ದೇವರು ಕೊಟ್ಟ ತಂಗಿಗೆ IPC ಸೆಕ್ಷನ್ 300ರ ಭಯ!

Published on November 10, 2009 by Akumar   ·   1 Comment

ಗಾಂಧೀನಗರ ಈ ವಾರ

ನವೆಂಬರ್  12 ರಿಂದ ನವೆಂಬರ್ 19 ರವರೆಗೆ

ದೇವರು ಕೊಟ್ಟ ತಂಗಿ, IPC ಸೆಕ್ಷನ್ 300, www.ಭಯ.com

ಈ ವಾರ ಮತ್ತೆ ಮೂರು ಚಿತ್ರಗಳು ತೆರೆಗೆ!

ಕಳೆದ ವಾರ ಮೂರು ಚಿತ್ರಗಳು ತೆರೆಕಂಡಿದ್ದವು. ಈ ವಾರ ಮತ್ತೆ ಮೂರು ಚಿತ್ರಗಳು ಧರೆಗಿಳಿಯಲಿವೆ! ಅಳುವವರಿಗಾಗಿ “ದೇವರು ಕೊಟ್ಟ ತಂಗಿ“, ಹೊಡೆದಾಟ ನೋಡುವವರಿಗೆ “IPC ಸೆಕ್ಷನ್ 300” ಮತ್ತು ದೆವ್ವ ನೋಡಿ ಭಯ ಪಡುವವರಿಗಾಗಿ “www.ಭಯ.com” ಈ ವಾರ ಬಿಡುಗಡೆಯಾಗಲಿವೆ!. ಜೊತೆಗೆ ಮನಸಾರೆ ಭರ್ಜರಿ 50 ದಿನಗಳನ್ನು ಪೂರೈಸುತ್ತಿದೆ!

ಒಂದು ದಿನ ಮುಂಚೆಯೇ ಬರಲಿರುವ ತಂಗವ್ವ!

2009ರಲ್ಲಿ  ನಂದ, ಹ್ಯಾಟ್ರಿಕ್  ಹೊಡಿ ಮಗ, ಭಾಗ್ಯದ ಬಳೆಗಾರ ಚಿತ್ರಗಳ ನಂತರ ಶಿವರಾಜ್ ಕುಮಾರ್ ಅಭಿನಯದ ನಾಲ್ಕನೆಯ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಸಾಯಿ ಪ್ರಕಾಶ್ ನಿರ್ಮಿಸಿ ನಿರ್ದೇಶಿಸಿರುವ “ದೇವರು ಕೊಟ್ಟ ತಂಗಿ” ಈ ವಾರ ತೆರೆಗೆ ಬರುತ್ತಿದೆ. ಶಿವಣ್ಣನಿಗೆ ಈ ಬಾರಿ ಮೀರಾ ಜಾಸ್ಮಿನ್ ತಂಗಿಯಾಗಿದ್ದಾರೆ!  ಈ ಸೆಂಟಿಮೆಂಟಲ್ ಚಿತ್ರವನ್ನು ಪ್ರೇಕ್ಷಕ ಮಹಾ ಪ್ರಭು ಹೇಗೆ ಸ್ವೀಕರಿಸುತ್ತಾನೋ ಕಾದು ನೋಡಬೇಕಿದೆ.

ಈ ಚಿತ್ರ 12 ನೇ ತಾರೀಖು  ಅಂದರೆ ಗುರುವಾರವೇ ಬಿಡುಗಡೆಯಾಗಲಿದೆ! ಅದೂ ಭೂಮಿಕಾ ಚಿತ್ರಮಂದಿರದಲ್ಲಿ.  ಸ್ಟೇಟ್ಸ್  ಭೂಮಿಕಾ ಆದಮೇಲೆ ದರ್ಶನ್ ಅಭಿನಯದ ಯೋಧ ಅಲ್ಲಿ ಬಿಡುಗಡೆಯಾಗಿತ್ತು. ಅದಾದ ನಂತರ ಭೂಮಿಕಾ ತಾಂತ್ರಿಕ ಕಾರಣಗಳಿಂದ ಮತ್ತೆ ಬಾಗಿಲು ಹಾಕಿತ್ತು. ಈಗ ದೇವರು ಕೊಟ್ಟ ತಂಗಿ ಮೂಲಕ ಭೂಮಿಕಾ ಪುನರಾರಂಭಗೊಳ್ಳಲಿದೆ.

