ಸವಾರಿ-ಜೋಶ್ 100… ಮಂಜ, ಪೈಂಟರ್ , ಲವ್ ಗುರು ಆಗಮನ!

Published on July 16, 2009 by Akumar   ·   No Comments

ನಮ್ ಕನ್ನಡ ಚಿತ್ರರಂಗದ ಕಥೆಯೇ ಇಷ್ಟು ಅನ್ಸುತ್ತೆ…. ಕಳೆದ ಕೆಲವು ವಾರಗಳಿಂದ ಗಾಂಧೀ ನಗರದ ಪ್ರಮುಖ ಚಿತ್ರಮಂದಿರಗಳು ಕನ್ನಡ ಚಿತ್ರಗಳಿಲ್ಲದೇ ತೆಲುಗು, ಹಿಂದಿ ಚಿತ್ರ ತೋರಿಸ್ತಾ ಇದ್ವು…ಆದರೆ ಈ ವಾರ ಮೂರು ದೊಡ್ಡ ಚಿತ್ರಗಳು ಒಟ್ಟೊಟ್ಟಿಗೆ ತೆರೆ ಕಾಣುತ್ತಿವೆ.. ಪ್ರೇಕ್ಷಕನಿಗೆ ಯಾವುದು ನೋಡೋದು ಯಾವುದು ಬಿಡೋದು ಅಂತ ಗೊತ್ತಾಗ್ತಾ ಇಲ್ಲ.. ಬಂದ್ರೆ ಎಲ್ಲಾ ಒಟ್ಟೊಟ್ಟಿಗೆ ಬಂದ್ ಬಿಡ್ತಾವೆ.. ಇಲ್ಲಾಂದ್ರೆ ಇಲ್ಲ…
ಜುಲೈ 17ರಿಂದ ಜುಲೈ23ರ ವರೆಗೆ
ಬಂದ್ರೆ ಎಲ್ಲಾ ಒಟ್ಟೊಟ್ಟಿಗೆ ಬಂದ್ ಬಿಡ್ತವೆ…
ನಮ್ ಕನ್ನಡ ಚಿತ್ರರಂಗದ ಕಥೆಯೇ ಇಷ್ಟು ಅನ್ಸುತ್ತೆ…. ಕಳೆದ ಕೆಲವು ವಾರಗಳಿಂದ ಗಾಂಧೀ ನಗರದ ಪ್ರಮುಖ ಚಿತ್ರಮಂದಿರಗಳು ಕನ್ನಡ ಚಿತ್ರಗಳಿಲ್ಲದೇ ತೆಲುಗು, ಹಿಂದಿ ಚಿತ್ರ ತೋರಿಸ್ತಾ ಇದ್ವು…ಆದರೆ ಈ ವಾರ ಮೂರು ದೊಡ್ಡ ಚಿತ್ರಗಳು ಒಟ್ಟೊಟ್ಟಿಗೆ ತೆರೆ ಕಾಣುತ್ತಿವೆ.. ಪ್ರೇಕ್ಷಕನಿಗೆ ಯಾವುದು ನೋಡೋದು ಯಾವುದು ಬಿಡೋದು ಅಂತ ಗೊತ್ತಾಗ್ತಾ ಇಲ್ಲ.. ಬಂದ್ರೆ ಎಲ್ಲಾ ಒಟ್ಟೊಟ್ಟಿಗೆ ಬಂದ್ ಬಿಡ್ತಾವೆ.. ಇಲ್ಲಾಂದ್ರೆ ಇಲ್ಲ…
ಅಂತೂ ಮಂಜ ಎದ್ದೇಳೋ ಮನಸು ಮಾಡೇ ಬಿಟ್ಟ ನೋಡಿ…
ಬರೋಬ್ಬರಿ ಎರಡು ವರ್ಷಗಳಿಂದ ಕಂಬಳಿ ಹೊದ್ದುಕೊಂಡು ಮಲಗೇ ಇದ್ದ ನಮ್ ಮಂಜ ಈ ವಾರ ಎದ್ದೇಳ್ತಾ ಇದಾನೆ. ಆರತಿ ಎತ್ತಿರೇ ಕಳ್ ಮಂಜಂಗೆ… ನಮ್ ಸುಳ್ಳ್ ಮಂಜಂಗೆ.. ಹಲವಾರು ವಿವಾದಗಳ ನಂತರ, ಹಲವಾರು ಅಡ್ಡಿ ಆತಂಕಗಳ ನಂತರ “ಮಠ “ ಗುರು ಪ್ರಕಾಶ್
ನಿರ್ದಶನದ ಎದ್ದೇಳು ಮಂಜುನಾಥ ಚಿತ್ರ ಈ ವಾರ ಅಪರ್ಣಾ ಸೇರಿದಂತೆ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಚಿತ್ರದ ನಾಯಕಿ ಯಜ್ಞಾಶೆಟ್ಟಿ.

