ಮತ್ತೆ ಹುಟ್ಟಿ ಬಾ ಗಾನಕೋಗಿಲೆ…

Published on July 21, 2009 by Akumar   ·   No Comments

ಈ ದಿನ ಕನ್ನಡಿಗರಿಗೆ ನೋವಿನ ದಿನ.. ಕರ್ನಾಟಕದ ಹೆಮ್ಮೆಯಾಗಿದ್ದ ನಾಡಿನ ಹಿರಿಯ ಹಿಂದೂಸ್ತಾನಿ ಗಾಯಕಿ ಪದ್ಮ ವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರು ನಮ್ಮನಗಲಿದ್ದಾರೆ. 1913 ಮಾರ್ಚ್ 5 ರಂದು ಜನಿಸಿದ್ದ ಗಂಗೂಬಾಯಿ ಹಿಂದೂಸ್ತಾನಿ ಸಂಗೀತದಲ್ಲಿ ಜಗತ್ಪ್ರಸಿದ್ದರಾಗಿದ್ದರು. ಗಾಧೀಜಿಯವರ ಎದುರು ಹಾಡಿ ಭೇಷ್ ಎನಿಸಿಕೊಂಡಿದ್ದ ಇವರಿಗೆ ಸಂದ ಪ್ರಶಸ್ತಿ, ಗೌರವಗಳು ಹಲವಾರು.

ಇಂದು ಬೆಳಿಗಿನ ಜಾವ ಹುಬ್ಬಳಿಯ ಆಸ್ಪತ್ರೆಯಲ್ಲಿ ಗಂಗೂಬಾಯಿ ಚಿರನಿದ್ರೆಗೆ ಜಾರಿದ್ದಾರೆ. ಸಂಗೀತ ಶಾರದೆಯನ್ನು ಕಳೆದುಕೊಂಡ ಸಾರಸ್ವತ ಲೋಕ ಬಡವಾಗಿದೆ.

ಗಂಗೂಬಾಯಿ ಹಾನಗಲ್
(ಮಾರ್ಚ್ 5 1913 – ಜುಲೈ 21 2009)

ಗಂಗೂಬಾಯಿ ಹಾನಗಲ್ ಅವರಿಗೆ ನಮ್ಮ ಶ್ರದ್ಧಾಂಜಲಿ. ಮತ್ತೊಮ್ಮೆ ಹುಟ್ಟಿ ಬಾ ಗಾನ ಕೋಗಿಲೆಯೇ ಎಂದು ಪ್ರಾರ್ಥಿಸುತ್ತೇವೆ…

Readers Comments (0)

Comments are closed.

Author Info

Author: Akumar

Akumar is a software engineer from Bangalore and an avid movie watcher and reviewer.