ಕಳೆದ ಎರಡು ವಾರಗಳಿಂದ ಜೂನ್ 5ರಿಂದ ಅಮೋಘ ಪ್ರಾರಂಭ ಎಂದು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಜಾಹೀರಾತು ಕೊಟ್ಟು, ಎಲ್ಲಾ ಕಡೆ ಪೋಸ್ಟರ್ ಅಂಟಿಸಿ ಇನ್ನೇನು ಇವತ್ತು ಬೆಳಗಿನ ಆಟಕ್ಕೆ ಜನ "ತ್ರಿವೇಣಿ" ಕಡೆ ಹೊರಡಲು ತಯಾರಾಗಬೇಕು ಅನ್ನುವಷ್ಟರಲ್ಲಿ ಧಿಡೀರಾಗಿ ಜೊತೆಗಾರ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿರುವ ಆಘಾತಕಾರಿ ವಿಷಯವೊಂದು ತಿಳಿದುಬಂದಿದೆ. ಕಾರಣ ತಿಳಿದಿಲ್ಲ. ಕಳೆದ ಕೆಲವು ದಿನಗಳಿಂದ ನಟ ಪ್ರೇಂ, ಮಟಿ ರಮ್ಯಾ ಒಬ್ಬರಾದ ಮೇಲೆ ಒಬ್ಬರಂತೆ ಜೊತೆಗಾರ ಚಿತ್ರಕ್ಕೆ ಸಂಬಂಧಿಸಿದಂತೆ ಕಿರಿಕ್ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು!
ಮಲ್ಟಿಪ್ಲೆಕ್ಸ್‍ಗಳಲ್ಲಂತೂ ಸಧ್ಯಕ್ಕೆ ಹೊಸ ಚಿತ್ರ ಬರುತ್ತಿಲ್ಲ, ಕೆ.ಜಿ.ರಸ್ತೆಯಲಾದರೂ ನೋಡೋಣ ಅಂದುಕೊಂಡಿದ್ದ ಚಿತ್ರ ರಸಿಕರಿಗೆ ನಿರಸೆ ಗ್ಯಾರಂಟಿ.

Comments are closed.