ಲವ್ ಗುರು, ಪೈಂಟರ್ ಕೂಡ ಈ ವಾರವೇ ತೆರೆಗೆ!

ರಾಧಿಕಾ ಪಂಡಿತ್, ತರುಣ್, ದಿಲೀಪ್ ರಾಜ್, ಯಜ್ಞಾಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಲವ್ ಗುರು ಈ ವಾರ ಸಾಗರ್ ಹಾಗೂ ಇತರೆಡೆಗಳಲ್ಲಿ ಬಿಡುಗಡೆಯಾಗುತ್ತಿದೆ. ಎರಡು ದೊಡ್ಡ ಚಿತ್ರಗಳ ಜೊತೆ ತೆರೆಕಾಣುತ್ತಿರುವುದಕ್ಕೋ ಏನೋ ಈ ಚಿತ್ರಕ್ಕೆ ಹೆಚ್ಚು ಚಿತ್ರಮಂದಿರಗಳು ಲಭ್ಯವಾಗಿಲ್ಲ. ಚಿತ್ರ ಹುಟ್ಟಿಸಿರುವ ಕುತೂಹಲಕ್ಕೆ ಹೋಲಿಸಿದರೆ ಬಿಡುಗಡೆಯಾಗುತ್ತಿರುವ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಎಂದೇ ಹೇಳಬೇಕು.

ಮತ್ತೊಂದು ಚಿತ್ರ ಲೂಸ್ ಮಾದ ಅಲಿಯಾಸ್ ಯೋಗೇಶ್, ರಂಗಾಯಣ ರಘು,ಶರಣ್ ಅಭಿನಯದ ದಿನೇಶ್ ಬಾಬು ನಿರ್ದಶನದ ಚಿತ್ರ ಮಿ.ಪೈಂಟರ್! ಕಪಾಲಿಯಲ್ಲಿಈ ಚಿತ್ರ ತೆರೆಕಾಣುತ್ತಿದೆ.

ಯಜ್ಞಾ ಶೆಟ್ಟಿ Vs ಯಜ್ಞಾ ಶೆಟ್ಟಿ!

ಪಾಪ.. ಯಜ್ಞಾ ಶೆಟ್ಟಿ ಪಾಲಿಗೆ ಈ ವಾರ ಖುಷಿಯೂ ಹೌದು.. ಜೊತೆಗೆ ಆತಂಕವೂ ಹೌದು.. ಕಾರಣ ಆಕೆಯ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವ ಮೂಲಕ ಪರಸ್ಪರ ಪೈಪೋಟಿಗೆ ಇಳಿಯುತ್ತಿವೆ.. ಎದ್ದೇಳು ಮಂಜುನಾಥಾ ಚಿತ್ರದಲ್ಲಿ ಯಜ್ಞಾ ನಾಯಕಿ. ಲವ್ ಗುರು ಚಿತ್ರದಲ್ಲಿ ಕೂಡ ಈಕೆ ಓರ್ವ ನಾಯಕಿ.ಯಾವುದು ಗೆದ್ದರೂ ಯಜ್ಞಾಗೆ ಲಾಭ! ಯಾವುದು ಸೋತರೂ ಯಜ್ಞಾಗೆ ನಷ್ಟ!

ಎದ್ದೇಳು ಮಂಜುನಾಥಾ

ಜಗ್ಗೇಶ್, ಯಜ್ಞಾಶೆಟ್ಟಿ

ಮುಖ್ಯ ಚಿತ್ರಮಂದಿರ: ಅಪರ್ಣಾ.

