RAM-Super Entertainer !

RAM-Super Entertainer !

ಚಿತ್ರ – ರಾಮ್

“ಸ್ನೇಹಿತನ ಪ್ರೇಯಸಿಗೆ ಬೇರೆ ಹುಡುಗನ ಜೊತೆ ಮದುವೆ ನಡೆಯುವುದನ್ನು ತಪ್ಪಿಸಲು ಆ ಹುಡುಗಿಯನ್ನು ಕಲ್ಯಾಣ ಮಂಟಪದಿಂದ ರಾಮ್ (ಪುನೀತ್) ಹಾರಿಸಿಕೊಂಡು ಬರುತ್ತಾನೆ.. ಆದರೆ ಅಚಾತುರ್ಯದಿಂದ ಅದು ಸ್ನೇಹಿತನ ಪ್ರೇಯಸಿ ಆಗಿರದೇ ಮತ್ತೊಬ್ಬ ಹುಡುಗಿ ಆಗಿರುತ್ತಾಳೆ! ಗಡಿಬಿಡಿಯಲ್ಲಿ ಬೇರೆ ಕಲ್ಯಾಣ ಮಂಟಪಕ್ಕೆ ನುಗ್ಗಿದ್ದೇ ಈ ಯಡವಟ್ಟಿಗೆ ಕಾರಣ! ಯಡವಟ್ಟಿನಲ್ಲಿ ಹಾರಿಸಿಕೊಂಡು ಬಂದ ಈ ಹುಡುಗಿ ಪೂಜಾ (ಪ್ರಿಯಾಮಣಿ) ಮೇಲೆ ನಾಯಕನಿಗೆ ಲವ್ ಆಗುತ್ತದೆ! ಅವಳನ್ನು ಅವಳ ಹಿಂದೆ ಬಿದ್ದಿರುವ ಅವಳ ಎರಡು ಮಾವಂದಿರ ಕುಟುಂಬಗಳಿಂದ ಕಾಪಾಡಲು ರಾಮ್ ನೆರವಾಗುತ್ತಾನೆ… ಜೊತೆ ಜೊತೆಗೆ ಒಡೆದು ಹೋದ ಆ ಎರಡು ಕುಟುಂಬಗಳು ಒಂದಾಗಲೂ ಶ್ರಮಿಸುತ್ತಾನೆ! — ಇದಿಷ್ಟು ರಾಮಾವತಾರದ ಪಕ್ಷಿ ನೋಟ…

ಇದೊಂದು ರೀಮೇಕ್ ಅನ್ನೋದೊಂದು ಬಿಟ್ಟರೆ ಚಿತ್ರ ಸೂಪರ್! ಎಲ್ಲೂ ಬೇಜಾರ್ ಎಂಬ ಮಾತೇ ಇಲ್ಲ!. ಚಿತ್ರದ ಪ್ಲಸ್ ಪಾಯಿಂಟೇ ಇದು. ಚಿತ್ರಕಥೆ ಮತ್ತು ಚುರುಕಾದ ನಿರೂಪಣೆಯಲ್ಲಿ ನಿರ್ದೇಶಕ ಮಾದೇಶ್ ಗೆಲ್ಲುತ್ತಾರೆ. ಜೊತೆಗೆ ಫುಲ್ ಟೈಂ ಕಾಮಿಡಿಯಿಂದಾಗಿ ಚಿತ್ರ ಮೊದಲಿನಿಂದ ಕೊನೇವರೆಗೂ ನಗೆಯ ಹಬ್ಬ! ರಂಗಾಯಣ ರಘು, ಸಾಧು ಕೋಕಿಲ, ಅರುಣ್ ಸಾಗರ್ ಸೇರಿ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರೆ. ದೊಡ್ಡಣ್ಣ ಕೂಡ ಅಲ್ಲಲ್ಲಿ ಕಚಗುಳಿಯಿಡುತ್ತಾರೆ. ಮನರಂಜನೆಯ ದೃಷ್ಟಿಯಲ್ಲಿ ನೋಡಿದರೆ ಇದು ಇತ್ತೀಚಿನ ದಿನಗಳಲ್ಲಿ ಬಂದ ಉತ್ತಮ ಚಿತ್ರಗಳಲ್ಲೊಂದು.

