ಬಳೆಗಾರನ ಪ್ರೇಮ್ ಕಹಾನಿ

Published on September 11, 2009 by Akumar   ·   No Comments

ಗಾಂಧೀನಗರ ಈ ವಾರ

ಸೆಪ್ಟೆಂಬರ್ 11ರಿಂದ 17ರವರೆಗೆ


ಈ ವಾರ ಮುಖಾಮುಖಿ – ಬಳೆಗಾರ vs ಪ್ರೇಂ ಕಹಾನಿ!

ಕನ್ನಡ ಚಿತ್ರದ ಪೈಪೋಟಿ ಏನಿದ್ದರೂ ಮತ್ತೊಂದು ಕನ್ನಡ ಚಿತ್ರದ ಮೇಲೆಯೇ ಎಂಬುದು ಮಗದೊಮ್ಮೆ ಸಾಬೀತಾಗುತ್ತಿದೆ.  ತೆಲುಗು ತಮಿಳಿನ ದೊಡ್ಡ ಚಿತ್ರಗಳು ಬಿಡುಗಡೆಯಾಗುವ ವಾರ ತೆಪ್ಪಗಿದ್ದ ಕನ್ನಡ ಚಿತ್ರ ನಿರ್ಮಾಪಕರು ಇನ್ನೊಂದು ಕನ್ನಡ ಚಿತ್ರದ ಮೇಲೆ ತಮ್ಮ ಪ್ರತಾಪ ತೋರಿಸುತ್ತಿರುವುದು  ಶೋಚನೀಯವೇ ಸರಿ! ತ್ರಿವೇಣಿಯಲ್ಲಿ ಎಸ್.ನಾಣಿಯ ಎರಡು ವಾರ ಹಳೆಯ ಚೆಲುವಿನ ಚಿಲಿಪಿಲಿಯನ್ನು ಹೊರದಬ್ಬಿ ಪ್ರೇಮ್ ಕಹಾನಿ ಬಿಡುಗಡೆಯಾಗುತ್ತಿದೆ. ಈ ವಾರ ಅಪರ್ಣಾದಲ್ಲಿ ಮಗಧೀರ ಮತ್ತೆ ತೆರೆಕಾಣುತ್ತಿದೆ. ಮುಸ್ಸಂಜೆ ಗೆಳತಿ ಎಂಬ ಕನ್ನಡ ಚಿತ್ರ ಒಂದೇ ವಾರಕ್ಕೆ ಗೇಟ್ ಪಾಸ್ ಪಡೆದಿದೆ.   ಕಳೆದ ಕೆಲವು ವಾರಗಳಿಂದ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುತ್ತದ್ದ ತ್ರಿಭುವನ್ ಮತ್ತೆ ತೆಲುಗರ ಪಾಲಾಗುತ್ತಿದೆ.  ಅಭಿನಯ, ಮೂವೀಲ್ಯಾಂಡ್ ಚಿತ್ರಮಂದಿರಗಳನ್ನು ಪರಭಾಷೆಯವರಿಗೆ ಬರೆದುಕೊಟ್ಟು ಯಾವುದೋ ಕಾಲವಾಯ್ತು.. ತ್ರಿಭುವನ್ /ಅಭಿನಯ್ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುವ ಎದೆಗಾರಿಕೆ ನಮ್ಮವರಿಗೆ ಯಾಕಿಲ್ಲ?ನಮ್ಮವರ ಪರಾಕ್ರಮವೇನಿದ್ದರೂ ನಮ್ಮ ಕನ್ನಡ ಚಿತ್ರಗಳ ಮೇಲೆಯೇ.

ಈ ವಾರ ಎರಡು ದೊಡ್ಡ ಚಿತ್ರಗಳು ಅಖಾಡಕ್ಕಿಳಿಯುತ್ತಿವೆ. ಶಿವರಾಜ್ ಕುಮಾರ್ – ನವ್ಯಾ ನಾಯರ್ ಅಭಿನಯದ ಸಾಯಿಪ್ರಕಾಶ್ ನಿರ್ದೇಶನದ “ಭಾಗ್ಯದ ಬಳೆಗಾರ” ಮತ್ತು ತಾಜ್ ಮಹಲ್ ಚಂದ್ರು ನಿರ್ದೇಶನದ ಅಜಯ್ ಅಭಿನಯದ “ಪ್ರೇಂ ಕಹಾನಿ” ಈ ವಾರ ಮುಖಾಮುಖಿಯಾಗಲಿವೆ. ಯಾವುದು ಸೋತರೂ ನಷ್ಟ ಕನ್ನಡ ಚಿತ್ರರಂಗಕ್ಕೇ!

PremKahani

Main Theater TRIVENI

Starring Ajay Rao, Sheela
Music          Ilaiyaraja
Lyrics         V. Nagendra Prasad, Kaviraj, K. Kalyan
Director     R Chandru
Producer   KM Vishwanath, G Ravikumar
Music On    Ashwini

BBMain Theater: KAPALI

Starring       Shivrajkumar, Navya Nair
Music            Ilayaraja
Lyrics           V. Nagendra Prasad, Kaviraj
Director       OM Sai Prakash

Producer     Ramesh Kashyap
Music On     Anand Audio

.

