ನವೆಂಬರ್ 27 ರಿಂದ ಡಿಸೆಂಬರ್ 3 ರವರೆಗೆ
.
ಈ ವಾರ ತೆರೆಕಾಣಲಿರುವ ಮೂರು ಚಿತ್ರಗಳಲ್ಲಿ ಮೊದಲನೆಯದು ರಿಷಿ, ಶ್ರೀ, ಮಿಲನ, ವಂಶಿ ಚಿತ್ರಗಳ ನಿರ್ದೇಶಕ ಪ್ರಕಾಶ್ ನಿರ್ದೇಶನದ “ಗೋಕುಲ” ಚಿತ್ರ. ಇದು ಪ್ರಕಾಶ ಅವರ ಹೋಂ ಬ್ಯಾನರ್ ಚಿತ್ರ! ವಿಜಯ ರಾಘವೇಂದ್ರ, ಯಶ್, ಪೂಜಾ ಗಾಂಧಿ, ನಕ್ಷತ್ರ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಸಂಗೀತ ನಿರ್ದೇಶಕರು ಮನೋ ಮೂರ್ತಿ! ಚಿತ್ರ ನವೀಕರಣಗೊಂಡು “ಅನುಪಮ” ಎಂದು ಮರುನಾಮಕರಣಗೊಂಡಿರುವ ಅಪರ್ಣಾದಲ್ಲಿ ತೆರೆಕಾಣುತ್ತಿದೆ.
Starring Vijay Raghavendra, Yash, Pooja Gandhi, Nakshatra, Pavan
Music Manomurthy
Director Prakash
Producer Tejaswini Prakash
.
ಕೆಂಚ, ಗುಲಾಮ ನಂತರ ಪ್ರಜ್ವಲ್ ದೇವರಾಜ್ ಅಭಿನಯದ “ಜೀವಾ” ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಚಿತ್ರದ ನಿರ್ದೇಶಕರು ಪ್ರಭು ಶ್ರೀನಿವಾಸ್. ಪ್ರಜ್ವಲ್ ಗೆ ಈ ಚಿತ್ರವಾದರೂ ಬ್ರೇಕ್ ನೀಡುತ್ತಾ ಕಾದು ನೋಡಬೇಕು.
Starring Prajwal Devaraj, Ruthva, Chandrashekhar
Music Gurukiran
Director Prabhu Srinivas
Producer Paramesh, Prem
.
ಒಂದಕ್ಷರದ ಚಿತ್ರಗಳು ಕನ್ನಡದಲ್ಲಿ ಈಗಾಗಲೇ ಹಲವಾರು ಬಂದಿವೆ. ಇದನ್ನು ಪರಿಚಯಿಸಿದವರು ಪ್ರಾಯಶಃ ಉಪೇಂದ್ರ ಇರಬೇಕು. ಶ್ಶ್, A, ಓಂ, ಸ್ವಸ್ತಿಕ್ ಚಿಹ್ನೆ, Z ಮುಂತಾದ ಒಂದಕ್ಷರದ ಚಿತ್ರಗಳ ಸಾಲಿಗೆ ಈವಾರದ ಹೊಸ ಸೇರ್ಪಡೆ – ಅ. ತಾಜ್ ಮಹಲ್ ಖ್ಯಾತಿಯ ಅಭಿಮನ್ ರಾಯ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹೊಸಬರ ಈ ಚಿತ್ರದ ನಿರ್ದೇಶಕರು ಎಂ. ಮಹೇಶ್ ಕುಮಾರ್.

Starring Sudhi, Divya Shri, Shobharaj, Padma Vasanthi
Music Abhiman Roy
Director M Mahesh Kumar
Producer Shapheer
.


ಗಾಂಧೀನಗರದ ಅತ್ಯಂತ ಹಳೆಯ ಚಿತ್ರ - ಮನಸಾರೆ (10ನೇ ವಾರದಲ್ಲಿ — ಸಾಗರ್).

.
.
NOTE - Now you can also post your comments here itself !
