ಗಿಲ್ಲಿಗಾಗಿ ಕಾದಿರುವೆ

Published on October 14, 2009 by Akumar   ·   4 Comments

ಗಾಂಧೀನಗರ ಈ ವಾರ

ಅಕ್ಟೋಬರ್  16 ರಿಂದ ಅಕ್ಟೋಬರ್  22 ರವರೆಗೆ

ರಾಜ್- ದಿ ಶೋ ಮ್ಯಾನ್ ಹೊರಕ್ಕೆ!

ಪ್ರೇಮ್ ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿನಯದ ಈ ವರ್ಷದ ಅತೀ ದೊಡ್ಡ ಹಿಟ್ ಚಿತ್ರವಾಗುತ್ತದೆಂದೇ ಬಿಂಬಿಸಿದ್ದ ರಾಜ್-ದಿ ಶೋ ಮ್ಯಾನ್ ಚಿತ್ರ 9 ವಾರಗಳ ಪ್ರದರ್ಶನದ ನಂತರ ಸಂತೋಷ್ ಚಿತ್ರಮಂದಿರದಿಂದ ಹೊರನಡೆಯುತ್ತಿದೆ. ಆ ಮೂಲಕ ಚಿತ್ರ 100ದಿನ ಕಾಣುವ ಕನಸು ಭಗ್ನವಾಗಿದೆ! ಜೊತೆಗೆ ಪೂಜಾ ಗಾಂಧಿ ನಟನೆಯ ಹುಚ್ಚಿ ಚಿತ್ರ ಒಂದೇ ವಾರಕ್ಕೆ ಕೈಲಾಶ್ ಚಿತ್ರಮಂದಿರದಿಂದ ಹೊರನಡೆಯುತ್ತಿದೆ! ಗಾಂಧೀನಗರದ ಸೋಲಿನ ಸರಪಣಿ ಮುಂದುವರಿದಿದೆ…

ಜಗ್ಗೇಶ ಪುತ್ರನ ಗಿಲ್ಲಿ ಆಟ!

ಜಗ್ಗೇಶ ಮಗ ಗುರುರಾಜ್ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಗಿಲ್ಲಿ ಚಿತ್ರ ಈ ವಾರ ತೆರೆಕಾಣುತ್ತಿದೆ. ಇದು ತಮಿಳಿನ  7G ರೈನ್ ಬೋ ಕಾಲೋನಿ ಎಂಬ ಚಿತ್ರದ ಕನ್ನಡ ಅವತರಣಕೆ. ಈ ಹಿಂದೆ ಸತ್ಯಾ ಇನ್ ಲವ್ ನಿರ್ದೇಶಿಸಿದ್ದ ರಾಘವ ಲೋಕಿ ಈ ಚಿತ್ರದ ನಿರ್ದೇಶಕರು. All the best Gururaj!

gilli

Main Theater SANTHOSH

Starring  Gururaaj, Yathiraj, Preethi Singh
Music          Yuvan Shankar Raja
Director     Raghava Loki
Producer  Anaji Nagaraj, Jayanna, Vijay Kiran

ನಿನಗಾಗಿ ಕಾದಿರುವೆ ಎನ್ನಲಿರುವ ಪೂಜಾ ಗಾಂಧಿ

ಇನಿಯಾ ಸೋತರೇನಂತೆ.. ಹುಚ್ಚಿ ಒಂದೇ ವಾರ ಓಡಿದರೇನಂತೆ.. ತನ್ನ ಕೈಯಲ್ಲಿ ಚಿತ್ರಗಳಿಗೇನೂ ಬರವಿಲ್ಲ ಎನ್ನುವ ಪೂಜಾ ವಿಶಾಲ್ ಹೆಗ್ಡೆ ಜೊತೆ ನಟಿಸಿರುವ “ನಿನಗಾಗಿ ಕಾದಿರುವೆ” ಚಿತ್ರ ಈ ವಾರ ತೆರೆಕಾಣುತ್ತಿದೆ. ಪ್ರಚಾರವೇ ಇಲ್ಲದೇ ಕಳೆದ ವಾರ ತೆರೆಕಂಡ ಹುಚ್ಚಿ ಒಂದೇ ವಾರಕ್ಕೆ ಔಟಾಗಿದೆ. ಈ ವಾರ ಮತ್ತೊಂದು ಚಿತ್ರ ಪ್ರಚಾರವಿಲ್ಲದೇ ಧಿಡೀರನೆ ಬರುತ್ತಿದೆ. ಇದರ ಕಥೆ ಏನಾಗುತ್ತೋ ಗೊತ್ತಿಲ್ಲ…! ಪೂಜಾ.. ಸ್ವಲ್ಪ ಸ್ಪೀಡ್ ಕಮ್ಮಿ ಮಾಡಮ್ಮ.. ಇಷ್ಟೊಂದು ಓವರ್ ಸ್ಪೀಡ್ ಒಳ್ಳೇದಲ್ಲ..