ಸಾಮಾನ್ಯ ಪ್ರೇಕ್ಷಕನಾದ ನನಗೇ ಚಿತ್ರ ಇಷ್ಟೊಂದು ಹಿಡಿಸಿರಬೇಕಾದರೆ ಪುನೀತ್ ಅಭಿಮಾನಿಗಳಿಗಂತೂ ಇದು ರಸದೌತಣವನ್ನುಣಿಸುವುದರಲ್ಲಿ ಸಂದೇಹವೇ ಇಲ್ಲ. ಹಾಡು, ನಟನೆ ಆಕ್ಷನ್ ಎಲ್ಲದರಲ್ಲೂ ಪುನೀತ್ ಸೈ! ಜೊತೆಗೆ ಪ್ರಿಯಾ ಮಣಿಗೆ ಕೂಡ ಫುಲ್ ಮಾರ್ಕ್ಸ್! ಎರಡು ಹಾಡುಗಳಿಗೆ ಥಿಯೇಟರ್ ಪೂರ್ತಿ ಶಿಳ್ಳೆಯೋ ಶಿಳ್ಳೆ.. ಒಟ್ಟಾರೆ ಒಟ್ಟಾರೆ ರಾಮ್ ಒಂದು ಟೀಂ ವರ್ಕ್! ಈ ಗೆಲುವು ಎಲ್ಲರ ಗೆಲುವು!

ರಾಮ್ ಸುಂದರ ಕೌಟುಂಬಿಕ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ! ಈ ಸಂತೋಷ, ಗೆಲುವಿನಲ್ಲೂ ಎರಡು ಸಂಗತಿಗಳು ಸ್ವಲ್ಪ ನೋವುಂಟು ಮಾಡುತ್ತಿದೆ. ಈ ಗೆಲುವನ್ನು ನಾವು ಸಂಭ್ರಮದಿಂದ ಪರಭಾಷೆಯವರೆದುರು ಎದೆ ತಟ್ಟಿ ಹೇಳಿಕೊಳ್ಳುವಂತಿಲ್ಲ… ಕಾರಣ ಇದು ತಮ್ಮದೇ ಸರಕು ಎಂದು ತೆಲುಗರು ಅಣಕಿಸುತ್ತಾರೆ. ಇದು ಅವರ “ರೆಡಿ” ಚಿತ್ರದ ನಕಲು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ರೀಮೇಕಾದರೆ ಆಗಲಿ, ಸೋಲಿನಿಂದ ಕಂಗೆಟ್ಟಿರುವ ನಮ್ಮ ಕನ್ನಡದ ಬಡಪಾಯಿ ನಿರ್ಮಾಪಕನಾದೂ ಈ ಚಿತ್ರದಿಂದ ಲಾಭ ಕಾಣುವಂತಾಯಿತಲ್ಲ ಎಂದು ಬೀಗುವ ಪರಿಸ್ಥಿತಿಯೂ ಇಲ್ಲ.. ಯಾಕೆಂದರೆ ಈ ಚಿತ್ರದಿಂದ ಜೇಬು ತುಂಬಿಸಿಕೊಳ್ಳುತ್ತಿರುವವರು ನಮ್ಮ ಕನ್ನಡದ ನಿರ್ಮಾಪಕರಲ್ಲ.. ಪಕ್ಕದ ಆಂಧ್ರದ ಆದಿತ್ಯ ಬಾಬು! ಕೆರೆಯ ನೀರನು ಕೆರೆಗೆ ಚೆಲ್ಲಿ ಎಂದರೆ ಇದೇನಾ?

ಏನಾದರೂ ಆಗಲಿ ರಾಮ್ ಮಸ್ತ್ ಮನರಂಜನೆಯನ್ನಂತೂ ಕೊಡುತ್ತದೆ.. ವರ್ಷವಿಡೀ ಸೋಲುಂಡಿರುವ ಚಿತ್ರರಂಗ ವರ್ಷಾಂತ್ಯದಲ್ಲಿ ತುಸು ಚೇತರಿಸಿಕೊಂಡಿರುವ ಹಾಗಿದೆ… ಈ ಗೆಲುವು ಹಾಗೆಯೇ ಮುಂದುವರಿಯಲಿ…

8/10

5 Comments »

  1. p20 Says:

    nice film. sure 8/10

    comment-bottom
  2. A20 Says:

    Dabba movie…….

    comment-bottom
  3. narasimha Says:

    excellent , nice, & romantic, biggest hit in 2009

    comment-bottom
  4. abhemane Says:

    very nice entataining movie . rangayana raghu super comediean

    comment-bottom
  5. Praveen Says:

    Kannada prekshare……Do not entertain remakes……

    comment-bottom

RSS feed for comments on this post.

Leave a comment