2008ರ ಬಹು ನಿರೀಕ್ಷಿತ ಸೈಕೋ ಚಿತ್ರ ಈ ವಾರ ತೆರೆಗೆ! ತಾಜ್ ಮಹಲ್‍ಗೆ 100 ದಿನಗಳು!

Published on October 29, 2008 by admin   ·   No Comments
ಅಕ್ಟೋಬರ್ 31 ರಿಂದ ನವೆಂಬರ್ 6 ರವರೆಗೆ
DD

dd

 
ಇದೊಂದು ವಿಶಿಷ್ಟ ಚಿತ್ರ! ನಾಯಕ, ನಾಯಕಿ ಯಾರೆಂಬುದೇ ಗೊತ್ತಿಲ್ಲ! ನಿರ್ಮಾಪಕ, ನಿರ್ದೇಶಕರೆಲ್ಲರೂ ಗಾಂಧೀನಗರಕ್ಕೆ ಹೊಚ್ಚ ಹೊಸಬರು! ಬ್ಯಾನರ್ ಕೂಡ ಹೊಸದು. ಆದರೂ ಈ ಚಿತ್ರ ಯಾವಾಗ ಬರುತ್ತದೆ ಎಂದು ಜನ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ! ಸೂಪರ್ ಸ್ಟಾರ್ ನಟಿಸಿದ ದೊಡ್ಡ ಬ್ಯಾನರ್ ಚಿತ್ರಕ್ಕೂ ಸಿಗದಿರುವ ಭಾರೀ ಪ್ರಚಾರ, ನಿರೀಕ್ಷೆ ಈ ಚಿತ್ರ ಹುಟ್ಟು ಹಾಕಿದೆ. ಹೌದು.. ನಾವು ಮಾತಾಡುತ್ತಿರುವುದು 2008ರ ಅತೀ ನಿರೀಕ್ಷಿತ ಮತ್ತು ವಿಶಿಷ್ಟ ಚಿತ್ರ ಸೈಕೋ ಬಗ್ಗೆ!
 
 
ಚಿತ್ರ ಈ ಪರಿಯ ಪ್ರಚಾರ ಪಡೆಯಲು ಒಂದೇ ಒಂದು ಕಾರಣ ಚಿತ್ರದ ಸಂಗೀತ! ರೇಡಿಯೋ ವಾಹಿನಿಗಳಲ್ಲಿ "ನಿನ್ನಾ ಪೂಜೆಗೆ ಬಂದೆ ಮಾದೇಶ್ವರ" ಎಂಬ ವಿಶಿಷ್ಟ ಕಂಠದ ಹಾಡು ಬರಲಾರಂಭಿದಾಗ  ಮೊದಲಿಗೆ ಎಲ್ಲರೂ ಇದು ಯಾವ ಚಿತ್ರದ ಹಾಡಪ್ಪ ಎಂದು ಆಶ್ಚರ್ಯ ಪಟ್ಟವರೇ. ಸೈಕೋ ಎಂಬ ವಿಚಿತ್ರ ಹೆಸರು ಕೇಳಿದಾಗ ಇದೆಂತಹ ಟೈಟಲ್ ಎಂದು ಮೂದಲಿಸಿದವರೇ. ಆದರೆ ಬರುಬರುತ್ತಾ ಈ ಚಿತ್ರದ ಹಾಡು ಯಾವ ರೀತಿಯ ಮೋಡಿ ಮಾಡಿತೆಂದರೆ ಕೆಲವೇ ದಿನಗಳಲ್ಲಿ ದಾಖಲೆ ಪ್ರಮಾಣದಲ್ಲಿ ಚಿತ್ರದ ಆಡಿಯೋ ಸಿಡಿ, ಕ್ಯಾಸೆಟ್‍ಗಳು ಮಾರಾಟವಾದವು. ಚಿತ್ರದ ಹಾಡುಗಳು ಜನರನ್ನು ಹುಚ್ಚೆಬ್ಬಿಸಿದವು. ಚಿತ್ರದ ನಾಯಕ-ನಾಯಕಿ ಯಾರೆಂಬ ಕುರಿತು ಇಂಟರ್ ನೆಟ್ ತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗಳು ಶುರುವಾದವು. ಈ ಎಲ್ಲಾ ಶ್ರೇಯಸ್ಸು ಚಿತ್ರದ ಸಂಗೀತ ನಿರ್ದೇಶಕ ಮತ್ತು ಗಾಯಕ ರಘು ದೀಕ್ಷಿತ್ ಗೆ ಸಲ್ಲುತ್ತದೆ.  ಕೆಲ ದಿನಗಳ ಹಿಂದೆ ಯಾರಿಗೂ ಗೊತ್ತಿರದ "ರಘು ದೀಕ್ಷಿತ್" ಎಂಬ ಹೆಸರು ಈಗ ಎಲ್ಲರ ಮನೆ ಮನಗಳಲ್ಲಿ ಚಿರಪರಿಚಿತ!  ಚಿತ್ರ ಓಡುತ್ತದೋ ಬಿಡುತ್ತದೋ ಬೇರೆ ವಿಷಯ. ಆದರೆ ನಾಯಕ-ನಾಯಕಿ ಯಾರೆಂಬುದನ್ನೂ ತಿಳಿಸದೇ ಕೇವಲ ಹಾಡುಗಳಿಂದ ಮತ್ತು ವಿಶಿಷ್ಟತೆಯಿಂದ ಕೂಡಿರುವ ಪೋಸ್ಟರ್‍ಗಳಿಂದಲೇ ಚಿತ್ರವೊಂದು ಈ ಮಟ್ಟದ ನಿರೀಕ್ಷೆ ಹುಟ್ಟು ಹಾಕಬಹುದು ಎಂಬ ಹೊಸ ಪಾಠವನ್ನು ಗಾಂಧೀನಗರದ ಚಿತ್ರ ಬ್ರಹ್ಮರಿಗೆ ಕಲಿಸಿದ ಕೀರ್ತಿ ಸೈಕೋಗೆ ಸಲ್ಲುತ್ತದೆ.
 