ninagagi_kadiruve

Main Theater TRIBHUVAN

Starring  Vishal Hegde, Pooja Gandhi, Dilip Raj
Music         Robin Gurang
Director    Jolly Bastan
Producer  Sathish Babu, Jolly Bastan

2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 97!

ಮುಂದುವರಿದ ಪ್ರದರ್ಶನ

ನೇರ ಪ್ರದರ್ಶನ

  • ಭಾಗ್ಯದ ಬಳೆಗಾರ-ಕಪಾಲಿ :6 ನೇ ವಾರ
  • ರಜನಿ – ಅಪರ್ಣ: 5ನೇ ವಾರ
  • ಮನಸಾರೆ – ಸಾಗರ್: 4ನೇ ವಾರ
  • ಅಭಯ್ - ನರ್ತಕಿ: 3 ನೇ ವಾರ
  • ಬಳ್ಳಾರಿ ನಾಗ – ತ್ರಿವೇಣಿ: 2ನೇ ವಾರ

ಗಾಂಧೀನಗರದ ಅತ್ಯಂತ ಹಳೆಯ ಚಿತ್ರ – ಭಾಗ್ಯದ ಬಳೆಗಾರ (6ನೇ ವಾರದಲ್ಲಿ — ಕಪಾಲಿ).


ಹೊರ ನಡೆಯುತ್ತಿರುವ ಚಿತ್ರಗಳು

  • ರಾಜ್ ದಿ ಶೋ ಮ್ಯಾನ್ – ಸಂತೋಷ್ ದಿಂದ. ಒಟ್ಟು ಪ್ರದರ್ಶನ 9 ವಾರಗಳು
  • ಹುಚ್ಚಿ – ಕೈಲಾಶ್ ದಿಂದ : ಒಟ್ಟು ಪ್ರದರ್ಶನ 1 ವಾರ

ಮುಂದಿನ ಬದಲಾವಣೆ

  • ಉಲ್ಲಾಸ ಉತ್ಸಾಹ – ಅಕ್ಟೋಬರ್ 23ರಿಂದ
  • ಪರಿಚಯ - ಅಕ್ಟೋಬರ್ 23ರಿಂದ
  • ಯೋಗಿ – ಅಕ್ಟೋಬರ್ 30ರಿಂದ

ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡದ ಕಲರವ:

  • ಗಿಲ್ಲಿ (ಹೊಸ ಬಿಡುಗಡೆ)
  • ನಿನಗಾಗಿ ಕಾದಿರುವೆ (ಹೊಸ ಬಿಡುಗಡೆ)
  • ಮನಸಾರೆ : 4 ನೇ ವಾರ (5 shows)
  • ರಾಜ್ ದಿ ಶೋ ಮ್ಯಾನ್ : 10ನೇ ವಾರ (1 show)

Fun

Fun Cinemas, Gulbarga

Fun Cinemas, Bangalore

  • ಮನಸಾರೆ : 4 ನೇ ವಾರ (3 shows) (Bangalore and Gulbarga)
  • ಮನಸಾರೆ : 4 ನೇ ವಾರ (3 shows)
NOTE - Now you can also post your comments here itself !
You can also reach me  at:

akumar.reach@gmail.com

Readers Comments (4)
  1. sudi says:

    GOOD update….

  2. Kumars says:

    Good Work Kums :)

  3. Ajax says:

    All the Best to Poojs’s movie Ninagaari kadhiruve.. <3

  4. mayura says:

    hi best of luck to gilli & ninagagi kadirve team





Please note: Comment moderation is enabled and may delay your comment. There is no need to resubmit your comment.

Author Info

Author: Akumar

Akumar is a software engineer from Bangalore and an avid movie watcher and reviewer.