2009ರಲ್ಲಿ ಇದುವರೆಗೆ ತೆರೆಕಂಡ ಚಿತ್ರಗಳ ಸಂಖ್ಯೆ 86!

ಮುಂದುವರಿದ ಪ್ರದರ್ಶನ

ನೇರ ಪ್ರದರ್ಶನ

50days

houseful

  • ಹೌಸ್ ಫುಲ್ – ತ್ರಿಭುವನ್ : 8 ನೇ ವಾರ  (ನಾಳೆಯಿಂದ ಇಲ್ಲಿ ತೆಲುಗು ಚಿತ್ರವೊಂದರ ಪ್ರದರ್ಶನ).
  • ರಾಜ್ ದಿ ಶೋ ಮ್ಯಾನ್ – ಸಂತೋಷ್ : 5 ನೇ ವಾರ
  • ಇನಿಯ – ಸಾಗರ್       : 3 ನೇ ವಾರ
  • ವಾಯುಪುತ್ರ - ನರ್ತಕಿ : 2 ನೇ ವಾರ
  • ಹುಷಾರ್ – ಮೇನಕಾ   : 2 ನೇ ವಾರ

ಸಂಯೋಜಿತ ಪ್ರದರ್ಶನ

  • ಲವ್ ಗುರು – ಕೈಲಾಶ್ (3 Shows)  : 9 ನೇ ವಾರ (ಮೊದಲ 6 ವಾರ – ಸಾಗರ್. 1 ವಾರ  ಸಪ್ನಾ)
  • ಹೌಸ ಫುಲ್ಕೈಲಾಶ್ (1 Show)  : 8 ನೇ ವಾರ (ಮೊದಲ 7 ವಾರ – ತ್ರಿಭುವನ್)
  • ಚೆಲುವಿನ ಚಿಲಿಪಿಲಿ -ಸಪ್ನಾ :  3 ನೇ ವಾರ (ಮೊದಲ ಎರಡು ವಾರ -ತ್ರಿವೇಣಿ)

ಮರು ಬಿಡುಗಡೆ

  • ವಂಶಿ – (ಅಭಿನಯ್)

ಗಾಂಧೀನಗರದ ಅತ್ಯಂತ ಹಳೆಯ ಚಿತ್ರ – ಹೌಸ್ ಫುಲ್ (8ನೇ ವಾರದಲ್ಲಿ)

ಹೊರ ನಡೆಯುತ್ತಿರುವ ಚಿತ್ರಗಳು

  • ಹೌಸ್ ಫುಲ್ (ತ್ರಿಭುವನ್ ದಿಂದ. ಒಟ್ಟು ಪ್ರದರ್ಶನ – 7 ವಾರಗಳು + 1 ದಿನ. ಶನಿವಾರ, ಸೆಪ್ಟಂಬರ್ 12ರಂದು ಇಲ್ಲಿ ತೆಲುಗು ಚಿತ್ರ ಬಿಡುಗಡೆ)
  • ಚೆಲುವಿನ ಚಿಲಿಪಿಲಿ (ತ್ರಿವೇಣಿಯಿಂದ. ಒಟ್ಟು ಪ್ರದರ್ಶನ – 2 ವಾರಗಳು. ಸಪ್ನಾಕ್ಕೆ ಸ್ಥಳಾಂತರ)
  • ಮುಸ್ಸಂಜೆ ಗೆಳತಿ (ಅಪರ್ಣಾದಿಂದ. ಒಟ್ಟು ಪ್ರದರ್ಶನ – 1 ವಾರ)

ಮುಂದಿನ ಬದಲಾವಣೆ

Manasaare1

  • ರಜನಿ – ಸೆಪ್ಟೆಂಬರ್ 18 ರಿಂದ – ಅಪರ್ಣಾ
  • ಮನಸಾರೆ – ಸೆಪ್ಟೆಂಬರ್ 25ರಿಂದ
  • ಪರಿಚಯ

ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡದ ಕಲರವ:

  • ರಾಜ್ ದಿ ಶೋ ಮ್ಯಾನ್ : 5 ನೇ ವಾರ (2 shows)
  • ವಾಯುಪುತ್ರ : 2 ನೇ ವಾರ (2 shows)
  • ಭಾಗ್ಯದ ಬಳೆಗಾರ : ಹೊಸ ಬಿಡುಗಡೆ (3 shows)
  • ಪ್ರೇಮ್ ಕಹಾನಿ : ಹೊಸ ಬಿಡುಗಡೆ (3 shows)
  • ಪ್ರೇಮ್ ಕಹಾನಿ : ಹೊಸ ಬಿಡುಗಡೆ (3 shows)
akumar.reach@gmail.com
Readers Comments (0)




Please note: Comment moderation is enabled and may delay your comment. There is no need to resubmit your comment.

Author Info

Author: Akumar

Akumar is a software engineer from Bangalore and an avid movie watcher and reviewer.