ಧಂ ಇಲ್ಲದ ಹೊಡಿಮಗ ಹಾಡುಗಳು!

Published on May 2, 2009 by admin   ·   No Comments
ಇತ್ತೀಚಿನ ದಿನಗಳಲ್ಲಿ ಯಾಕೋ ಏನೋ ಶಿವರಾಜ್ ಕುಮಾರ್ ಚಿತ್ರಗಳೆಂದರೆ ಪ್ರೇಕ್ಷಕರಿಗೆ ಮಾತ್ರ ಅಲ್ಲ.. ಸಂಗೀತ ನಿರ್ದೇಶಕರಿಗೂ ಸ್ವಲ್ಪ ಅಸಡ್ಡೆ ಶುರುವಾಗಿರುವ ಹಾಗಿದೆ. ಬಾಕಿ ಚಿತ್ರಗಳಿಗೆ ಅದ್ಭುತವಾಗಿ ಸಂಗೀತ ಒದಗಿಸುವ ಈ ಸಂಗೀತ ನಿರ್ದೇಶಕರು ಶಿವಣ್ಣ ಅಭಿನಯದ ಚಿತ್ರಗಳಿಗೆ ಮಾತ್ರ ತೀರಾ ಸಾಧಾರಣ ಮಟ್ಟದ ಹಾಡುಗಳನ್ನು ಕೊಡಲೂ ವಿಫಲರಾಗುತ್ತಿದ್ದಾರೆ. ಸಧ್ಯಕ್ಕೆ ಕನ್ನಡದ ಸ್ಟಾರ್ ಸಂಗೀತ ನಿರ್ದೇಶಕರೆಂದೇ ಕರೆಸಿಕೊಳ್ಳುತ್ತಿರುವ ಹರಿಕೃಷ್ಣ ಸಂಗೀತ ನೀಡಿರುವ ಹೆಚ್ಚು ಕಡಿಮೆ ಎಲ್ಲಾ ಚಿತ್ರಗಳ ಹಾಡುಗಳೂ ಸೂಪರ್ ಹಿಟ್ – ಪರಮೇಶಿ ಪಾನವಾಲವೊಂದನ್ನು ಬಿಟ್ಟು! ಮನೋಮೂರ್ತಿ ಸಂಗೀತ ನೀಡಿದ್ದರೂ ಮಾದೇಶಹಾಡುಗಳು ಅಷ್ಟೇನೂ ಜನಪ್ರಿಯವಾಗಲೇ ಇಲ್ಲ. ಇದು ಕಾಕತಾಳೀಯವೋ , ಅಥವ ಯಾರ ತಪ್ಪೋ ದೇವರೇ ಬಲ್ಲ. ಒಟ್ಟಿನಲ್ಲಿ ಘಟಾನುಘಟಿ ಸಂಗೀತ ನಿರ್ದೇಶಕರಿದ್ದರೂ ಹಾಡುಗಳು ಮಾತ್ರ ಪೇಲವ! ಈ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ "ಹುಡುಗಾಟ" ಚಿತ್ರಕ್ಕೆ ಸೂಪರ್ ಹಿಟ್ ಸಂಗೀತ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಸಂಗೀತ ನೀಡಿರುವ ಹೊಡಿ ಮಗ!
"ಹುಡುಗಾಟ" ಚಿತ್ರ ಹೇಗೇ ಇದ್ದರೂ ಅದರ ಹಾಡುಗಳು ಮಾತ್ರ ಸೂಪರ್ ಆಗಿದ್ದವು. ಅದೇ ಗುಂಗಿನಲ್ಲೇನಾದರೂ "ಹೊಡಿಮಗ" ಹಾಡುಗಳನ್ನು ಕೇಳಲು ಕೂತೀರಿ ಜೋಕೆ!…  ಯಾಕೆಂದರೆ ಇಲ್ಲಿ ಹುಡುಗಾಟದ ಪಂಚ್ ಇಲ್ಲವೇ ಇಲ್ಲ. ಒಟ್ಟು ಹಾಡುಗಳು – 5. ಯಾವ ಹಾಡೂ ಮನಸ್ಸಿಗೆ ಹತ್ತಿರವಾಗುವುದಿಲ್ಲ. ಎಲ್ಲಾ ಹೀಗೆ ಕೇಳಿ ಹಾಗೆ ಬಿಡಬಹುದಾದ ಹಾಡುಗಳು.

