ಡಿಸೆಂಬರ್ 4 ರಿಂದ ಡಿಸೆಂಬರ್ 10 ರವರೆಗೆ
ಪ್ರೀತ್ಸೇ ಪ್ರೀತ್ಸೇ, ಯೋಗಿ ಚಿತ್ರಗಳ ಹೀನಾಯ ಸೋಲಿನ ನಂತರ ಯೋಗೇಶ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಮಿಳಿನಲ್ಲಿ ಧನುಷ್ ಅಭಿನಯಿಸಿ ಯರ್ರಾ ಬಿರ್ರಿ ಹಿಟ್ ಆಗಿದ್ದ ಕಾದಲ್ ಕೊಂಡೇನ್ ಚಿತ್ರವನ್ನು ರಾವಣ ಹೆಸರಿನಲ್ಲಿ ರೀಮೇಕ್ ಮಾಡಲಾಗಿದೆ. ಅಂಬಾರಿ ನಂತರ ಯಾಕೋ ಯೋಗಿ ಅದೃಷ್ಟ ಕೈ ಕೊಟ್ಟ ಹಾಗಿದೆ. ಈ ಚಿತ್ರದ ಮೂಲಕ ಯೋಗಿ ಗೆಲ್ಲುತ್ತಾರೋ ನೋಡಬೇಕು.
Main Theater BHOOMIKA
Starring Yogesh, Sanchitha Padukone
Music G Abhimann Roy
Director Yogish Hunsur
Producer Uday K Mehta, Mohan G Nayak
.
ಮಹೇಶ್ ಸುಖದರೆ ನೆನಪಿದೆಯೇ? ಕೆಲವು ವರ್ಷಗಳ ಹಿಂದೆ ರಮೇಶ್, ಕಾವೇರಿ ಅಭಿನಯದ ಸಂಭ್ರಮ ಚಿತ್ರ ಬಂದಿತ್ತಲ್ಲ, ಅದರ ನಿರ್ದೇಶಕರೇ ಇವರು. ಮಾಜಿ ಶಾಸಕ ಚನ್ನಪಟ್ಟಣದ CP ಯೋಗೇಶ್ವರ್ ನಾಯಕನಾಗಿ ಸಾಕ್ಷಿ ಶಿವಾನಂದ್ ನಾಯಕಿಯಾಗಿ ನಟಿಸಿದ್ದ ಸೈನಿಕ ಚಿತ್ರದ ನಿರ್ದೇಶಕರೂ ಇವರೇ! ಇದೇ ಮಹೇಶ್ ಸುಖದರೆ ನಿರ್ದೇಶನದ ಮತ್ತೊಂದು ಚಿತ್ರ “ಮಳೆಬಿಲ್ಲೇ” ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಸವಾರಿ ಚಿತ್ರಕ್ಕೆ ಸಂಗೀತ ನೀಡಿದ್ದ ಮಣಿಕಾಂತ್ ಕದ್ರಿ ಸಂಗೀತ ಕೊಟ್ಟಿದ್ದಾರೆ. ಚಿತ್ರ ಯಾವುದೇ ಪ್ರಚಾರವೂ ಇಲ್ಲದೇ ಧಿಡೀರ್ ಬಿಡುಗಡೆಯಾಗುತ್ತಿರುವುದು ಚಿತ್ರಕ್ಕೆ ಮಾರಕವೋ ಅಥವ ಪ್ರೇಕ್ಷಕ ಚಿತ್ರವನ್ನು ಮೆಚ್ಚಿ ಗೆಲ್ಲಿಸುವನೋ ಕಾದು ನೋಡೋಣ!
Starring Akshay, Diganth, Pragna
Music Manikanth Kadri
Director Mahesh Sukhadare
Producer Anand TN, Kodandaramu HR
.
ಈ ಚಿತ್ರ ಹೊಸಬರದ್ದು. ಪ್ರಚಾರ ಸೊನ್ನೆ. ಸಾಧನೆ – ಕನ್ನಡೇತರ ಚಿತ್ರಗಳು ತೆರೆಕಾಣುವ ಮೂವೀಲ್ಯಾಂಡ್ ನಲ್ಲಿ ತೆರೆಕಾಣುತ್ತಿರುವುದು ಮಾತ್ರ!
Starring Chandrakanth, Pushpalatha, Avinash, Tara, Shobharaj
Music AT Ravish
Director Nag Hunasod
Producer Chikka Gutyappa
.

ನೇರ ಪ್ರದರ್ಶನ
ಗಾಂಧೀನಗರದ ಅತ್ಯಂತ ಹಳೆಯ ಚಿತ್ರ - ಮನಸಾರೆ (11ನೇ ವಾರದಲ್ಲಿ — ಸಾಗರ್).

.
.
NOTE - Now you can also post your comments here itself !

waiting for maleyali jotheyali