ಕಬಡ್ಡಿ ಆಡಿ.. ಚಿಂದಿ ಉಡಾಯ್ಸಿ

Published on July 1, 2009 by Akumar   ·   No Comments

ಸದಾ ಕಾಲ ಕನ್ನಡ ಚಿತ್ರಗಳನ್ನೇ ಪ್ರದರಶಿಸುತ್ತಿದ್ದ ನರ್ತಕಿಯಲ್ಲಿ ಕಳೆದ ವಾರ ಹಿಂದಿ ಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ಕಪಾಲಿಯಲ್ಲಿ ಕಳೆದ ವಾರ ಬಿಡುಗಡೆಯಾದ ತೆಲುಗು ಚಿತ್ರಭರ್ಜರಿ ಪ್ರದರ್ಶನದೊಂದಿಗೆ ಈ ವಾರ ಎರಡನೇ ವಾರಕ್ಕೆ ಲಗ್ಗೆ ಹಾಕುತ್ತಿದೆ. ಇವೆರಡು ಆಘಾತಗಳ ನಡುವೆ ಮತ್ತೊಂದು ಮಹಾ ಆಘಾತಕಾರಿ ಸುದ್ದಿ ಬಂದಿದೆ… ನಾಗತಿಹಳ್ಳಿ ಚಂದ್ರ ಶೇಖರ್ ನಿರ್ದೇಶನದ ಒಲವೇ ಜೀವನ ಲೆಕ್ಕಾಚಾರ ಸಾಗರ್ ಚಿತ್ರಮಂದಿರದಿಂದ ಮೂರೇ ವಾರಕ್ಕೆ ಕಾಲ್ತೆಗೆಯುತ್ತಿದ್ದು ಆ ಜಾಗಕ್ಕೆ ಹಿಂದಿ ಚಿತ್ರ ಬರುತ್ತಿದೆ!  ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುತ್ತಿದ್ದ ಮೂರು ಮುಖ್ಯ  ಚಿತ್ರಗಳ ಪಾಡು ಹೇಗಾಗಿ ಹೋಯಿತು ನೋಡಿ…

ಜುಲೈ 3ರಿಂದ ಜುಲೈ9ರ ವರೆಗೆ

ಕೆ.ಜಿ.ರಸ್ತೆಯ ತುಂಬಾ ಕನ್ನಡೇತರ ಚಿತ್ರಗಳ ಕಾರುಬಾರು!

ಸದಾ ಕಾಲ ಕನ್ನಡ ಚಿತ್ರಗಳನ್ನೇ ಪ್ರದರಶಿಸುತ್ತಿದ್ದ ನರ್ತಕಿಯಲ್ಲಿ ಕಳೆದ ವಾರ ಹಿಂದಿ ಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ಕಪಾಲಿಯಲ್ಲಿ ಕಳೆದ ವಾರ ಬಿಡುಗಡೆಯಾದ ತೆಲುಗು ಚಿತ್ರಭರ್ಜರಿ ಪ್ರದರ್ಶನದೊಂದಿಗೆ ಈ ವಾರ ಎರಡನೇ ವಾರಕ್ಕೆ ಲಗ್ಗೆ ಹಾಕುತ್ತಿದೆ. ಇವೆರಡು ಆಘಾತಗಳ ನಡುವೆ ಮತ್ತೊಂದು ಮಹಾ ಆಘಾತಕಾರಿ ಸುದ್ದಿ ಬಂದಿದೆ… ನಾಗತಿಹಳ್ಳಿ ಚಂದ್ರ ಶೇಖರ್ ನಿರ್ದೇಶನದ ಒಲವೇ ಜೀವನ ಲೆಕ್ಕಾಚಾರ ಸಾಗರ್ ಚಿತ್ರಮಂದಿರದಿಂದ ಮೂರೇ ವಾರಕ್ಕೆ ಕಾಲ್ತೆಗೆಯುತ್ತಿದ್ದು ಆ ಜಾಗಕ್ಕೆ ಹಿಂದಿ ಚಿತ್ರ ಬರುತ್ತಿದೆ!  ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುತ್ತಿದ್ದ ಮೂರು ಮುಖ್ಯ  ಚಿತ್ರಗಳ ಪಾಡು ಹೇಗಾಗಿ ಹೋಯಿತು ನೋಡಿ…
ಕಬಡ್ಡಿ, ಚಮ್ಕಾಯ್ಸಿ ಚಿಂದಿ ಉಡಾಯ್ಸಿ ತೆರೆಗೆ
ಎರಡು ಹೊಸ ಚಿತ್ರಗಳು ತೆರೆಕಾಣುತ್ತಿವೆ. ಕನ್ನಡದಷ್ಟೇ ಅನಿವಾರ್ಯ ಎಂಬ ಅಡಿಬರಹವುಳ್ಳ ಕಬಡ್ಡಿ ಚಿತ್ರ ಒಂದಾದರೆ  ಶೀರ್ಷಿಕೆಯಲ್ಲಿ ಕನ್ನಡ  ಅನಿವಾರ್ಯವೇ ಅಲ್ಲ ಎಂದು ತೋರಿಸುವ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಎಂಬ ಚಿಂದಿ  ಆಯೋ  ಶೀರ್ಷಿಕೆಯುಳ್ಳ  ಚಿತ್ರ ಮತ್ತೊಂದು. ಇವೆರಡು ಚಿತ್ರಗಳು  ಕನ್ನಡಿಗರಿಗೆ ಈ ವಾರದ ಕೊಡುಗೆಗಳು!  ಚಿಂದಿ ಉಡಾಯ್ಸೋಕೆ ರೆಡಿ ಆಗಿ..