 
 
ಅಂದ ಹಾಗೆ ನಿಮ್ಮ ಗಂಧದಗುಡಿ ಸೈಕೋ ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನದ ವೀಕ್ಷಕ ವಿವರಣೆಗೆ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ. ಇದೇ ಶುಕ್ರವಾರ ಮೇನಕಾ ಸೇರಿದಂತೆ ರಾಜ್ಯಾದ್ಯಂತ ಮಾತ್ರವಲ್ಲದೇ ಅಮೇರಿಕಾ, ದುಬೈ,ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆಯಾಗುತ್ತಿರುವ ಸೈಕೋ ಚಿತ್ರಕ್ಕೆ ಗಂಧದಗುಡಿ ಶುಭ ಹಾರೈಸುತ್ತದೆ.
 
 
ಸೈಕೋ ಚಿತ್ರದ ಸಂಪೂರ್ಣ ಮಾಹಿತಿ, LIVE REPORT ಮತ್ತು ವಿಮರ್ಶೆಗಳಿಗಾಗಿ ಗಂಧದಗುಡಿ ಚರ್ಚಾವೇದಿಕೆಗೆ ಭೇಟಿ ಕೊಡಿ. LIVE REPORT ನಲ್ಲಿ ನೀವೂ ಪಾಲ್ಗೊಳ್ಳಿ. ಈ ಶುಕ್ರವಾರ ಆರಂಭವಾಗಲಿರುವ ಸೈಕೋ ಜಾತ್ರೆಯಲ್ಲಿ ಭಾಗವಹಿಸಿ ಆನಂದಿಸಿ!
 
 
 
 
ಈ ವಾರದ ಮತ್ತೊಂದು ಚಿತ್ರ - ನನ್ನುಸಿರೇ.ಮಖ್ಯ ಚಿತ್ರಮಂದಿರ - ಅಪರ್ಣಾ
 
ಗಣೇಶ ಕಿರುತೆರೆಯಿಂದ ಹಿರಿತೆರೆಗೆ ಬಂದು ಯಶಸ್ವಿ ಆಗಿದ್ದೇ ತಡ, ಕಿರು ತೆರೆಯ
ನಿರೂಪಕರ, ಕಲಾವಿದರು ಒಬ್ಬರಾದ ಮೇಲೆ ಒಬ್ಬರಂತೆ ಕನ್ನಡ ಬೆಳ್ಳಿ ತೆರೆಯ ಮೇಲೆ ತಮ್ಮ
ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಈಗ ಇವರ ಸಾಲಿಗೆ ಹೊಸ ಸೇರ್ಪಡೆ ಉದಯ ಟಿವಿ
ನಿರೂಪಕ ರಾಹುಲ್! ಚಿತ್ರದ ಹೆಸರು ನನ್ನುಸಿರೇ!
 
