ಸಾಹಸ ಸಿಂಹ ಅಸ್ತಂಗತ!

Published on December 30, 2009 by Akumar   ·   2 Comments

ಘರ್ಜನೆ ನಿಲ್ಲಿಸಿದ ಸಾಹಸ ಸಿಂಹ!

ಡಾ.ವಿಷ್ಣುವರ್ಧನ್ ಇನ್ನಿಲ್ಲ!

vishnuvardhan

ನಿನ್ನೆಯಷ್ಟೇ ಹಿರಿಯ ಗಾಯಕ ಸಿ.ಅಶ್ವಥ್ ಅವರನ್ನು ಕಳೆದುಕೊಂಡು ದುಃಖತಪ್ತವಾಗಿದ್ದ ಕನ್ನಡ ನಾಡಿನ ಜನತೆಗೆ ಮತ್ತೊಂದು ಆಘಾತಕಾರಿ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಡಿಸೆಂಬರ್ 30 ಬುಧವಾರದ ಮುಂಜಾನೆ ಕರ್ನಾಟಕದ ಪಾಲಿಗೆ ಅತ್ಯಂತ ನೋವಿನ ಘಳಿಗೆ. ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ವಿಷ್ಣು ಅಣ್ಣ ವಿಧಿವಶರಾಗಿದ್ದಾರೆ! ಅಯ್ಯೋ ಇದೆಂತಹ ಘೋರ ಸುದ್ದಿ! ಇನ್ನೇನು ಅವರ ಆಪ್ತ ರಕ್ಷಕ ಸಿನಿಮಾ ಬಿಡುಗಡೆಯಾಗಲಿದೆ ಎಂದು ಸಂಭ್ರಮಿಸುತ್ತಿದ ಅವರ ಅಭಿಮಾನಿ ಬಳಗ ತಮ್ಮ ನೆಚ್ಚಿನ ನಾಯಕ ನಟನನ್ನು ಕಳೆದುಕೊಂಡು ಕಣ್ಣೀರ ಹೊಳೆಯನ್ನು ಹರಿಸುವಂತಾಗಿದೆ. 2009 ಕನ್ನಡ ಚಿತ್ರರಂಗದ ಪಾಲಿಗೆ ಸೋಲಿನ ವರ್ಷ ಮಾತ್ರ ಎಂದು ಭಾವಿಸಲಾಗಿತ್ತು… ಆದರೆ ಈಗ ಗೊತ್ತಾಗುತ್ತಿದೆ ಇದು ಸಾವು ನೋವಿನ ವರ್ಷ ಕೂಡ ಹೌದು ಎಂದು!

ಸುಮಾರು 3 ದಶಕಗಳ ಕಾಲ ಕನ್ನಡ ಚಿತ್ರರಂಹವನ್ನು ಆಳಿದ ಡಾ.ವಿಷ್ಣು ಕನ್ನಡ ನಾಡು ಕಂಡ ಮೇರು ನಟ. ಅತ್ಯಂತ ಪ್ರತಿಭಾವಂತ, ಸಜ್ಜನ ಹೃದಯವಂತ. ಸುಮಾರು 197 ಚಿತ್ರಗಳು ತೆರೆಕಂಡಿವೆ. ವಂಶವೃಕ್ಷ ವಿಷ್ಣು ಅವರ ಮೊದಲ ಚಿತ್ರವಾಗಿತ್ತು. ಪುಟ್ಟಣ್ಣ ಅವರ ಗರಡಿಯಲ್ಲಿ ಬೆಳೆದ ವಿಷ್ಣುವರ್ಧನ್ ಅವರಿಗೆ ಅತ್ಯಂತ ಹೆಸರು ತಂದು ಕೊಟ್ಟ ಚಿತ್ರ ನಾಗರಹಾವು! ಆ ನಂತರ ವಿಷ್ಣು ತಿರುಗಿ ನೊಡಿದ್ದೇ ಇಲ್ಲ. ಏಳು ಬಾರಿ ರಾಜ್ಯ ಪ್ರಶಸ್ತಿ, ಐದು ಬಾರಿ ಫಿಲಂ ಫೇರ್ ಪ್ರಶಸ್ತಿ  ವಿಷ್ಣುವರ್ಧನ್ ಮುಡಿಗೇರಿತ್ತು! ಬಳ್ಳಾರಿ ನಾಗ ಇತ್ತೀಚೆಗೆ ತೆರೆಕಂಡ ಅವರ ಕೊನೆಯ ಚಿತ್ರ. ಆಪ್ತ ಮಿತ್ರ ಚಿತ್ರದ ಮುಂದುವರಿದ ಭಾಗವಾದ “ಆಪ್ತ ರಕ್ಷಕ” ಚಿತ್ರ ಇನ್ನೇನು ತೆರೆಕಾಣಬೇಕು ಎನ್ನುವಷ್ತರಲ್ಲೇ ವಿಷ್ಣು ನಮ್ಮನ್ನಗಲಿದ್ದಾರೆ. ಕನ್ನಡ ಚಿತ್ರರಂಗ ಬಡವಾಗಿದೆ!

ವಿಷ್ಣುವರ್ಧನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗಂಧದಗುಡಿ ತಂಡ ಅವರಿಗೆ ಭಾವಪೂರ್ಣ ಶದ್ಧಾಂಜಲಿಯನ್ನು ಅರ್ಪಿಸುತ್ತದೆ.

Readers Comments (2)
  1. Sahasasimha says:

    May ur soul rest in peace Vishnu sir :’(

  2. Dheeraj simha says:

    matte hutti ba namellara APTJA MITHRA, RAMACHARI,SAHASA SIMHA.





Please note: Comment moderation is enabled and may delay your comment. There is no need to resubmit your comment.

Author Info

Author: Akumar

Akumar is a software engineer from Bangalore and an avid movie watcher and reviewer.