ಬ್ಲ್ಯಾಕ್ ಯೋಧನ ಚೈತನ್ಯ ಅಷ್ಟಿಷ್ಟಲ್ಲ !

Published on June 16, 2009 by Akumar   ·   No Comments

ಜೂನ್ 19ರಿಂದ 25ರವರೆಗೆ

ಸ್ಟೇಟ್ಸ್ ಚಿತ್ರಮಂದಿರ ಈಗ ಭೂಮಿಕಾ!
ಕೆಂಪೇಗೌಡ ರಸ್ತೆಯ ಸ್ಟೇಟ್ಸ್ ಚಿತ್ರ ಮಂದಿರ ಭೂಮಿಕಾ ಎಂಬ ಹೆಸರಿನಲ್ಲಿ ನವೀಕರಣಗೊಂಡು ಈವಾರ ಚಿತ್ರ ಪ್ರದರ್ನವನ್ನು ಆರಭಿಸಲಿದೆ.  ಡಾ.ರಾಜ್ ಅಭಿನಯದ ಬಂಗಾರದ ಮನುಷ್ಯ, ಮಾಲಾಶ್ರೀ ಅಭಿನಯದ ನಂಜುಂಡಿ ಕಲ್ಯಾಣ ಇದೇ ಚಿತ್ರಮಂದಿರದಲ್ಲಿ ದಾಖಲೆಯ ಪ್ರದರ್ಶನ ಕಂಡಿತ್ತು. ಇತ್ತೀಚಿನ ದಿನಗಳಲ್ಲಿ ವಯಸ್ಕರ ಚಿತ್ರಗಳ ಪ್ರದರ್ಶನಕ್ಕಷ್ಟೇ ಮೀಸಲಾಗಿದ್ದ ಸ್ಟೇಟ್ಸ್ ಈಗ ಅತ್ಯಾುನಿಕ ತಂತ್ರಜ್ಞಾನ ಮತ್ತು ಸವಲತ್ತುಗಳೊಂದಿಗೆ ಯಾವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಕ್ಕೂ ಕಮ್ಮಿ ಇರದಂತೆ ಪುನರುಜ್ಜೀವನಗೊಂಡಿದೆ. ಚಿತ್ರಮಂದಿರದ ಮಾಲೀಕ ತಲ್ಲಂ ನಂಜುಂಡ ಶೆಟ್ಟರು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲೂಮಿಕಾವನ್ನು ನಿರ್ಮಿಸಿದ್ದಾರೆ.
ಈ ವಾರ ದರ್ಶನ್ ಅಭಿನಯದ ಯೋಧ ಭೂಮಿಕಾದಲ್ಲಿ ತೆರೆಕಾಣಲಿದೆ!
ಯೋಧ, ಬ್ಲ್ಯಾಕ್, ಚೈತನ್ಯ ತೆರೆಗೆ
ಈ ವಾರ ಮೂರು ಚಿತ್ರಗಳು ತೆರೆ ಕಾಣುತ್ತಿವೆ. ಹೊಸದಾಗಿ ನವೀಕರಣಗೊಂಡಿರುವ ಭೂಮಿಕಾ (ಸ್ಟೇಟ್ಸ್)ನಲ್ಲಿ ದರ್ಶನ್ ಅಭಿನಯದ ಯೋಧ ತೆರೆಕಾಣುತ್ತಿದ್ದರೆ ತ್ರಿವೇಣಿಯಲ್ಲಿ ಕಿಶೋರ್ ಅಭಿನಯದ ಬ್ಲ್ಯಾಕ್ ಚಿತ್ರ ತೆರೆಕಾಣುತ್ತಿದೆ. ಶಿವಧ್ವಜ್  ನಟನೆಯ ಮಕ್ಕಳ ಚಿತ್ರ ಚೈತನ್ಯ PVR ಚಿತ್ರಮಂದಿರದಲ್ಲಿ ತೆರೆಕಾಣುತ್ತಿದೆ.

ಯೋಧ

 

ದರ್ಶನ್, ನಿಖಿತ      

ಮುಖ್ಯ ಚಿತ್ರಮಂದಿರ:ಭೂಮಿಕಾ (ಸ್ಟೇಟ್ಸ್).                   

ಸಂಗೀತ: ಹಂಸಲೇಖ

ನಿರ್ದೇಶನ: ಓಮ್ ಪ್ರಕಾಶ್ ರಾವ್

ನಿರ್ಮಾಣ: ರಾಕ್ ಲೈನ್  ವೆಂಕಟೇಶ್

 

ಬ್ಲ್ಯಾಕ್

 

ಸುನಿಲ್, ಮಾನಸಿ, ಸುರೇಶ್, ಕಿಶೋರ್, ಜಯಶ್ರೀ ರಾಜ್          

ಮುಖ್ಯ ಚಿತ್ರಮಂದಿರ: ತ್ರಿವೇಣಿ.

ಸಂಗೀತ: CR ಬಾಬಿ

ನಿರ್ದೇಶನ: ಮಹೇಂದ್ರ

ನಿರ್ಮಾಣ: ಶೋಭಾ ಮಹೇಂದ್ರ

 

ಚೈತನ್ಯ

 

ಶಿವಧ್ವಜ್, ರೂಪಾ ಅಯ್ಯರ್, ಶಿವರಾಂ, ಕಿಶೋರಿ ಬಲ್ಲಾಳ್        

ಮುಖ್ಯ ಚಿತ್ರಮಂದಿರ: PVR.

ಸಂಗೀತ: ಗೋಪಿ ಕೃಷ್ಣ

ನಿರ್ದೇಶನ: DK ಶಿವರಾಂ

ನಿರ್ಮಾಣ: ಶಿವರಾಂ ಕ್ರಿಸ್ತ

2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 64!

