ಆಟೋ 50! ಕಾರಂಜಿಯಲ್ಲಿ ಜೀವನದ ಲೆಕ್ಕಾಚಾರ…

Published on June 9, 2009 by Akumar   ·   No Comments

ಜೂನ್ 12ರಿಂದ 18ರವರೆಗೆ

ಎರಡು ಬಹು ನಿರೀಕ್ಷಿತ ಚಿತ್ರಗಳು ನಿಮ್ಮ ಮುಂದೆ!
ಈ ವಾರ ಸದಭಿರುಚಿಯ ಚಿತ್ರ ರಸಿಕರಿಗೆ ಹಬ್ಬ! ಎರಡು ಬಹು ನಿರೀಕ್ಷಿತ ಚಿತ್ರಗಳು ನಿಮ್ಮ ಮುಂದೆ ಬರಲಿವೆ. ತನ್ನ ವಿಶಿಷ್ಟವಾದ ಸಂಗೀತದಿಂದ ಈಗಾಗಲೇ ಜನಪ್ರಿಯವಾಗಿರುವ ಕಾರಂಜಿ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಒಲವೇ ಜೀವನ ಲೆಕ್ಕಾಚಾರ ಈ ವಾರ ತೆರೆಕಾಣುತ್ತಿವೆ. ಕಾರಂಜಿಯಲ್ಲಿ ವಿಜಯ ರಾಘವೇಂದ್ರ – ಗೌರಿ ಕಾರಣಿಕ್ ನಟಿಸಿದ್ದಾರೆ. ಜನಪದ ಮತ್ತು ಭಾವಗೀತೆಗಳ ಜೊತೆಗೆ ರಾಕ್ ಶೈಲಿಯ ಹಾಡುಗಳನ್ನೂ ಬಳಸಿರುವುದು ಕನ್ನಡದ ಮಟ್ಟಿಗಂತೂ ಅತ್ಯುತ್ತಮ ಪ್ರಯೋಗವೇ ಸರಿ. ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರ ಈ ಅದ್ಭುತ ಪ್ರಯತ್ನಕ್ಕೆ ಈಗಾಗಲೇ ಉತ್ತಮ ಶ್ಲಾಘನೆ ವ್ಯಕ್ತವಾಗಿದ್ದು ಚಿತ್ರ ಬಿಡುಗಡೆಗೆ  ಪ್ರೇಕ್ಷಕರು ಕಾದಿದ್ದಾರೆ. ಇದು ಚಿತ್ರಕ್ಕೆ ಎಷ್ಟರ ಮಟ್ಟಿಗೆ ಅನುಕೂಲವಾಗಲಿದೆಯೋ ಕಾದು ನೋಡಬೇಕಿದೆ.
 
ನಾಗತಿಹಳ್ಳಿ ಚಂದ್ರಶೇಖರ್-ಬಹುಷಃ ಫ್ಯಾಮಿಲಿ ಪ್ರೇಕಷಕರನ್ನು ಚಿತ್ರಮಂದಿರಕ್ಕೆ ಎಳೆತರಲು ಈ ಹೆಸರೊಂದೇ ಸಾಕು! ಅದರಲ್ಲೂ PVRನಂತಹ ಮಲ್ಟಿಪ್ಲೆಕ್ಸ್‍ಗಳಲ್ಲಿ ನಾಗತಿಹಳ್ಳಿಯವರ ಚಿತ್ರಗಳಿಗೆ ಒಳ್ಳೆಯ ಬೇಡಿಕೆ ಇದೆ. ಹಾಗಾಗಿಯೋ ಏನೋ ಮಲ್ಟಿಪ್ಲಕ್ಸ್ -ಚಿತ್ರ ನಿರ್ಮಾಪಕರ ನಡುವಿನ ಗುದ್ದಾಟದ ನಡುವೆಯೂ ಒಲವೇ ಜೀವನ ಲೆಕ್ಕಾಚಾರ ಚಿತ್ರ ಈ ವಾರ PVR ಮತ್ತು ವಿಷನ್ ಸಿನೆಮಾಸ್ ಮಲ್ಟಿಪ್ಲೆಕ್ಸ್ ‍ಗಳಲ್ಲೂ ತೆರೆಕಾಣುತ್ತಿದೆ. ಈಗಾಗಲೇ ಸವಾರಿ ಚಿತ್ರದ ಭರ್ಜರಿ ಗೆಲುವಿನಿಂದ  ನಗೆ ಬೀಗುತ್ತಿರುವ  ಶ್ರೀನಗರ ಕಿಟ್ಟಿ ಜೊತೆ ಮೊಗ್ಗಿನ ಮನಸು ಚಿತ್ರದ ಯಶಸ್ವೀ ನಾಯಕಿ ರಾಧಿಕಾ ಪಂಡಿತ್ ಮೊದಲ ಬಾರಿಗೆ ನಟಿಸಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತವನ್ನೊದಗಿಸಿದ್ದಾರೆ. ಡೈಸಿ ಬೋಪಣ್ಣ, ರಂಗಾಯಣ ರಘು ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ತೊಂಭತ್ತರ ದಶಕದಲ್ಲಿ ನಡೆದ ಸತ್ಯ ಘಟನೆಯನ್ನಾಧರಿಸಿದೆ.

