ಅಕ್ಟೋಬರ್ 9 ರಿಂದ ಅಕ್ಟೋಬರ್ 15ರವರೆಗೆ
ಉತ್ತರ ಕರ್ನಾಟಕದಲ್ಲಿ ಕಳೆದ ವಾರವಿಡೀ ಮಳೆಯ ರೌದ್ರಾವತಾದಿಂದ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಹಲವರು ಪ್ರಾಣವನ್ನೇ ತೆತ್ತಿದ್ದಾರೆ. ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇದೀಗ ಮಳೆ ನಿಂತಿದ್ದರೂ ಅದು ಮಾಡಿದ ಅನಾಹುತ ಸರಿಯಾಗಿಲ್ಲ. ಸರು ಕಳೆದುಕೊಂಡ ಜನ ಬೀದಿ ಪಾಲಾಗಿದ್ದಾರೆ. ಆಹಾರಕ್ಕಾಗಿ ಒದ್ದಾಡುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುತ್ತಿದ್ದಾರೆ. ಎದೆಲ್ಲರ ನೇರ ಪರಿಣಾಮ ಆಗಿರುವುದು ಕನ್ನಡ ಚಿತ್ರರಂಗದ ಮೇಲೆ! ಸಂಜೆಯ ಆಟಗಳಿಗೆ ಜನ ಬರುತ್ತಿಲ್ಲ. ಚಿತ್ರಮಂದಿರಗಳು ಖಾಲಿ ಖಾಲಿ! ಚಿತ್ರ ಮಂದಿರಗಳ ಬಾಡಿಗೆ ಕಟ್ಟಲೂ ಕಷ್ಟ ಪಡಬೇಕಾದ ಪರಿಸ್ಥಿತಿ ಕೆಲವೆಡೆ!
ಒಟ್ಟಿನಲ್ಲಿ ಭೀಕರ ಮಳೆಗೆ ಕನ್ನಡ ಚಿತ್ರರಂಗ ತತ್ತರಗೊಂಡಿರುವುದಂತೂ ಸತ್ಯ!
ಭೀಕರ ಮಳೆಯಿಂದ ಬೆದರಿದ ನಿರ್ಮಾಪಕರು ಬಳ್ಳಾರಿ ನಾಗ ಚಿತ್ರವನ್ನು ಮುಂದೂಡುವ ಸೂಚನೆ ನೀಡಿದ್ದರು! ಹಾಗಾಗಿ ಚಿತ್ರ ಬಿಡುಗಡೆಯಾಗುವುದು ಅನುಮಾನವಾಗಿತ್ತು. ಆದರೆ ಪ್ರಸ್ತುತ ಅವರು ಮನಸು ಬದಲಾಯಿಸಿದಂತೆ ಕಾಣುತ್ತಿದೆ. ಚಿತ್ರ ಬಿಡುಗಡೆಯ ಪಕ್ಕಾ ಜಾಹೀರಾತು ಪತ್ರಿಕೆಗಳಲ್ಲಿ ಪ್ರಕಟವಾಗಿದೆ! ಹಾಗಾಗಿ ಈ ವಾರ ವಿಷ್ಣುವರ್ಧನ್ ಅಭಿನಯದ ಬಳ್ಳಾರಿ ನಾಗ ಮತ್ತು ಪೂಜಾ ಗಾಂಧಿ ನಟನೆಯ ಹುಚ್ಚಿ ಚಿತ್ರಗಳು ಈ ವಾರ ತೆರೆಕಾಣಲಿವೆ.
Starring Dr.Vishnuvardhan, Maithreyi
Music LN Shastry
Director Dinesh Babu
Producer K.Manju
Starring Pooja Gandhi, Ananth Nag, Sudharani
Music Raj Bhaskar
Director Venkatesh Panchangam
Producer Kavitha Kumaraswamy
2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 95!

ನೇರ ಪ್ರದರ್ಶನ
ಸಂಯೋಜಿತ ಪ್ರದರ್ಶನ
ಗಾಂಧೀನಗರದ ಅತ್ಯಂತ ಹಳೆಯ ಚಿತ್ರ – ರಾಜ್ ದಿ ಶೋ ಮ್ಯಾನ್ (9ನೇ ವಾರದಲ್ಲಿ). Last week at Santhosh! Next release – GILLI



Fun Cinemas, Gulbarga
Fun Cinemas, Bangalore



Abhay is missing
Abhay Is There, see correctly.
Ballary Naga, guarantee flop agatte.. innu eshtu varsha remake madtaro yajmanru..