 

::ಹೊರನಡೆಯುತ್ತಿರುವ ಚಿತ್ರಗಳು::

  • ಆಟೋ (ಮೇನಕಾ ಚಿತ್ರಮಂದಿರದಿಂದ. ಒಟ್ಟು ಪ್ರದರ್ಶನ 8 ವಾರಗಳು )
ಮುಂದುವರಿದ ಪ್ರದರ್ಶನ:
ನೇರ ಪ್ರದರ್ಶನ:
ನೇರ ಪ್ರದರ್ಶನ ಅಂದರೆ  ಬಿಡುಗಡೆಯ ದಿನಾಂಕದಿಂದಲೂ ಇಲ್ಲಿಯವರೆಗಗೂ ಬೇರೆ ಚಿತ್ರಮಂದಿರಗಳಿಗೆ ಸ್ಥಳಾಂತರಗೊಳ್ಳದೇ  ಬಿಡುಗಡೆಯಾದ ಚಿತ್ರಮಂದಿರದಲ್ಲೇ ಸತತವಾಗಿ ಪ್ರದರ್ಶನಗೊಳ್ಳುತ್ತಿರುವ ಚಿತ್ರ.
  2 ನೇ ವಾರಕ್ಕೆ - ಸಾಗರ್
  2 ನೇ ವಾರಕ್ಕೆ - ನರ್ತಕಿ
  3 ನೇ ವಾರಕ್ಕೆ - ಅಪರ್ಣ
 

5 ನೇ ವಾರಕ್ಕೆ - ಕಪಾಲಿ
  5 ನೇ ವಾರಕ್ಕೆ - ಸಂತೋಷ್
  11 ನೇ ವಾರಕ್ಕೆ - ತ್ರಿಭುವನ್
ಸಂಯೋಜಿತ ಪ್ರದರ್ಶನ:
ಸಂಯೋಜಿತ ಪ್ರದರ್ಶನ ಅಂದರೆ  ಬಿಡುಗಡೆಯಾದ ಚಿತ್ರಮಂದಿರದಿಂದ ಕಾರಣಾಂತರವಾಗಿ ಗಾಂಧೀನಗರದ ಇನ್ನೊಂದು ಚಿತ್ರಮಂದಿರಕ್ಕೆ ಸ್ಥಳಾಂತರವಾಗಿ ಪ್ರದರ್ಶಿಸಲ್ಪಡುತ್ತಿರುವ ಚಿತ್ರ. ಬಿಡುಗಡೆಯಾಗಿ ಕೆಲವು ವಾರಗಳ ನಂತರ ಹಲವಾರು ಕಾರಣಗಳಿಗೆ ಚಿತ್ರಗಳು ಬೇರೆಡೆಗೆ ಎತ್ತಂಗಡಿಯಾಗುವುದು ಗಾಂಧೀನಗರದ ಮಟ್ಟಿಗೆ ಸಾಮಾನ್ಯ! ಹಾಗಾಗಿ ಅಂತಹ ಚಿತ್ರಗಳ ವಿವರವನ್ನು ಈ ವಿಭಾಗದಲ್ಲಿ ಕೊಡಲಾಗುತ್ತದೆ. 
ಕಲಾಕಾರ್ ಮತ್ತೆ ತೆರೆಗೆ..
ಹರೀಶ್ ರಾಜ್ ನಟನೆ, ನಿರ್ಮಾಣ ಮತ್ತು ನಿರ್ದೇನದ ಕಲಾಕಾರ್ ಚಿತ್ರ ಉತ್ತಮ ವಿಮರ್ಶೆಗಳ ನಡುವೆಯೂ ನರ್ತಕಿ ಚಿತ್ರಮಂದಿರವನ್ನು ಕಾರಂಜಿಗೆ ಬಿಟ್ಟು ಕೊಡಬೇಕಾಯಿತು. ಈಗ ಮೇನಕಾ ಚಿತ್ರಮಂದಿರದಲ್ಲಿ ಚಿತ್ರ ಮರು ಬಿಡುಗಡೆಯಾಗುತ್ತಿದೆ!
  3 ನೇ ವಾರಕ್ಕೆ- ಮೇನಕಾ (ನರ್ತಕಿ – 2 ವಾರಗಳು. ಮೇನಕಾದಲ್ಲಿ ಮೊದಲನೇ ವಾರ)
  11 ನೇ ವಾರಕ್ಕೆ – ಸಪ್ನಾ (ತ್ರಿವೇಣಿ – 7 ವಾರಗಳು. ಸಪ್ನಾದಲ್ಲಿ 4 ನೇ ವಾರ)
ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ ಯಾವುದು ಗೊತ್ತೇನ್ರೀ?

ಸವಾರಿ -11 ನೇ ವಾರದಲ್ಲಿ (ನೇರ ಪ್ರದರ್ಶನ – ತ್ರಿಭುವನ್ )

ಜೋಶ್ – 11 ನೇ ವಾರದಲ್ಲಿ (ಸಂಯೋಜಿತ ಪ್ರದರ್ಶನ – ತ್ರಿವೇಣಿ(7) + ಸಪ್ನಾ(4) )

ggg

  • ದೀನ
  • ಲವ್ ಗುರು
  • ಭಾಗ್ಯದ ಬಳೆಗಾರ
  • ಎದ್ದೇಳು ಮಂಜುನಾಥ
  • ರಾಜ್… ದಿ ಶೋ ಮ್ಯಾನ್!

akumar.reach@gmail.com

Readers Comments (0)

Comments are closed.

Author Info

Author: Akumar

Akumar is a software engineer from Bangalore and an avid movie watcher and reviewer.