ಚಮ್ಕಾಯ್ಸಿ

ಚಿಂದಿಉಡಾಯ್ಸಿ

ಕೋಮಲ್, ನಿಧಿ ಸುಬ್ಬಯ್ಯ, ಶರಣ್

ಮುಖ್ಯ ಚಿತ್ರಮಂದಿರ:ನರ್ತಕಿ.

ಸಂಗೀತ: ಮಸ್ತ್ ಬಾಲಾಜಿ

ನಿರ್ದೇಶನ: AR ಬಾಬು

ನಿರ್ಮಾಣ: ಅನಸೂಯಾ R, ಜೀವನ್ S

ಕಬಡ್ಡಿ

ಪ್ರವೀಣ್, ಕಿಶೋರ್, ಪ್ರಿಯಾಂಕ

ಮುಖ್ಯ ಚಿತ್ರಮಂದಿರ: ಅಪರ್ಣ.

ಸಂಗೀತ: ಹಂಸಲೇಖ

ನಿರ್ದೇಶನ: ನರೇಂದ್ರ ಬಾಬು

ನಿರ್ಮಾಣ: ರವಿ

2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 68!

::ಹೊರನಡೆಯುತ್ತಿರುವ ಚಿತ್ರಗಳು::
ತಲೆಕೆಳಗಾದ ನಾಗತಿಹಳ್ಳಿ ಲೆಕ್ಕಾಚಾರ.. ಒಲವೇ ಜೀವನ ಲೆಕ್ಕಾಚಾರ ಮೂರೇ ವಾರಕ್ಕೆ ಔಟ್ !
ಮಾಧ್ಯಮಗಳು ಏಷ್ಟೇ ಹೊಗಳಿ ಬರೆಯಲಿ ಅಂತಿಮ ನಿರ್ಣಯ ಮಾತ್ರ ತನ್ನದೇ ಎಂದು ಪ್ರೇಕ್ಷಕ ಮಹಾಶಯ ಮತ್ತೊಮ್ಮೆ ಸಾಬೀತು ಪಡಿಸಿದ್ದಾನೆ. ಎಲ್ಲಾ ಮಾಧ್ಯಮಗಳಿಂದ ಅತ್ಯುತ್ತಮ ಚಿತ್ರವೆಂಬ ವಿಮರ್ಶೆಗೆ ಪಾತ್ರವಾದ ಚಿತ್ರಕ್ಕೆ ಸಿಕ್ಕಿದ್ದು ಮೂರು ವಾರದ ಮನ್ನಣೆ ಮಾತ್ರ! ನಾಗತಿಹಳ್ಳಿ ಚಂದ್ರ ಶೇಖರ್ ನಿರ್ದೇಶನದ ಒಲವೇ ಜೀವನ ಲೆಕ್ಕಾಚಾರ ಸಾಗರ್ ಚಿತ್ರಮಂದಿರದಿಂದ ಮೂರೇ ವಾರಕ್ಕೆ ಕಾಲ್ತೆಗೆಯುತ್ತಿದ್ದು ಆ ಜಾಗಕ್ಕೆ ಹಿಂದಿ ಚಿತ್ರ ಬರುತ್ತಿದೆ!