ಸಂಗೀತ: ಅನೂಪ್ ಸೀಳನ್

ನಿರ್ದೇಶನ: ಗುರುಪ್ರಸಾದ್

ನಿರ್ಮಾಣ: ಸನತ್ ಕುಮಾರ್
ಲವ್ ಗುರು

ತರುಣ್, ದಿಲೀಪ್ ರಾಜ್, ರಾಧಿಕಾ ಪಂಡಿತ್, ಯಜ್ಞಾ

ಮುಖ್ಯ ಚಿತ್ರಮಂದಿರ: ಸಾಗರ್.

ನಿರ್ದೇಶನ: ಪ್ರಶಾಂತ್ ರಾಜ್

ಸಂಗೀತ: ಜೋಶುವ ಶ್ರೀಧರ್

ನಿರ್ಮಾಣ: ನವೀನ್
ಮಿ.ಪೈಂಟರ್

ಯೋಗೇಶ್, ರಂಗಾಯಣ ರಘು, ಶರಣ್

ಮುಖ್ಯ ಚಿತ್ರಮಂದಿರ: ಕಪಾಲಿ.

ನಿರ್ದೇಶನ: ದಿನೇಶ್ ಬಾಬು

ಸಂಗೀತ: GR ಶಂಕರ್

ನಿರ್ಮಾಣ: ಎ.ಗಣೇಶ್, ಉಮೇಶ್ ಬಣಕಾರ್

2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 73!

::ಹೊರನಡೆಯುತ್ತಿರುವ ಚಿತ್ರಗಳು::
  • ಕಬಡ್ಡಿ (ಅಪರ್ಣಾ ದಿಂದ. ಒಟ್ಟು ಪ್ರದರ್ಶನ 2 ವಾರಗಳು)
ಮುಂದುವರಿದ ಪ್ರದರ್ಶನ:
ಸವಾರಿ, ಜೋಶ್ ಭರ್ಜರಿ ಶತದಿನೋತ್ಸವ!
ಈ ವಾರ ಡಬಲ್ ಧಮಾಕಾ! ಎರಡು ಚಿತ್ರಗಳು ಒಟ್ಟೊಟ್ಟಿಗೆ ಶತದಿನೋತ್ಸವವನ್ನಾಚರಿಸುತ್ತಿವೆ. ರಘು ಮುರ್ಜಿ-ಶ್ರೀನಗರ ಕಿಟ್ಟಿ-ಕಮಲಿನಿ ಮುಖರ್ಜಿ ಅಭಿನಯದ ಸವಾರಿ ಹಾಗೂ ಹೊಸ ನಟ ನಟಿಯರು ನಟಿಸಿರುವ ಜೋಶ್ ಚಿತ್ರಗಳು 100ದಿನಗಳನ್ನು ಪೂರೈಸಲಿವೆ! ಈ ಎರಡೂ ಯಶಸ್ವೀ ಚಿತ್ರಗಳಿಗೆ ನಮ್ಮ ಶುಭ ಹಾರೈಕೆಗಳು!
ನೇರ ಪ್ರದರ್ಶನ:
ನೇರ ಪ್ರದರ್ಶನ ಅಂದರೆ ಬಿಡುಗಡೆಯ ದಿನಾಂಕದಿಂದಲೂ ಇಲ್ಲಿಯವರೆಗಗೂ ಬೇರೆ
ಚಿತ್ರಮಂದಿರಗಳಿಗೆ ಸ್ಥಳಾಂತರಗೊಳ್ಳದೇ ಬಿಡುಗಡೆಯಾದ ಚಿತ್ರಮಂದಿರದಲ್ಲೇ ಸತತವಾಗಿ
ಪ್ರದರ್ಶನಗೊಳ್ಳುತ್ತಿರುವ ಚಿತ್ರ.
2 ನೇ ವಾರಕ್ಕೆ – ಸಂತೋಷ್
3 ನೇ ವಾರಕ್ಕೆ -ನರ್ತಕಿ
4 ನೇ ವಾರಕ್ಕೆ -ತ್ರಿವೇಣಿ
5 ನೇ ವಾರಕ್ಕೆ -ಭೂಮಿಕಾ
15 ನೇ ವಾರಕ್ಕೆ - ತ್ರಿಭುವನ್

100 ನೇ ದಿನ!

