ಈ ವಾರ ಯಾವ ಚಿತ್ರವೂ ತೆರೆಕಾಣುತ್ತಿಲ್ಲ!

Published on May 13, 2009 by Akumar   ·   No Comments

ಮೇ 15 ರಿಂದ ಮೇ 21ರ ವರೆಗೆ

ಹೊಸ ಚಿತ್ರಗಳಿಲ್ಲದ ವಾರ!

ಈ ವಾರ ಯಾವುದೇ ಹೊಸ ಚಿತ್ರ ತೆರೆಕಾಣುತ್ತಿಲ್ಲ! 2009ರಲ್ಲಿ ಯಾವ ಚಿತ್ರವೂ ತೆರೆಕಾಣದೇ ಇರುವ ಮೊದಲನೇ ವಾರ ಇದು! ಪ್ರತೀ ವಾರವೂ ಎರಡು, ಮೂರು, ನಾಲ್ಕು ಚಿತ್ರಗಳವರೆಗೂ ತೆರೆಕಂಡಿದ್ದವು. 

ಯಾಕಿರಬಹುದು?

ಬದಲಾಗುತ್ತಿದೆಯೇ ಚಲನ ಚಿತ್ರಗಳ ಪ್ರದರ್ಶನದ ವೇಳೆ ?

ಇತ್ತೀಚಿನ ಕನ್ನಡ ಚಿತ್ರಗಳ ಸೋಲಿಗೆ ಚಲನಚಿತ್ರಗಳ ಪ್ರದರ್ಶನದ ವೇಳೆಯೂ ಕಾರಣವಿರಬಹುದು ಎಂಬುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಅನಿಸಿಕೆ.ಆ ಕಾರಣಕ್ಕಾಗಿಯೇ ಗಾಂಧೀನಗರದ ಚಿತ್ರಮಂದಿರಗಳ ಪ್ರದರ್ಶನದ ವೇಳೆಯನ್ನು ಬದಲಾಯಿಸಲುವಾಣಿಜ್ಯ ಮಂಡಲಿ ನಿರ್ಧರಿಸಿದೆ. ಈ ಮೊದಲು 10.30, 1.30, 4.30 ಮತ್ತು 7.30ಕ್ಕೆ ಚಿತ್ರಗಳು ಪ್ರದರ್ಶನವಾಗುತ್ತಿದ್ದವು. ಈ ವೇಳೆಯನ್ನು 11.15, 2.30, 5.30 ಮತ್ತು 9 ಘಂಟೆಗೆ ಬದಲಾಯಿಸುವಂತೆ ಮಂಡಲಿಯ ಅಧ್ಯಕ್ಷೆ ಜಯಮಾಲಾ ಅವರು ಪ್ರಸ್ತಾಪಿಸಿದ್ದಾರೆ. ಸಧ್ಯಈ ಪ್ರಸ್ತಾಪನೆಗೆ ಬೆಂಗಳೂರು ಪೋಲಿಸ್ ವರಿಷ್ಠಾಧಿಕಾರಿ ಶಂಕರ್ ಬಿದರಿಯವರ ಅಂತಿಮ ಒಪ್ಪಿಗೆಯೊಂದೇ ಬಾಕಿ! ಅದೊಂದು ಸಿಕ್ಕಿ ಬಿಟ್ಟರೆ ಇದೇ ಶುಕ್ರವಾರದಿಂದ (ಮೇ 15) ಈ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ!

ಹೊಸ ವೇಳಾಪಟ್ಟಿಗೆ ಜನ ಒಗ್ಗಿ ಕೊಳ್ಳಲು ಕನಿಷ್ಠ ಒಂದು ವಾರವಾದರೂ ಬೇಕು. ಹಾಗಾಗಿಯೋ ಏನೋ ಹೊಸ ಚಿತ್ರ ಬಿಡುಗಡೆಮಾಡಲು ಯಾರೂ ಮುಂದೆ ಬಂದಿಲ್ಲ. ಇದುಈಗಾಗಲೇ ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳಿಗೂ ಅನುಕೂಲವಾಗಿದೆ!

 

::ಹೊರನಡೆಯುತ್ತಿರುವ ಚಿತ್ರಗಳು::

  • ಮಚ್ಚಾ (ಅಭಿನಯ್‍ದಿಂದ. ಒಟ್ಟು ಪ್ರದರಶನ 2 ವಾರಗಳು)

ಮುಂದುವರಿದ ಪ್ರದರ್ಶನ:


  2 ನೇ ವಾರಕ್ಕೆ - ನರ್ತಕಿ
  2 ನೇ ವಾರಕ್ಕೆ - ಅಪರ್ಣಾ
   3 ನೇ ವಾರಕ್ಕೆ - ಕೈಲಾಶ್ 
  4 ನೇ ವಾರಕ್ಕೆ – ಮೇನಕಾ
  6 ನೇ ವಾರಕ್ಕೆ - ತ್ರಿಭುವನ್
  6 ನೇ ವಾರಕ್ಕೆ - ತ್ರಿವೇಣಿ
7 ನೇ ವಾರಕ್ಕೆ - ಸಂತೋಷ್
 

9 ನೇ ವಾರಕ್ಕೆ - ಕಪಾಲಿ
16 ನೇ ವಾರಕ್ಕೆ – ಸಾಗರ್

ಸಧ್ಯಕ್ಕೆ "ಅಂಬಾರಿ"  ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ! (16 ನೇ ವಾರದಲ್ಲಿ…!)

ggg

  • ಜೊತೆಗಾರ
  • ಕಾರಂಜಿ
  • ದೀನ
  • ದುಬೈ ಬಾಬು
  • ಎದ್ದೇಳು ಮಂಜುನಾಥ

akumar.reach@gmail.com

 

 

 

Readers Comments (0)

Comments are closed.

Author Info

Author: Akumar

Akumar is a software engineer from Bangalore and an avid movie watcher and reviewer.