DKT1

Main Theater BHOOMIKA

Starring  Shivaraj Kumar, Meera Jasmin, Monika, Hema Chaudhari
Music          Hamsalekha
Director     Om Sai Prakash
Producer  Rajamma Sai Prakash

IPC ಸೆಕ್ಷನ್ 300 ರಲ್ಲಿ ವಿಜಯ ರಾಘವೇಂದ್ರ

ಈ ವಾರದ ಎರಡನೇ ಚಿತ್ರ ವಿಜಯ ರಾಘವೇಂದ್ರ ಅಭಿನಯದ IPC ಸೆಕ್ಷನ್ 300!. ಸಾಹಸ ಪ್ರಧಾನ ಆಕ್ಷನ್ ಚಿತ್ರ ಎಂದು ಹೆಸರೇ ಹೇಳುತ್ತದೆ. ದೇವರಾಜ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

IPC

Main Theater MENAKA

Starring  Vijaya Raghavendra, Priyanka, Devaraj, Suman Ranganath
Music          Veer Samarth
Director     Shashikanth
Producer  RS Shankare Gowda


www.BHAYA.com ಎಂಬ ಭಯಾನಕ ಚಿತ್ರ!

ಮೂರನೆಯ ಚಿತ್ರ ಹಾರರ್ ಸಸ್ಪೆನ್ಸ್ ಚಿತ್ರ! www.ಭಯ.com!

bhaya

Main Theater <TBD> (ಈವರೆಗೂ ನಿರ್ಧಾರವಾಗಿಲ್ಲ)

Starring Santhosh, Madhu Sagar, Vikram, Rohini, Meghana, Roshini

Music Rajesh Ramanath
Director Vemugal Jagannath Rao
Producer Anu Narayan, Sumanth, Shwetha, Suchith


2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 107!


ಮುಂದುವರಿದ ಪ್ರದರ್ಶನ

Manasaare completes Grand 50 days!

Manasaare50

ಬಿಡುಗಡೆಯಾದ ಬಹುತೇಕ ಎಲ್ಲಾ ಕಡೆ ಭರ್ಜರಿ 50 ದಿನಗಳನ್ನು ಪೂರೈಸಿ ನೂರನೇ ದಿನಕ್ಕೆ ಮುನ್ನುಗ್ಗುತ್ತಿದೆ…

ನೇರ ಪ್ರದರ್ಶನ

  • ಮನಸಾರೆ - ಸಾಗರ್: 8 ನೇ ವಾರ
  • ಯಾರದು – ಕಪಾಲಿ : 4 ನೇ ವಾರ
  • ಯೋಗಿ - ನರ್ತಕಿ: 3 ನೇ ವಾರ
  • ಪರಿಚಯ - ಸಂತೋಷ್: 2 ನೇ ವಾರ
  • 3 ಗುಟ್ಟು 1 ಸುಳ್ಳು 1 ನಿಜ - ತ್ರಿವೇಣಿ : 2 ನೇ ವಾರ
  • 10th ಕ್ಲಾಸ್ A ಸೆಕ್ಷನ್ - ತ್ರಿಭುವನ್ : 2 ನೇ ವಾರ

ಗಾಂಧೀನಗರದ ಅತ್ಯಂತ ಹಳೆಯ ಚಿತ್ರ - ಮನಸಾರೆ (8ನೇ ವಾರದಲ್ಲಿ — ಸಾಗರ್).

manasaarelogo


ಹೊರ ನಡೆಯುತ್ತಿರುವ ಚಿತ್ರಗಳು


ಮುಂದಿನ ಬದಲಾವಣೆ

  • ದೇವ್ರು - ನವೆಂಬರ್ 20 ರಿಂದ
  • ರಾಮ್
  • ಜೀವ
  • ಉಲ್ಲಾಸ ಉತ್ಸಾಹ

(ಮಲ್ಟಿಪ್ಲೆಕ್ಸ್ ವಿವರಗಳನ್ನು ಈ ವಾರದಿಂದ ಕೈಬಿಡಲಾಗಿದೆ. ಗಂಧದಗುಡಿಯಲ್ಲಿ Vinu ಅವರು  ಪ್ರತೀ ವಾರ ಕೊಡುವ Update ನೋಡಬೇಕಾಗಿ ವಿನಂತಿ).

Click here for “Kannada Movies in Multiplex - This Week” thread.

NOTE - Now you can also post your comments here itself !
You can also reach me  at:

akumar.reach@gmail.com

Readers Comments (1)
  1. Manjunath D L says:

    Bhaya.com is really tremondous movie in kannada horror history…. those who have dare please go a head and face it face to face…. narthaki Theatre





Please note: Comment moderation is enabled and may delay your comment. There is no need to resubmit your comment.

Author Info

Author: Akumar

Akumar is a software engineer from Bangalore and an avid movie watcher and reviewer.