1. ಏನೋ ಹೇಳುತಿದೆ… (ಕುನಾಲ್ ಗಂಜಾವಾಲ, ಲಕ್ಷ್ಮಿ): ಇದ್ದುದರಲಿ ಪರವಾಗಿಲ್ಲ. 7/10

2. ಬೆಳ್ಳಿಯ ತೆರೆಯಲ್ಲಿ (ಮಧು ಬಾಲಕೃಷ್ಣ, ರಾಜ ಲಕ್ಷ್ಮಿ, ಕುಶಾಲ್) – ಮಧು ಬಾಲಕೃಷ್ಣ ಕಂಠ ಚೆನ್ನಾಗಿದೆ.ಆದರೆ ಹಾಡಿನಲ್ಲಿ ವಿಶೇಷವೇನೂ ಇಲ್ಲ. ಅಣ್ಣ-ತಂಗಿ ಬಾಂಧವ್ಯದಮತ್ತೊಂದು ಹಾಡು. 6/10

3. ಈ ಬ್ಯೂಟಿ ಭೂಮಿಲಿ (ಮಾತಂಗಿ) – ಇಂಗ್ಲೀಷ್ ಪದಗಳ ಮಧ್ಯೆ ಒಟ್ಟು ಕನ್ನಡ ಪದಗಳಿವೆ ಎಂದು ಸರಿಗಾಗಿ ಎಣಿಸಿ HODIMAGA ಅಂತ ಟೈಪ್ ಮಾಡಿ ಎಸ್.ಎಂ.ಎಸ್. ಕಳಿಸಿ.  ಫ್ರೀ ಟಿಕೆಟ್ ಕೊಟ್ರೂ ಕೊದಬಹುದು… 3/10

4. ಬಿಸಿ ಬಿಸಿ ಹುಡುಗಿ (ಅನುರಾಧಾ ಶ್ರೀರಾಂ) – ಐಟಂ ನಂಬರ್ ಕಣಣ್ಣೋ…ಆದರೆ ಕೇಳೊಖೆ ಮಾತರ್ ಕಷ್ಟ ಕಣಣ್ಣೋ… 3/10

5. ದುನಿಯಾ ನಿಂದೇ ನೀ ಹೊಡಿಮಗ.. (ಚೇತನ್, ಜೆಸ್ಸಿ ಗಿಫ್ಟ್) – ಹೊಡಿಯೋದಕ್ಕೆ ಪ್ರೇರೇಪಿಸುವ ಟೈಟಲ್ ಸಾಂಗ್! ಮಧ್ಯೆ ಮಧ್ಯೆ ಭಗವದ್ಗೀತೆಯ ಶ್ಲೋಕಗಳನ್ನು ಬೇರೆ ಬಳಸಿದ್ದಾರೆ! 5/10

ಕಾಕತಾಳೀಯವೆಂಬಂತೆ ಶಿವರಾಜ್ ಕುಮಾರ್ ಅಭಿನಯದ ಚಿತ್ರಗಳಿಗೇ ಯಾಕೆ ಈ ಥರ ಆಗುತ್ತೋ ಗೊತ್ತಿಲ್ಲ… ಅಪ್ರಬುದ್ಧ ಸಂಗೀತ ನಿರ್ದೇಶಕರು ಎನ್ನುವ ಹಾಗಿಲ್ಲ.. ಯಾಕೆಂದರೆ ಇವರು ಹಿಂದೆ ಸೂಪರ್ ಡೂಪರ್ ಹಾಡುಗಳನ್ನು ಕೊಟ್ಟವರು.. ಮಾಸ್, ಆಕ್ಷನ್ ಸಿನಿಮಾ ಹಾಗಾಗಿ  ಈ ಥರದ ಹಾಡುಗಳು ಎನ್ನುವ ಹಾಗೂ ಇಲ್ಲ ಯಾಕೆಂದರೆ ಇದರ ಎರಡರಷ್ಟು ಮಾಸ್ ಚಿತ್ರಗಳಾದ ದುನಿಯಾ, ಜೋಗಿ ಹಾಡುಗಳು ಅತ್ಯದ್ಭುತವಾಗಿದ್ದವು!ಆದರೆ ಇಲ್ಲಿ ಮಾತ್ರ ಏನೂ ಅವೆಲ್ಲಾ ಮಾಯ!


ಹಾಡುಗಳಲ್ಲಿ ಧಂ ಇಲ್ಲ! ಸಾಹಿತ್ಯದಲ್ಲಿ ಸತ್ವವಿಲ್ಲ..  ಒಟ್ಟಿನಲ್ಲಿ ಏನೇನೂ ವಿಶೇಷವಿಲ್ಲದ ನಿರಾಶಾದಾಯಕ ಅಲ್ಬಂ.  
Readers Comments (0)

Comments are closed.

Author Info