ಡಿಸೆಂಬರ್ 11 ರಿಂದ ಡಿಸೆಂಬರ್ 17 ರವರೆಗೆ
ಸರ್ಕಸ್ ನಂತರ ಹನ್ನೊಂದು ತಿಂಗಳಾದಮೇಲೆ ತೆರೆಕಾಣುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರ!
ಮುಂಗಾರುಮಳೆಯ ಅಭೂತ ಪೂರ್ವ ಯಶಸ್ಸಿನ ನಂತರ ಪ್ರಾಯಷಃ ಗೋಲ್ಡನ್ ಸ್ಟಾರ್ ಅಭಿಮನಿಗಳು ಇಷ್ಟೊಂದು ಸುದೀರ್ಘವಾಗಿ ಕಾದಿರಲಿಕ್ಕಿಲ್ಲ.. ಗಣೇಶ್ ಚಿತ್ರವೊಂದು ಬರದೆ ಹನ್ನೊಂದು ತಿಂಗಳಾಯಿತು. ಜನವರಿಯಲ್ಲಿ ತೆರೆಕಂಡಿದ್ದ ಸರ್ಕಸ್ ಕಡೆಯ ಚಿತ್ರ. ಈ ವಾರ ಗಣೇಶ್ ಅಭಿಮಾನಿಗಳಿಗೆ ಸುಗ್ಗಿ. ಅವರದೇ ಸಂಸ್ಥೆಯು ನಿರ್ಮಿಸಿರುವ ಮಳೆಯಲಿ ಜೊತೆಯಲಿ ಚಿತ್ರ ಈ ವಾರ ತೆರೆಕಾಣುತ್ತಿದೆ. ಇಬ್ಬರು ಬಾಂಬೆ ಬೆಡಗಿಯರು ಗಣೇಶ್‍ಗೆ ನಾಯಕಿಯರಾಗಿ ನಟಿಸಿದ್ದಾರೆ. ವಿ. ಹರಿಕೃಷ್ಣ ಸಂಗೀತ ಈಗಾಗಲೇ ಭಾರೀ ಜನಪ್ರಿಯವಾಗಿರುವುದು, ಗಣೇಶ್ ಮತ್ತೊಮ್ಮೆ ಮಳೆಯಲ್ಲಿ ನೆನೆದು ಮೊಲದೊಂದಿಗೆ ಬಂದಿರುವುದು, ಚಿತ್ರಕ್ಕೆ ನೀಡಲಾಗುತ್ತಿರುವ ಭಾರೀ ಮಟ್ಟದ ಪ್ರಚಾರ ಈ ಚಿತ್ರದ ಬಗ್ಗೆ ಕುತೂಹಲವನ್ನು ಹೆಚ್ಚುವಂತೆ ಮಾಡಿದೆ. ಪ್ರೀತಂ ಗುಬ್ಬಿ ಚಿತ್ರದ ನಿರ್ದೇಶಕರು.
Starring Ganesh, Anjana Sukhani, Yuvika
Music V.Harikrishna
Director Preetham Gubbi
Producer Smt. Shilpa Ganesh
.
ಕಳೆದ ಕೆಲವು ವಾರಗಳಿಂದ ಬರುತ್ತೆ ಬರುತ್ತೆ ಅಂತಲೇ ಭಯ ಹುಟ್ಟಿಸಿದ್ದ www.ಭಯ.com ಎಂಬ ಚಿತ್ರ ಈ ವಾರ ಬರುತ್ತಿದೆ. ಚಿತ್ರ ಮಂದಿರವೂ ಕಿಕ್ಕಿರುವುದರಿಂದ ಈ ವಾರ ಚಿತ್ರವನ್ನು ನಿರೀಕ್ಷಿಸಬಹುದು. ಇದೊಂದು ಹೊಸಬರು ನಟಿಸಿರುವ ಹಾರರ್ ಸಸ್ಪೆನ್ಸ್ ಚಿತ್ರ!
Starring Santhosh, Madhu Sagar, Vikram, Rohini, Meghana, Roshini
Music Rajesh Ramanath
Director Vemugal Jagannath Rao
Producer Anu Narayan, Sumanth, Shwetha, Suchith
.

ನೇರ ಪ್ರದರ್ಶನ
ಗಾಂಧೀನಗರದ ಅತ್ಯಂತ ಹಳೆಯ ಚಿತ್ರ - ಮನಸಾರೆ (12ನೇ ವಾರದಲ್ಲಿ — ಸಾಗರ್).

.
.
NOTE - Now you can also post your comments here itself !
