗಿರಬಹುದು. ಒಬ್ಬ ಪ್ರೇಕ್ಷಕನ ಸೂಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇರುವ ಸುಪ್ತ ವೇದಿಕೆ ಗಂಧದಗುಡಿ.ಕಾಂ.

ಗಂಧದಗುಡಿ.ಕಾಂ ಮುಖಪುಟದ ಬರಹಗಾರರ ಪಟ್ಟಿಗೆ ನಾನು ಹೊಸ ಸೇರ್ಪಡೆ. ಇನ್ನು ಮುಂದೆ ನಾನು ಗಂಧದಗುಡಿಯಲ್ಲಿ ಒಂದು ಹೊಸ ಆಲೋಚನೆಯೊಂದಿಗೆ, ಹೊಸ ಅಭಿರುಚಿಯೊಂದಿಗೆ, ಹೊಸ ಆಯಾಮದೊಂದಿಗೆ,ಒಂದು ಹೊಸ ಕಾಲಂ ಶುರುಮಾಡುತ್ತಿದ್ದೇನೆ.
ಅದುವೆ ” ಗಾಂಧಿನಗರದ ಗಿರ್-ಗಿಟ್ಲೆ “.

ಗಿರ್-ಗಿಟ್ಲೆಯ ರಭಸ ಪ್ರಾರಂಭದಿಂದಲೇ ಜೋರಾಗಿರುತ್ತದೆ. ಈ ಗಿರ್-ಗಿಟ್ಲೆ ಗಾಂಧಿನಗರದ ಗಲ್ಲಿ-ಗಲ್ಲಿಗಳಿಗೆ ಸಂಚರಿಸಿ ವಿಶೇಷ ಬರಹಗಳನ್ನು ನಿಮ್ಮ ಮುಂದೆ ತರಲಿದೆ.
ಇಲ್ಲಿ ಎಲ್ಲವೂ ನೇರ..ದಿಟ್ಟ..ನಿರಂತರ..

ಇದುವೆ ರಂಗು-ರಂಗಿನ ಗಿರ್-ಗಿಟ್ಲೆ.

ಗಿರ್-ಗಿಟ್ಲೆ ನಿಮಗೆ ಇಷ್ಟ ಆಗುತ್ತೆ ಎಂದು  ನಂಬಿದ್ದೇನೆ. “ಗಾಂಧಿನಗರದ ಗಿರ್-ಗಿಟ್ಲೆಗೆ ನಿಮ್ಮ ಪ್ರೋತ್ಸಾಹ ಅತ್ಯವಶ್ಯಕ.
ಕೊಡುತ್ತೀರಿ ತಾನೆ?

ಗಾಂಧಿನಗರದ ಗಿರ್-ಗಿಟ್ಲೆಯ ಮಜಾ ತೆಗೆದುಕೊಳ್ಳಲು ರೆಡಿಯಾಗಿ….!!!
-ಇಂತಿ
ನಿಮ್ಮವನೆ ಪುನೀತ್.ಬಿ.ಎ