  • ಒಲವೇ ಜೀವನ ಲೆಕ್ಕಾಚಾರ (ಸಾಗರ್ನಿಂದ. ಒಟ್ಟು ಪ್ರದರ್ಶನ 3 ವಾರಗಳು)
  • ಬಂದೇ ಬರ್ತಾಳೆ (ಅಪರ್ಣಾ ಚಿತ್ರಮಂದಿರದಿಂದ. ಒಟ್ಟು ಪ್ರದರ್ಶನ 1 ವಾರ )
ಮುಂದುವರಿದ ಪ್ರದರ್ಶನ:
ನೇರ ಪ್ರದರ್ಶನ:
ನೇರ ಪ್ರದರ್ಶನ ಅಂದರೆ  ಬಿಡುಗಡೆಯ ದಿನಾಂಕದಿಂದಲೂ ಇಲ್ಲಿಯವರೆಗಗೂ ಬೇರೆ
ಚಿತ್ರಮಂದಿರಗಳಿಗೆ ಸ್ಥಳಾಂತರಗೊಳ್ಳದೇ  ಬಿಡುಗಡೆಯಾದ ಚಿತ್ರಮಂದಿರದಲ್ಲೇ ಸತತವಾಗಿ
ಪ್ರದರ್ಶನಗೊಳ್ಳುತ್ತಿರುವ ಚಿತ್ರ.
2 ನೇ ವಾರಕ್ಕೆ -ತ್ರಿವೇಣಿ
3 ನೇ ವಾರಕ್ಕೆ -ಭೂಮಿಕಾ
7 ನೇ ವಾರಕ್ಕೆ - ಸಂತೋಷ್
13 ನೇ ವಾರಕ್ಕೆ - ತ್ರಿಭುವನ್
ಸಂಯೋಜಿತ ಪ್ರದರ್ಶನ:
ಸಂಯೋಜಿತ ಪ್ರದರ್ಶನ ಅಂದರೆ  ಬಿಡುಗಡೆಯಾದ ಚಿತ್ರಮಂದಿರದಿಂದ ಕಾರಣಾಂತರವಾಗಿ
ಗಾಂಧೀನಗರದ ಇನ್ನೊಂದು ಚಿತ್ರಮಂದಿರಕ್ಕೆ ಸ್ಥಳಾಂತರವಾಗಿ ಪ್ರದರ್ಶಿಸಲ್ಪಡುತ್ತಿರುವ
ಚಿತ್ರ. ಬಿಡುಗಡೆಯಾಗಿ ಕೆಲವು ವಾರಗಳ ನಂತರ ಹಲವಾರು ಕಾರಣಗಳಿಗೆ ಚಿತ್ರಗಳು ಬೇರೆಡೆಗೆ
ಎತ್ತಂಗಡಿಯಾಗುವುದು ಗಾಂಧೀನಗರದ ಮಟ್ಟಿಗೆ ಸಾಮಾನ್ಯ! ಹಾಗಾಗಿ ಅಂತಹ ಚಿತ್ರಗಳ
ವಿವರವನ್ನು ಈ ವಿಭಾಗದಲ್ಲಿ ಕೊಡಲಾಗುತ್ತದೆ.
5 ನೇ ವಾರಕ್ಕೆ - ಮೇನಕಾ (ನರ್ತಕಿ – 2 ವಾರಗಳು. ಮೇನಕಾದಲ್ಲಿ 3 ನೇ ವಾರ)
13 ನೇ ವಾರಕ್ಕೆ - ಸಪ್ನಾ (ತ್ರಿವೇಣಿ – 7 ವಾರಗಳು. ಸಪ್ನಾದಲ್ಲಿ 6 ನೇ ವಾರ)
4 ನೇ ವಾರಕ್ಕೆ - ಕೈಲಾಶ್ (ಸಾಗರ್ – 3 ವಾರಗಳು. ಕೈಲಾಶ್ 1 ನೇ ವಾರ)
ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ ಯಾವುದು ಗೊತ್ತೇನ್ರೀ?
ಸವಾರಿ -13 ನೇ ವಾರದಲ್ಲಿ (ನೇರ ಪ್ರದರ್ಶನ – ತ್ರಿಭುವನ್ )

ಜೋಶ್ – 13 ನೇ ವಾರದಲ್ಲಿ (ಸಂಯೋಜಿತ ಪ್ರದರ್ಶನತ್ರಿವೇಣಿ(7) + ಸಪ್ನಾ(4) )

ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳು:

PVR Cinemas, Bengaluru

ಸವಾರಿ (2 Shows) – 13ನೇ ವಾರ

ಜೋಶ್ (1 show) – 13ನೇ ವಾರ

ಒಲವೇ ಜೀವನ ಲೆಕ್ಕಾಚಾರ (2 shows) – 4 ನೇ ವಾರ

ಕಬಡ್ಡಿ  (3 shows) – ಈ ವಾರ ಬಿಡುಗಡೆ

ಚಮ್ಕಾಯ್ಸಿ ಚಿಂದಿ ಉಡಾಯ್ಸಿ  (3 shows) – ಈ ವಾರ ಬಿಡುಗಡೆ

ggg
  • ಕೆಂಚ
  • ನಾಗವಲ್ಲಿ
  • ಹೌಸ್ ಫುಲ್

akumar.reach@gmail.com

Readers Comments (0)

Comments are closed.

Author Info

Author: Akumar

Akumar is a software engineer from Bangalore and an avid movie watcher and reviewer.