ಚಿತ್ರಕ್ಕೆ ದಕ್ಷಿಣ ಭಾರತದ ವಿಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜಾ ಅವರ ಸೋದರನ ಮಗ (ತಮಿಳು ಚಿತ್ರ ನಿರ್ದೇಶಕ ಗಂಗೈ ಅಮರನ್ ಅವರ ಮಗ) ಪ್ರೇಂ‍ಜೀ ಗಂಗೈ ಅಮರನ್ ಸಂಗೀತ ನೀಡಿದ್ದಾರೆ. ಚಿತ್ರದ ಆಡಿಯೋ ಬಗ್ಗೆ ಈಗಾಗಲೇ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ, ಸಂಜೆ ಬೀಚಿನಲಿ ಮತ್ತೋ ಮತ್ತು ಹಾಡು ವಿಶಿಷ್ಟವಾಗಿದ್ದು ಜನಪ್ರಿಯವಾಗಿದೆ.
 
 
ನನ್ನುಸಿರೇ ಚಿತ್ರದ ಸಂಪೂರ್ಣಆಡಿಯೋ ವಿಮರ್ಶೆ - ನಿಮ್ಮ ಗಂಧದಗುಡಿಯಲ್ಲಿ. ಇಲ್ಲಿ ಕ್ಲಿಕಿಸಿ.
 
ನನ್ನುಸಿರೇ ಚಿತ್ರಕ್ಕೆ ನಮ್ಮ ಶುಭ ಹಾರೈಕೆಗಳು.
 
 
 
::ಹೊರನಡೆಯುತ್ತಿರುವ ಕನ್ನಡ ಚಿತ್ರಗಳು::
 
  • ಹೀಗೂ ಉಂಟೇ? (ಅಪರ್ಣಾದಿಂದ. ಒಟ್ಟು ಪ್ರದರ್ಶನ: 1 ವಾರ)
  • ಮೊಗ್ಗಿನ ಮನಸು (ಸಾಗರ್ ಚಿತ್ರಮಂದಿರದಿಂದ. ಒಟ್ಟು ಪ್ರದರ್ಶನ: 15 ವಾರಗಳು. (107 ದಿನಗಳು) ) . ಹಿಂದಿ ಚಿತ್ರ ಗೋಲ್ ಮಾಲ್ ಇಲ್ಲಿ ಬಿಡುಗಡೆಯಾಗುತ್ತಿದೆ. ಬರುವ ವಾರ ಇಲ್ಲಿ ವಿಜಯ್ ಅಭಿನಯದ ಸ್ಲಂ ಬಾಲ ಬಿಡುಗಡೆಯಾಗಲಿದೆ.
  • ಸಂಗಾತಿ (ಕಪಾಲಿಯಿಂದ. ಒಟ್ಟು ಪ್ರದರ್ಶನ: 2 ವಾರಗಳು). ಇಲ್ಲಿ ಒಂದು ವಾರದ ಮಟ್ಟಿಗೆ "ಗಜ" ಚಿತ್ರ ಪ್ರದರ್ಶನಗೊಳ್ಳಲಿದೆ. ಬರುವ ವಾರ (ಅಕ್ಟೋಬರ್ 6) ಇಲ್ಲಿ ನವಗ್ರಹ ಬಿಡುಗಡೆಯಾಗಲಿದೆ.

nn

 

  2 ನೇ ವಾರಕ್ಕೆ – ತ್ರಿವೇಣಿ
3 ನೇ ವಾರಕ್ಕೆ – ಅಭಿನಯ್
  5 ನೇ ವಾರಕ್ಕೆ – ಸಂತೋಷ್
 

2
6 ನೇ ವಾರಕ್ಕೆ – ನರ್ತಕಿ

mm

15 ನೇ ವಾರಕ್ಕೆ – ಕೈಲಾಷ್  (ಸಂತೋಷ್  ಮೊದಲ 10 ವಾರಗಳು)

ಸಂಭ್ರಮದ 100 ದಿನಗಳು!

ಸಧ್ಯಕ್ಕೆ ತಾಜ್ ಮಹಲ್  ಕೆಂಪೇಗೌಡ ರಸ್ತೆಯ ಅತ್ಯಂತ ಹಳೆಯ ಚಿತ್ರ! (100 ದಿನಗಳು!)

 

ff

  • ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ (ಗುರುಕಿರಣ್)

ggg

  • ನವಗ್ರಹ – ನವೆಂಬರ್ 6 ರಿಂದ (ಕಪಾಲಿ)
  • ಸ್ಲಂ ಬಾಲ - ನವೆಂಬರ್ 7 ರಿಂದ (ಸಾಗರ್)
  • ನಂ ಯಜಮಾನ್ರು

akumar.reach@gmail.com

Readers Comments (0)




Please note: Comment moderation is enabled and may delay your comment. There is no need to resubmit your comment.

Author Info