ಒಲವೇ ಜೀವನ ಲೆಕ್ಕಾಚಾರ

ಶ್ರೀನಗರ ಕಿಟ್ಟಿ, ರಾಧಿಕಾ ಪಂಡಿತ್, ಡೈಸಿ ಬೋಪಣ್ಣ, ರಂಗಾಯಣ ರಘು            

ಮುಖ್ಯ ಚಿತ್ರಮಂದಿರ: ಸಾಗರ್.

ಸಂಗೀತ: ಮನೋಮೂರ್ತಿ

ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್

ನಿರ್ಮಾಣ: ಕೆ. ಮಂಜು

 

ಕಾರಂಜಿ

ವಿಜಯ್ ರಾಘವೇಂದ್ರ, ಗೌರಿ ಕಾರ್ಣಿಕ್, ನಂಜುಂಡ            

ಮುಖ್ಯ ಚಿತ್ರಮಂದಿರ: ನರ್ತಕಿ.

ಸಂಗೀತ: ವೀರ್ ಸಮರ್ಥ್

ನಿರ್ದೇಶನ: ಶ್ರೀಧರ್

ನಿರ್ಮಾಣ:ಎನ್.ಎಂ.ಸುರೇಶ್

 

ಗಂಧದಗುಡಿಯ ಕಡೆಯಿಂದ  ಈ ಎಲ್ಲಾ ಚಿತ್ರಗಳಿಗೂ ಶುಭ ಹಾರೈಸೋಣ.

2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 61!

 

::ಹೊರನಡೆಯುತ್ತಿರುವ ಚಿತ್ರಗಳು::

ಅಂಬಾರಿಗೆ ಭಾವಪೂರ್ಣ ವಿದಾಯ !

2009ರ ಮೊಟ್ಟ ಮೊದಲ ಸೂಪರ್ ಹಿಟ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ "ಅಂಬಾರಿ" ಚಿತ್ರ ತನ್ನ 19ವಾರಗಳ ಸುಧೀರ್ಘ ಪ್ರಯಾಣವನ್ನು ಈ ವಾರ ಮುಗಿಸುತ್ತಿದ್ದು ಸಾಗರ್ ಚಿತ್ರಮಂದಿರದಲ್ಲಿ ಈ ವಾರ ಒಲವೇ ಜೀವನ ಲೆಕ್ಕಾಚಾರ ಬಿಡುಗಡೆಯಗುತ್ತಿದೆ. ಇದರೊಂದಿಗೆ  ಅನೇಕ ವಾರಗಳಿಂದ ಕೆ.ಜಿ.ರಸ್ತೆಯ ಅತ್ಯಂತ ಹಳೆಯ ಚಿತ್ರ ಎಂಬ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದ್ದ ಅಂಬಾರಿ ಈ ವಾರಆ ಪಟ್ಟವನ್ನು ಸವಾರಿ ಚಿತ್ರಕ್ಕೆ ಬಿಟ್ಟುಕೊಡುತ್ತಿದೆ!

  • ಅಂಬಾರಿ (ಸಾಗರ್ ಚಿತ್ರಮಂದಿರದಿಂದ. ಒಟ್ಟು ಪ್ರದರ್ಶನ 19 ವಾರಗಳು )
  • ಕಲಾಕಾರ್ (ನರ್ತಕಿiಯಿಂದ. ಒಟ್ಟು ಪ್ರದರ್ಶನ 2 ವಾರಗಳು).
ಮುಂದುವರಿದ ಪ್ರದರ್ಶನ:
ಆಟೋ – ಭರ್ಜರಿ 50ನೇ ದಿನ !
2009ರ ಅಚ್ಚರಿಯ ಗೆಲುವು!… ಆಟೋ  ಚಿತ್ರ ಮೇನಕಾ ಚಿತ್ರಮಂದಿರದಲ್ಲಿ ಯಶಸ್ವೀ  50ದಿನಗಳನ್ನು ಪೂರಸುತ್ತಿದೆ!ಆಟೋ ಚಿತ್ರ ತಂಡಕ್ಕೆ ನಮ್ಮ ಅಭಿನಂದನೆಗಳು!
   2 ನೇ ವಾರಕ್ಕೆ - ಅಪರ್ಣ
 

4 ನೇ ವಾರಕ್ಕೆ - ಕಪಾಲಿ
  4 ನೇ ವಾರಕ್ಕೆ - ಸಂತೋಷ್
  8 ನೇ ವಾರಕ್ಕೆ – ಮೇನಕಾ
  10 ನೇ ವಾರಕ್ಕೆ - ತ್ರಿಭುವನ್

ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ ಯಾವುದು ಗೊತ್ತೇನ್ರೀ?
ಸವಾರಿ -10ನೇ ವಾರದಲ್ಲಿ

ggg

  • ದೀನ
  • ಎದ್ದೇಳು ಮಂಜುನಾಥ
  • ರಾಜ್… ದಿ ಶೋ ಮ್ಯಾನ್!

akumar.reach@gmail.com

Readers Comments (0)

Comments are closed.

Author Info

Author: Akumar

Akumar is a software engineer from Bangalore and an avid movie watcher and reviewer.