ಮಹಾ ಮೂವಿ “ಮನಸಾರೆ” ತೆರೆಗೆ!

Published on September 23, 2009 by Akumar   ·   No Comments

ಗಾಂಧೀನಗರ ಈ ವಾರ

ಸೆಪ್ಟೆಂಬರ್ 25 ರಿಂದ ಅಕ್ಟೋಬರ್  1ರವರೆಗೆ

2009ರ ಅತಿ ನಿರೀಕ್ಷಿತ ಚಿತ್ರ ಮನಸಾರೆ ಈ ವಾರ ತೆರೆಗೆ

Manasaare1

2006/2007 ರಲ್ಲಿ ಮುಂಗಾರು ಮಳೆಯಲ್ಲಿ ಕನ್ನಡ ಚಿತ್ರರಂಗವನ್ನು ತೋಯಿಸಿ, 2008ರಲ್ಲಿ ಗಾಳಿಪಟ ಹಾರಿಸಿದ್ದ ಕನ್ನಡದ ಅತ್ಯಂತ ಬೇಡಿಕೆಯ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ಟರ ನಿರ್ದೇಶನದ ಮನಸಾರೆ ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶನ ಬದಲಿಗೆ ಈ ಬಾರಿ ಭಟ್ಟರ ಗರಡಿಗೆ ದಿಗಂತ್ ಬಂದಿದ್ದಾನೆ. ನಾಯಕಿಯಾಗಿ ಆಂದ್ರಿತಾ ರೇ ಅಭಿನಯಿಸಿರುವ ಚಿತ್ರದ ಸಂಗೀತ ನಿರ್ದೇಶಕರು ಮುಂಗಾರು ಮಳೆಯ ಮಾಂತ್ರಿಕ ಮನೋ ಮೂರ್ತಿ!

ಸೋನು ನಿಗಂ ಹಾಡಿರುವ “ಎಲ್ಲೋ ಮಳೆಯಾಗಿದೆ ಇಂದು” ಈಗಾಗಲೇ ಅತ್ಯಂತ ಜನಪ್ರಿಯವಾಗಿದ್ದು ಮತ್ತೊಂದು ಅನಿಸುತಿದೆ ಯಾಕೋ ಇಂದು ಆಗುವ ಎಲ್ಲ ಸಾಧ್ಯತೆಗಳಿವೆ. ಜೊತೆಗೆ ಶ್ರೇಯಾ ಗೋಶಾಲ್ ಹಾಡಿರುವ “ನಾ ನಗುವ ಮೊದಲೇನೆ“, “ಕಣ್ಣ ಹನಿ” ಹಾಡುಗಳು ಕೂಡ ಕೇಳುಗರ ಮನ ಸೆಳೆದಿದ್ದು ಚಿತ್ರ ಯಾವಾಗ ತೆರೆಗೆ ಬರುವುದೋ ಎಂದು ಜನ ಕಾಯುವಂತೆ ಮಾಡಿದ್ದವು. ಅವರ ಕಾಯುವಿಕೆ ಈ ವಾರ ಕೊನೆಗಾಣಲಿದೆ! ಮನಸಾರೆ ನಿಮ್ಮ ಮುಂದೆ ಬರಲಿದೆ…

Main Theater SAGAR

Starring Diganth, Andrita Ray, Neetu, Rangayana Raghu
Music          Manomurthy
Director     Yogaraj Bhat
Producer   Rockline Venkatesh

ನಿಮ್ಮ ಗಂದಗುಡಿಯಲ್ಲಿ ಮನಸಾರೆ ಚಿತ್ರದ ಮಹಾ ವೀಕ್ಷಕ ವಿವರಣೆ (GIGA LIVE REPORT)

ಇದೇ ಸೆಪ್ಟೆಂಬರ್ 25ರ ಶುಭ ಶುಕ್ರವಾರದಂದು ಬೆಳಿಗ್ಗೆ 10ರಿಂದ… ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ

ManasaareLive

ಈ ವಾರದ ಮತ್ತೊಂದು ಚಿತ್ರ - ಧನುಷ್

Dhanush

Main Theater MENAKA

Starring Prasanth, Ramaneetu Chowdary, Mohan, Munni, Khashi ,Satyajit
Music        MS Maruthi
Director   Jayanth
Producer
B.Satyanarayana

2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 90!

ಮುಂದುವರಿದ ಪ್ರದರ್ಶನ

ನೇರ ಪ್ರದರ್ಶನ

  • ರಾಜ್ ದಿ ಶೋ ಮ್ಯಾನ್ – ಸಂತೋಷ್ : 7 ನೇ ವಾರ
  • ವಾಯುಪುತ್ರ - ನರ್ತಕಿ : 4 ನೇ ವಾರ
  • ಪ್ರೇಮ್ ಕಹಾನಿ-ತ್ರಿವೇಣಿ :3 ನೇ ವಾರ
  • ಭಾಗ್ಯದ ಬಳೆಗಾರ-ಕಪಾಲಿ :3 ನೇ ವಾರ
  • ರಜನಿ – ಅಪರ್ಣ: 2ನೇ ವಾರ

ಸಂಯೋಜಿತ ಪ್ರದರ್ಶನ

  • ಚೆಲುವಿನ ಚಿಲಿಪಿಲಿ -ಸಪ್ನಾ :  5 ನೇ ವಾರ (ಮೊದಲ ಎರಡು ವಾರ -ತ್ರಿವೇಣಿ)

ಗಾಂಧೀನಗರದ ಅತ್ಯಂತ ಹಳೆಯ ಚಿತ್ರ – ರಾಜ್  ದಿ ಶೋ ಮ್ಯಾನ್ (7ನೇ ವಾರದಲ್ಲಿ)

ಹೊರ ನಡೆಯುತ್ತಿರುವ ಚಿತ್ರಗಳು

ಯಾವುದೂ ಇಲ್ಲ.

ಮುಂದಿನ ಬದಲಾವಣೆ

  • ಪರಿಚಯ
  • ಬಳ್ಳಾರಿ ನಾಗ
  • ಅಭಯ್
  • ಗಿಲ್ಲಿ

ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡದ ಕಲರವ:

  • ಮನಸಾರೆ : ಹೊಸ ಬಿಡುಗಡೆ (TBD)
  • ರಜನಿ :  2 ನೇ ವಾರ (3 shows)
  • ರಾಜ್ ದಿ ಶೋ ಮ್ಯಾನ್ : 7 ನೇ ವಾರ (1 show)
  • ವಾಯುಪುತ್ರ : 4 ನೇ ವಾರ (1 show)

Fun

Fun Cinemas, Cunningham Road Bengaluru

Fun Cinemas, Gulbarga

  • ಮನಸಾರೆ : ಹೊಸ ಬಿಡುಗಡೆ (TBD)
  • ಮನಸಾರೆ : ಹೊಸ ಬಿಡುಗಡೆ (TBD)
BIGCinemas
Big Cinemas (Adlabs), Mangalore
ಮನಸಾರೆ : ಹೊಸ ಬಿಡುಗಡೆ (TBD)

akumar.reach@gmail.com

Readers Comments (0)

Comments are closed.

Author Info

Author: Akumar

Akumar is a software engineer from Bangalore and an avid movie watcher and reviewer.