ಸಂಯೋಜಿತ ಪ್ರದರ್ಶನ:
ಸಂಯೋಜಿತ ಪ್ರದರ್ಶನ ಅಂದರೆ ಬಿಡುಗಡೆಯಾದ ಚಿತ್ರಮಂದಿರದಿಂದ ಕಾರಣಾಂತರವಾಗಿ
ಗಾಂಧೀನಗರದ ಇನ್ನೊಂದು ಚಿತ್ರಮಂದಿರಕ್ಕೆ ಸ್ಥಳಾಂತರವಾಗಿ ಪ್ರದರ್ಶಿಸಲ್ಪಡುತ್ತಿರುವ
ಚಿತ್ರ. ಬಿಡುಗಡೆಯಾಗಿ ಕೆಲವು ವಾರಗಳ ನಂತರ ಹಲವಾರು ಕಾರಣಗಳಿಗೆ ಚಿತ್ರಗಳು ಬೇರೆಡೆಗೆ
ಎತ್ತಂಗಡಿಯಾಗುವುದು ಗಾಂಧೀನಗರದ ಮಟ್ಟಿಗೆ ಸಾಮಾನ್ಯ! ಹಾಗಾಗಿ ಅಂತಹ ಚಿತ್ರಗಳ
ವಿವರವನ್ನು ಈ ವಿಭಾಗದಲ್ಲಿ ಕೊಡಲಾಗುತ್ತದೆ.
15 ನೇ ವಾರಕ್ಕೆ - ಸಪ್ನಾ (ತ್ರಿವೇಣಿ – 7 ವಾರಗಳು. ಸಪ್ನಾದಲ್ಲಿ 8 ನೇ ವಾರ)

100 ನೇ ದಿನ!

ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ ಯಾವುದು ಗೊತ್ತೇನ್ರೀ?
ಸವಾರಿ -15 ನೇ ವಾರದಲ್ಲಿ (ನೇರ ಪ್ರದರ್ಶನ – ತ್ರಿಭುವನ್ )

ಜೋಶ್ – 15 ನೇ ವಾರದಲ್ಲಿ (ಸಂಯೋಜಿತ ಪ್ರದರ್ಶನತ್ರಿವೇಣಿ(7) + ಸಪ್ನಾ 8ನೇ ವಾರ )

ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳು:
ಸವಾರಿ, ಜೋಶ್ ಭರ್ಜರಿ 100 ನೇ ದಿನ!

PVR Cinemas, Bengaluru

ಸವಾರಿ (1 Shows) – 15 ನೇ ವಾರ 100 Days!


ಜೋಶ್ (1 show) – 15 ನೇ ವಾರ100 Days!

ಒಲವೇ ಜೀವನ ಲೆಕ್ಕಾಚಾರ (1 shows) – 6 ನೇ ವಾರ

ಚಮ್ಕಾಯ್ಸಿ ಚಿಂದಿ ಉಡಾಯ್ಸಿ (1 shows) – 3 ನೇ ವಾರ

ಕಬಡ್ಡಿ (1 shows) – 3 ನೇ ವಾರ

Love ಗುರು (2 Shows) ಈ ವಾರ ಬಿಡುಗಡೆ

ಮಿ.ಪೈಂಟರ್ (2 Shows) ಈ ವಾರ ಬಿಡುಗಡೆ

ಎದ್ದೇಳು ಮಂಜುನಾಥಾ (3 Shows) ಈ ವಾರ ಬಿಡುಗಡೆ

ggg
  • ಹೌಸ್ ಫುಲ್
  • ಮುನಿಯಾ
  • ನಾಗವಲ್ಲಿ
  • ಪ್ರೇಮ್ ಕಹಾನಿ

akumar.reach@gmail.com

Readers Comments (0)

Comments are closed.

Author Info

Author: Akumar

Akumar is a software engineer from Bangalore and an avid movie watcher and reviewer.